ಹಳ್ಳದಲ್ಲಿ ಬಿದ್ದು ಇಬ್ಬರ ಸಾವು| ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಬೂದುಗುಪ್ಪ ಗ್ರಾಮದ ಬಳಿ ನಡೆದ ದುರ್ಘಟನೆ| ಹಳ್ಳದಲ್ಲಿನ ಭಾರಿ ಆಳವಾದ ನೀರಿರುವ ತಗ್ಗಿಗೆ ಕಾಲು ಜಾರಿ ಬಿದ್ದ ಅಮರನಾಥ ರೆಡ್ಡಿ| ಬಾಲಕನ ರಕ್ಷಣೆಗೆ ಮುಂದಾದ ಡಿ. ನಾರಾಯಣರೆಡ್ಡಿ| ಆದರೆ ಭಾರಿ ಆಳವಾದ ಕುಣಿಯಿದ್ದರಿಂದ ಮೇಲೆ ಬರಲಾಗದೆ ಆ ಮಗುವಿನ ಜತೆಗೆ ಆ ವ್ಯಕ್ತಿಯೂ ಸಾವು|
ಸಿರುಗುಪ್ಪ(ಏ.26): ತಾಲೂಕಿನ ಬೂದುಗುಪ್ಪ ಗ್ರಾಮದ ಬಳಿ ಹರಿಯುವ ಹಿರೇಹಳ್ಳ ದಾಟಿದ ದನಗಳನ್ನು ಕರೆತರಲು ಹೋಗಿ ಆಳವಾದ ಕುಣಿಯಲ್ಲಿ ಬಿದ್ದು ಇಬ್ಬರು ಸಾವಿಗೀಡಾಗಿರುವ ಘಟನೆ ಶುಕ್ರವಾರ ನಡೆದಿದೆ. (13) ಮತ್ತು ಈತನ ಮಾವ ಡಿ. ನಾರಾಯಣರೆಡ್ಡಿ(38) ಮೃತಪಟ್ಟ ದುರ್ದೈವಿಗಳು.ಅಮರನಾಥ ರೆಡ್ಡಿ
ಮೃತ ಬಾಲಕ ಅಮರನಾಥರೆಡ್ಡಿ ಮೂಲತಃ ಬಳ್ಳಾರಿ ತಾಲೂಕಿನ ಗುಡುದೂರು ಗ್ರಾಮದ ನಿವಾಸಿಯಾಗಿದ್ದು, ರಜೆಗಾಗಿ ತನ್ನ ಅಜ್ಜಿ ಗ್ರಾಮವಾದ ತಾಲೂಕಿನ ಬೂದಗುಪ್ಪ ಗ್ರಾಮಕ್ಕೆ ಆಗಮಿಸಿದ್ದನು. ಜಮೀನಿನಲ್ಲಿ ದನಗಳನ್ನು ಕಾಯುತ್ತಿದ್ದ ವೇಳೆಯಲ್ಲಿ ದನಗಳು ಹಳ್ಳವನ್ನು ದಾಟಿವೆ. ದನಗಳನ್ನು ವಾಪಸ್ ಕರೆತರಲು ಹಳ್ಳವನ್ನು ದಾಟಲು ತೆರಳಿದ್ದಾನೆ.
ಇಡೀ ಜಗತ್ತಿಗೆ ಕೊರೋನಾ ಆತಂಕವಾದ್ರೆ ಬಳ್ಳಾರಿಗೆ ಡೆಂಗ್ಯೂ ಕಾಟ: ಆತಂಕದಲ್ಲಿ ಜನತೆ
ಈ ವೇಳೆ ಹಳ್ಳದಲ್ಲಿನ ಭಾರಿ ಆಳವಾದ ನೀರಿರುವ ತಗ್ಗಿಗೆ ಕಾಲು ಜಾರಿ ಬಿದ್ದ ಹಿನ್ನೆಲೆಯಲ್ಲಿ ಬಾಲಕ ಹೊರಬರಲು ಸಾಧ್ಯವಾಗದೆ ಇರುವುದನ್ನು ಕಂಡ ಅವರ ಮಾವ ಇದೇ ಗ್ರಾಮದ ನಿವಾಸಿ ಡಿ. ನಾರಾಯಣರೆಡ್ಡಿ ರಕ್ಷಣೆ ಮಾಡಲು ಮುಂದಾಗಿದ್ದಾನೆ. ಆದರೆ ಭಾರಿ ಆಳವಾದ ಕುಣಿಯಿದ್ದರಿಂದ ಮೇಲೆ ಬರಲಾಗದೆ ಆ ಮಗುವಿನ ಜತೆಗೆ ಆ ವ್ಯಕ್ತಿಯೂ ಮೃತ ಪಟ್ಟಿದ್ದಾನೆ. ಮೃತ ನಾರಾಯಣರೆಡ್ಡಿ ಅವರಿಗೆ ಇಬ್ಬರು ಪುತ್ರರು, ಪತ್ನಿ ಇದ್ದಾರೆ. ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪಿಎಸ್‌ಐ ತಿಳಿಸಿದ್ದಾರೆ.