ಕ್ವಾರಂಟೈನ್ ಸೀಲ್: ಇಡೀ ಕೈಗೆ ನಂಜು, ಊತ

By Kannadaprabha News  |  First Published Apr 26, 2020, 9:11 AM IST

ಕೈಗೆ ಸೀಲ್‌ ಹಾಕಿ ಹೋಮ್‌ ಕ್ವಾರಂಟೈನ್‌ನ​ಲ್ಲಿದ್ದ ಶನಿವಾರಸಂತೆಯ ವ್ಯಕ್ತಿಯ ಕೈ ನಂಜು ಆವರಿಸಿ ಕೈ ಸಂಪೂರ್ಣವಾಗಿ ಊದಿಕೊಂಡಿದೆ. ಕಳೆದ 10 ದಿನಗಳ ಹಿಂದೆ ಶನಿವಾರಸಂತೆ ನಿವಾಸಿ ಪೊಲೀಸ್‌ ಅನುಮತಿ ಪಡೆದು ಮಂಗಳೂರಿಗೆ ಹೋಗಿದ್ದರು.


ಮಡಿಕೇರಿ(ಏ.26): ಕೈಗೆ ಸೀಲ್‌ ಹಾಕಿ ಹೋಮ್‌ ಕ್ವಾರಂಟೈನ್‌ನ​ಲ್ಲಿದ್ದ ಶನಿವಾರಸಂತೆಯ ವ್ಯಕ್ತಿಯ ಕೈ ನಂಜು ಆವರಿಸಿ ಕೈ ಸಂಪೂರ್ಣವಾಗಿ ಊದಿಕೊಂಡಿದೆ. ಕಳೆದ 10 ದಿನಗಳ ಹಿಂದೆ ಶನಿವಾರಸಂತೆ ನಿವಾಸಿ ಪೊಲೀಸ್‌ ಅನುಮತಿ ಪಡೆದು ಮಂಗಳೂರಿಗೆ ಹೋಗಿದ್ದರು.

ಈ ಹಿನ್ನೆಲೆಯಲ್ಲಿ ಅವರನ್ನು ಸುರಕ್ಷತೆ ದೃಷ್ಟಿ​ಯಿಂದ ಹೋಮ್‌ ಕ್ವಾರಂಟೈನ್‌ನ​ಲ್ಲಿಟ್ಟು ಅವರ ಕೈಗೆ ಸೀಲ್‌ ಮಾಡಲಾಗಿತ್ತು. ಇದೀಗ ಅವರ ಕೈಗೆ ಸೀಲ್‌ ಮಾಡಿರುವುದರಿಂದ ಕೈ ತೋಳು ಭಾಗದ ವರೆಗೂ ನಂಜು ಆವರಿಸಿದೆ. ಕೈ ಸಂಪೂರ್ಣವಾಗಿ ಊದಿಕೊಂಡಿದೆ. ವ್ಯಕ್ತಿ 10 ದಿನಗಳಿಂದ ಹೋಮ್‌ ಕ್ವಾರಂಟೈನ್‌ನಲ್ಲಿರುವುದರಿಂದ ಆತನ ಮನೆಯವರು ವೈದ್ಯರಲ್ಲಿಗೆ ಕರೆದುಕೊಂಡು ಹೋಗಿಲ್ಲ.

Latest Videos

undefined

ಕೊಡಗಿನ ಹೋಂಮೇಡ್‌ ವೈನ್‌ಗೆ ಹೆಚ್ಚಿದ ಡಿಮ್ಯಾಂಡ್..‌!

ಈ ಬಗ್ಗೆ ಶನಿವಾರಸಂತೆ ವೈದ್ಯ ಡಾ. ಶಿವಪ್ರಕಾಶ್‌, ಕ್ವಾರಂಟೈನ್‌ನ​ಲ್ಲಿರುವ ವ್ಯಕ್ತಿಯ ಕೈಗೆ ನಮೂದಿಸುವ ಸೀಲ್‌ನಲ್ಲಿ ಲಘು ಮಿಶ್ರಿತ ರಾಸಾಯನಿಕ ಒಳಗೊಂಡಿರುತ್ತದೆ. ಕೆಲವರಿಗೆ ರಾಸಾ​ಯನಿಕ ವಸ್ತುಗಳಿಂದ ಅಲರ್ಜಿ ಸಮಸ್ಯೆಯಾಗುತ್ತದೆ.

ಕಳ್ಳಭಟ್ಟಿ ಕುಡಿಯೋರಿಗೆ ಸಚಿವ ನಾಗೇಶ್ ಸಲಹೆ..!

ಇದರಿಂದ ಕೈ ಸ್ವಲ್ಪ ಊದಿಕೊಳ್ಳುತ್ತದೆ. ಅಷ್ಟೇ ಇದರಿಂದ ಕೈಗೆ ಯಾವುದೇ ಸಮಸ್ಯೆಯಾಗದು ಮತ್ತು ವ್ಯಕ್ತಿ ಸೀಲ್‌ ಹಾಕಿಸಿಕೊಂಡ ಮೇಲೆ ಕೈಗೆ ಸಮಸ್ಯೆಯಾಗುವ ಸಂದರ್ಭ ಕೂಡಲೇ ಸಂಬಂಧಪಟ್ಟವೈದ್ಯರು, ಆರೋಗ್ಯ ಕಾರ್ಯಕರ್ತೆಯರಿಗೆ ಮಾಹಿತಿ ನೀಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

click me!