ಜಿಲ್ಲೆಯಲ್ಲಿ ಹೊಸ ಕೊರೋನಾ ಪ್ರಕರಣ ತಿಂಗಳಾದರೂ ಪತ್ತೆಯಾಗದ ಹಿನ್ನೆಲೆ ಕೊಡಗನ್ನು ಗ್ರೀನ್ ಝೋನ್ ಪಟ್ಟಿಗೆ ಸೇರಿಸಲಾಗಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಲಾಕ್ ಡೌನ್‌ನಲ್ಲಿ ಮತ್ತಷ್ಟುವಿನಾಯಿತಿ ನೀಡಲಿದೆ.
ಮಡಿಕೇರಿ(ಏ.30): ಜಿಲ್ಲೆಯಲ್ಲಿ ಹೊಸ ಕೊರೋನಾ ಪ್ರಕರಣ ತಿಂಗಳಾದರೂ ಪತ್ತೆಯಾಗದ ಹಿನ್ನೆಲೆ ಕೊಡಗನ್ನು ಗ್ರೀನ್ ಝೋನ್ ಪಟ್ಟಿಗೆ ಸೇರಿಸಲಾಗಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಲಾಕ್ ಡೌನ್‌ನಲ್ಲಿ ಮತ್ತಷ್ಟುವಿನಾಯಿತಿ ನೀಡಲಿದೆ.
ಜಿಲ್ಲಾಡಳಿತ ಅಗತ್ಯ ವಸ್ತುಗಳ ಖರೀದಿಗೆ ವಾರದ ನಾಲ್ಕು ದಿನ ನಿಗದಿಪಡಿಸಿದ್ದರೂ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಬುಧವಾರ ಜನ ದಟ್ಟಣೆ ವಿರಳವಾಗಿತ್ತು.
ಮನೆಕೆಲಸದವನಿಗೆ ಕಿರುಕುಳ: ಗುಡ್ಡೆಯಲ್ಲಿ ಉಳಿದು, ಗೇರುಹಣ್ಣು ತಿಂದು ಬದುಕಿದ
ವಾರದ ಭಾನುವಾರ, ಸೋಮವಾರ, ಬುಧವಾರ, ಶುಕ್ರವಾರ ಸೇರಿ 4 ದಿನ ಸಾಮಗ್ರಿ ಖರೀದಿಗೆ ಅವಕಾಶ ನೀಡಲಾಗಿದೆ. ಬೆಳಗ್ಗೆ 6ರಿಂದ ಸಂಜೆ 4 ಗಂಟೆಯ ವರೆಗೆ ಸಮಯವನ್ನು ವಿಸ್ತರಿಸಲಾಗಿದೆ. ಈ ಹಿನ್ನೆಲೆ ಭಾನುವಾರ, ಸೋಮವಾರ ಎರಡು ದಿನ ಸಾಮಗ್ರಿಗಳ ಖರೀದಿಗಾಗಿ ಬೀದಿಗಿಳಿದಿದ್ದ ಭಾನುವಾರವೂ ಅವಕಾಶ ನೀಡಿರುವ ಕಾರಣ ಬುಧವಾರ ವಿನಾಯಿತಿ ಇದ್ದರೂ ಅನವಶ್ಯಕವಾಗಿ ಮನೆಯಿಂದ ಹೊರಗೆ ಬಾರದೆ ಇರುವ ಮೂಲಕ ಲಾಕ್‌ಡೌನ್‌ಗೆ ಸ್ಪಂದಿಸಿದ್ದಾರೆ.
ಉಡುಪಿ: ತಿಂಗಳಾದರೂ ಘೋಷಣೆಯಾಗಿಲ್ಲ ಹಸಿರು ವಲಯ
ಇದರಿಂದ ಮಡಿಕೇರಿ ಸೇರಿದಂತೆ ಜಿಲ್ಲಾದ್ಯಂತ ವಾಹನ ಸಂಚಾರ ಕೂಡ ಕಡಿಮೆಯಾಗಿದ್ದು, ಬೇಕರಿ, ದಿನಸಿ, ತರಕಾರಿ ಅಂಗಡಿಗಳು ಸೇರಿದಂತೆ ವಿವಿಧ ಮಳಿಗೆಗಳು ಓಪನ್ ಇದ್ದರೂ ನಗರ ಪ್ರದೇಶದಲ್ಲಿ ಜನಸಂಖ್ಯೆ ವಿರಳವಾಗಿ ಕಂಡು ಬಂದಿದ್ದು, ಹಸಿರು ವಲಯ ಮೊದಲ ದಿನಾರಂಭದಲ್ಲಿ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ. ಸಾಮಗ್ರಿ ಖರೀದಿಗೆ ಸಮಯ ವಿಸ್ತರಣೆ ಮಾಡಲಾಗಿರುವ ಹಿನ್ನೆಲೆಯಲ್ಲಿ ಜನ ಕೂಡ ನಿಧಾನವಾಗಿ ನಗರಗಳತ್ತ ಬಂದಿದ್ದರಿಂದ ಬಹುತೇಕ ಕಡೆ ಲಾಕ್‌ಡೌನ್ ವಾತಾವರಣ ಕಂಡುಬಂತು.
ಇತ್ತ ಲಾಕ್‌ಡೌನ್ ಬೆನ್ನಲ್ಲೇ ಮುಚ್ಚಿಹೋಗಿದ್ದ ಹೋಟೆಲ್ ಉದ್ಯಮ ಕೂಡ ಪುನರ್ ಆರಂಭಗೊಂಡಿದ್ದು, ಇದನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಜನ ಇದೀಗ ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಹಸಿರು ವಲಯ ಪಟ್ಟಿಗೆ ಕೊಡಗು ಸೇರಿರುವ ಹಿನ್ನೆಲೆ ಲಾಕ್‌ಡೌನ್‌ನಲ್ಲಿ ಹೆಚ್ಚುವರಿ ವಿನಾಯಿತಿ ನೀಡಿರುವ ಜಿಲ್ಲಾಡಳಿತ ಹೊಟೇಲ್ ವ್ಯಾಪಾರಕ್ಕೂ ಅವಕಾಶ ನೀಡಿದ್ದು, ಪಾರ್ಸೆಲ್ ವ್ಯವಸ್ಥೆಗೆ ಅನುಮತಿ ನೀಡಲಾಗಿದೆ.
ಬೆಂಗಳೂರಲ್ಲಿ ದಾಖಲೆಯ ಮಳೆ: ಒಂದೇ ದಿನ 11 ಸೆಂ.ಮೀ ವರ್ಷಧಾರೆ!
ಜನ ಗುಂಪುಗೂಡದಂತೆ ಪೊಲೀಸರು ಕೂಡ ನಿಗಾ ವಹಿಸಿದ್ದರು. ಜನ ಕೂಡ ಸ್ಪಂದಿಸಿದ್ದಾರೆ. ಇದನ್ನು ಹೊರತುಪಡಿಸಿ ಬ್ಯಾಂಕ್, ಮೆಡಿಕಲ್ ಶಾಪ್, ಇನ್ನಿತ್ತರ ತುರ್ತು ಸೇವೆಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲೆಯ ಗಡಿಗಳಲ್ಲಿ ಮಾತ್ರ ಯಾರು ಬಾರದಂತೆ ಕಟ್ಟೆಚ್ಚರ ವಹಿಸಲಾಗಿದೆ.