ಅಂಚೆ ಮೂಲಕ ಕಳುಹಿಸಲಾಗಿದ್ದ ಲಕೋಟೆ ಹಾಗೂ ದಾಖಲಾತಿಗಗಳು ಅಂಚೆ ಇಲಾಖೆಯಿಂದ ಸಂಬಂಧಪಟ್ಟವರಿಗೆ ತಲುಪದೆ ಕಾಡಿನಲ್ಲಿ ಎಸೆದಿರುವ ಪ್ರಕರಣ ತಾಲೂಕಿನ ಸೂರ್ಲಬ್ಬಿ ಅಂಚೆ ಕಚೇರಿಯಲ್ಲಿ ಬೆಳಕಿಗೆ ಬಂದಿದೆ.
ಮಡಿಕೇರಿ(ಏ.26): ಅಂಚೆ ಮೂಲಕ ಕಳುಹಿಸಲಾಗಿದ್ದ ಲಕೋಟೆ ಹಾಗೂ ದಾಖಲಾತಿಗಗಳು ಅಂಚೆ ಇಲಾಖೆಯಿಂದ ಸಂಬಂಧಪಟ್ಟವರಿಗೆ ತಲುಪದೆ ಕಾಡಿನಲ್ಲಿ ಎಸೆದಿರುವ ಪ್ರಕರಣ ತಾಲೂಕಿನ ಸೂರ್ಲಬ್ಬಿ ಅಂಚೆ ಕಚೇರಿಯಲ್ಲಿ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಪೋಸ್ವ್‌ಮ್ಯಾನ್ ಆಗಿದ್ದ ಎ.ಯು. ಮಹೇಶ್ ಎಂಬಾತನನ್ನು ಸೋಮವಾರಪೇಟೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಕ್ವಾರಂಟೈನ್ ಸೀಲ್: ಇಡೀ ಕೈಗೆ ನಂಜು, ಊತ
ಆಧಾರ್ ಕಾರ್ಡ್‌ಗಳು, ಬ್ಯಾಂಕ್ ಚೆಕ್ ಪುಸ್ತಕ, ಶಾಲಾ ದಾಖಲಾತಿಗಳು, ಎಲ್‌ಐಸಿ ದಾಖಲೆಗಳು, ಯೋಧರ ದಾಖಲಾತಿಗಳು ಸೂರ್ಲಬ್ಬಿ ಗ್ರಾಮದ ಮಾಂದಲಪಟ್ಟಿರಸ್ತೆಯಲ್ಲಿ ಅದೇ ಗ್ರಾಮದ ನಿವಾಸಿ ಜಯಂತಿ ಎಂಬವರಿಗೆ ಸಿಕ್ಕಿದ್ದು, ಈ ಮಾಹಿತಿಯನ್ನು ಕೊಡಗು ಸೇವಾ ಕೇಂದ್ರದ ಪದಾಧಿಕಾರಿಗಳ ಗಮನಕ್ಕೆ ತರಲಾಯಿತು.
ಸೇವಾ ಕೇಂದ್ರದ ಸಂಚಾಲಕರಾದ ತೇಲಪಂಡ ಪ್ರಮೋದ್ ಸೋಮಯ್ಯ ಸೋಮವಾರಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೋಸ್ವ್‌ಮ್ಯಾನ್ ಮಹೇಶ್ ಸೇವೆ ಸಲ್ಲಿಸುತ್ತಿದ್ದ ಸಂದರ್ಭ ದಾಖಲಾತಿಗಳನ್ನು ವಿತರಣೆ ಮಾಡದೆ ಕಾಡಿನಲ್ಲಿ ಎಸೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಠಾಣಾಧಿಕಾರಿ ಶಿವಶಂಕರ್ ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕೊಡಗಿನ ಹೋಂಮೇಡ್ ವೈನ್‌ಗೆ ಹೆಚ್ಚಿದ ಡಿಮ್ಯಾಂಡ್..!
2017ರಿಂದಲೂ ಹೀಗೆ ಆಗುತ್ತಿದೆ. ಆದರೂ ಜನರು ಅಂಚೆ ಇಲಾಖೆಯನ್ನು ನಂಬಿದ್ದರು. ಗ್ರಾಮದ ಅನೇಕರಿಗೆ, ಗ್ರಾಮದ ಶಾಲೆಗಳಿಗೆ ಸರ್ಕಾರದಿಂದ ಬರಬೇಕಾದ ಅನೇಕ ಪತ್ರಗಳು ಇನ್ನೂ ರವಾನೆಯಾಗಿಲ್ಲ ಎಂದು ತಿಳಿದ ಗ್ರಾಮಸ್ಥರು ತೀವ್ರ ಆತಂಕಕ್ಕೆ ಈಡಾಗಿದ್ದಾರೆ. ಶಾಲಾ ವಿದ್ಯಾರ್ಥಿಗಳಿಗೆ ಬರಬೇಕಾಗಿದ್ದ ಸ್ಕಾಲರ್‌ಶಿಪ್ ಹಣವೂ ದೊರಕದೆ ಇರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರಾದ ಸನ್ನಿ ತಿಳಿಸಿದ್ದಾರೆ.
ಕಳ್ಳಭಟ್ಟಿ ಕುಡಿಯೋರಿಗೆ ಸಚಿವ ನಾಗೇಶ್ ಸಲಹೆ..!
ಸೂರ್ಲಬ್ಬಿ,ಕುಂಬಾರಗಡಿಗೆ, ಮಂಕ್ಯ, ಕಿಕ್ಕರಳ್ಳಿ, ಗರ್ವಾಲೆಯಂತಹ ಗ್ರಾಮಗಳಲ್ಲಿ ಅಂಚೆ ಇಲಾಖೆಯನ್ನೇ ಜನರು ನಂಬಿಕೊಂಡಿದ್ದರು. ಇಲಾಖೆ ಆರ್ಥಿಕವಾಗಿ ನಷ್ಟದಲ್ಲಿ ಇದ್ದರೂ ಗ್ರಾಮೀಣ ಸೇವೆಯನ್ನು ನಿಲ್ಲಿಸಿರಲಿಲ್ಲ. ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.