ಕಾಂಗ್ರೆಸಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹೇಳಿದ್ದನ್ನು ಕೇಳ್ತಾರೆ. ಪರಮೇಶ್ವರ್ ಹೇಳಿದ್ರು ಕೇಳ್ತಾರೆ ಎಂದು ಕೈ ಮುಖಂಡರೋರ್ವರು ಹೇಳಿದ್ದಾರೆ.
ಮಾಗಡಿ (ಸೆ.27): ಬಿಜೆಪಿ ಪಕ್ಷದಲ್ಲಿ ಸರ್ವಾಧಿಕಾರಿ ಧೋರಣೆ ಇದೆ ಎಂದು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ವಾಗ್ದಾಳಿ ನಡೆಸಿದರು.
ಮಾಗಡಿ ಕಾಂಗ್ರೆಸ್ ಮುಖಂಡರೊಬ್ಬರ ಮನೆಯ ಅವರಣದಲ್ಲಿ ಏರ್ಪಡಿಸಿದ್ದ ಯುವ ಕಾಂಗ್ರೆಸ್ ಸದಸ್ಯರ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲೋಕಸಭೆಯಲ್ಲಿ 25 ಬಿಜೆಪಿ ಸಂಸದರು ಇದ್ದಾರೆ. ರಾಜ್ಯದ ಅಭಿವೃದ್ಧಿಯ ಬಗ್ಗೆ ಒಬ್ಬರು ಸಹ ತುಟಿ ಬಿಚ್ಚಲ್ಲ. ಅವರಿಗೆ ಪ್ರಧಾನ ಮಂತ್ರಿ ಮೋದಿಯವರ ಭಯ. ಯಾವ ಸಂಸದರೇ ಆಗಲಿ ಧೈರ್ಯವಾಗಿ ಪ್ರಶ್ನೆ ಮಾಡುವ ಹಾಗಿಲ್ಲ ಎಂದು ಟೀಕಿಸಿದರು.
undefined
ನಾವು ಪ್ರಜಾಪ್ರಭುತ್ವದಲ್ಲಿ ರಾಜಕಾರಣ ಮಾಡುತ್ತಿದ್ದರೂ ಸಹ ಸರ್ವಾಧಿಕಾರಿ ಧೋರಣೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ತೋರಿಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಜಿ.ಪರಮೇಶ್ವರ್ ಹೆಚ್ಚು ಮಾತನಾಡಿದರೆ ಡಿ.ಕೆ.ಶಿವಕುಮಾರ್ ಕೇಳುತ್ತಾರೆ. ಡಿ.ಕೆ.ಶಿವಕುಮಾರ್ ಮಾತನಾಡಿದರೆ ಸಿದ್ದರಾಮಯ್ಯ ಕೇಳುತ್ತಾರೆ. ನಮ್ಮ ನಾಯಕರಿಗೆ ಕೇಂದ್ರದಲ್ಲಿ ಪ್ರಶ್ನೆ ಮಾಡುವ ಶಕ್ತಿ ಇದೆ ಎಂದರು.
ಅಕ್ಟೋಬರ್ ಮೊದಲ ವಾರ ಸಚಿವ ಸಿ.ಟಿ.ರವಿ ರಾಜೀನಾಮೆ ? ..
ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿಆಗುತ್ತಿದೆ. ಅನುದಾನ ಬಿಡುಗಡೆ ಮಾಡಿ ಎಂದು ಮೋದಿ ಅವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇಳಿದರೆ 6 ತಿಂಗಳು ಮುಖ್ಯಮಂತ್ರಿಗಳನ್ನು ಮೋದಿ ಫೋನ್‌ನಲ್ಲೂ ಮಾತನಾಡಿಸುವುದಿಲ್ಲ. ಅಂತಹ ಸ್ಥಿತಿ ಬಿಜೆಪಿಯಲ್ಲಿದೆ. ಯಡಿಯೂರಪ್ಪ ಉಸಿರು ಕಟ್ಟುವ ಪರಿಸ್ಥಿತಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ. ಸಿಎಂ ಗಾದಿಯಿಂದ ಇಳಿಸಿ ಬಿಡುತ್ತೇವೆ ಎಂದು ಬಿಜೆಪಿ ಹೈಕಮಾಂಡ್ ಬೆದರಿಕೆ ಹಾಕುತ್ತಿರುವುದರಿಂದ ಮುಖ್ಯಮಂತ್ರಿಗಳ ಮಾತನ್ನು ಅಧಿಕಾರಿಗಳು ಕೇಳುತ್ತಿಲ್ಲ ಎಂದು ಬಾಲಕೃಷ್ಣ ಹೇಳಿದರು.
ಅಭಿಯಾನದ ಮೂಲಕ ತಾಲೂಕಿನಲ್ಲಿ 5 ಸಾವಿರ ಯುವಕರ ಸದಸ್ಯತ್ವ ಮಾಡಬೇಕು. ಎಲ್ಲ ಯುವಕರು ವೈಮನಸ್ಸನ್ನು ಬಿಟ್ಟು ಒಗ್ಗಟ್ಟಾಗಿ ದುಡಿಯಬೇಕು. ಯುವಕರೇ ಪಕ್ಷದ ಶಕ್ತಿಯಾಗಿದ್ದು, ಪಕ್ಷ ಸಂಘಟನೆ ಮಾಡಲು ಶ್ರಮಿಸಬೇಕು. ನಿಮಗೆ ಅಗತ್ಯವಿರುವ ಎಲ್ಲ ಸಹಕಾರವನ್ನು ನೀಡುತ್ತೇವೆ. ಬೂತ್ ಮಟ್ಟದಲ್ಲಿ ಜನರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಬೇಕು ಎಂದರು.