ಶಿರಾ ಉಪ ಚುನಾವಣೆ : ಬಿಜೆಪಿಗೆ ಎದುರಾದ ಆಘಾತ

By Kannadaprabha NewsFirst Published Oct 12, 2020, 10:00 AM IST
Highlights

ಶಿರಾದಲ್ಲಿ ಇನ್ನೇನು ಕೆಲ ದಿನದಲ್ಲೇ  ಉಪ ಚುನಾವಣೆ ನಡೆಯಲಿದ್ದು, ಇದೇ ವೇಳೆ ಬಿಜೆಪಿಗೆ ಎಚ್ಚರಿಕೆ ನೀಡಲಾಗಿದೆ

ಶಿರಾ (ಅ.12):  ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾದಿಗರ ಬಹುದಿನಗಳ ಬೇಡಿಕೆಯಾದ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅನುಮೋದಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವುದಾಗಿ ಭರವಸೆ ನೀಡಿ ಮಾದಿಗ ಜನಾಂಗದ ಮತಗಳನ್ನು ಪಡೆದ ಬಿಜೆಪಿ ರಾಜ್ಯದಲ್ಲಿ ಈಗ ಅ​ಧಿಕಾರದಲ್ಲಿದೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸದ್ದರೆ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸಲಾಗುವುದು ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಗೌರವಾಧ್ಯಕ್ಷ ಎಸ್‌.ಮಾರೆಪ್ಪ ತಿಳಿಸಿದರು.

ಅವರು ನಗರದ ಲಕ್ಷ್ಮೀ ನಾರಾಯಣ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾದಿಗ ಸಮುದಾಯದ ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕುತೂಹಲದ ಕೇಂದ್ರವಾದ ಆರ್‌ ಆರ್ ನಗರ : ಫೈನಲ್ ಆಗಿಲ್ಲ ಬಿಜೆಪಿ ಅಭ್ಯರ್ಥಿ

ನ್ಯಾಯಮೂರ್ತಿ ಎ.ಜೆ.ಸದಾಶಿವ ಅವರು ನೀಡಿರುವ ವರದಿಯನ್ನು ಬಹಿರಂಗಗೊಳಿಸಲು ಸರಕಾರಗಳು ಹಿಂದೇಟು ಹಾಕುತ್ತಿವೆ. ಇದು ದಲಿತರನ್ನು ಒಡೆದು ಆಳಲು ಈ ರೀತಿ ಮಾಡುತ್ತಿದ್ದೀರಿ. ರಾಜಕೀಯ ಪಕ್ಷಗಳಿಗೆ ನಮ್ಮ ಓಟು ಬೇಕು, ನಮ್ಮ ಸಮಸ್ಯೆ ಬೇಡ, ನಮ ನ್ಯಾಯಯುತವಾದ ಬೇಡಿಕೆ ಬೇಡ, ಅ​ಕಾರದಲ್ಲಿರುವ ಬಿಜೆಪಿ ಪಕ್ಷ ನಮ್ಮನ್ನು ನೀವು ಬಾಯಿ ಮುಚ್ಚಿಸಲು ಹೊರಟಿದ್ದೀರಿ. ಮುಂದಿನ ಚುನಾವಣೆಯಲ್ಲಿ ನಿಮಗೆ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದರು.

ಕಳೆದ ಕಾಂಗ್ರೆಸ್‌ ಸರಕಾರವು ಸದಾಶಿವ ಆಯೋಗದ ವರದಿ ಜಾರಿಗೊಳಿಸುವ ವಿಚಾರದಲ್ಲಿ ಉಪ ಸಮಿತಿ ಮಾಡಿ ಆಯೋಗದ ವರದಿಯನ್ನು ಮೂಲೆಗುಂಪು ಮಾಡಿದ ಟಿ.ಬಿ.ಜಯಚಂದ್ರ, ಡಿ.ಕೆ.ಶಿವಕುಮಾರ್‌ ಅವರ ಪಾತ್ರವೂ ಇದೆ. ಅವರೂ ಸಹ ನಮಗೆ ಅನ್ಯಾಯ ಮಾಡಿದವರು. ಆದ್ದರಿಂದ ಕಾಂಗ್ರೆಸ್‌ ಸರಕಾರ ಸೋತಿತು. ಶಿರಾ ಕ್ಷೇತ್ರದಲ್ಲಿ 48 ಸಾವಿರ ಮಾದಿಗ ಮತದಾರರಿದ್ದಾರೆ. ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸದಿದ್ದರೆ ಬಿಜೆಪಿ ವಿರುದ್ಧ ಮತಚಲಾಯಿಸುವುದಾಗಿ ತಿಳಿಸಿದರು.

ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಕೇಶವಮೂರ್ತಿ ಮಾತನಾಡಿ, ಬಿಜೆಪಿ ಸರಕಾರದಲ್ಲಿ ಹೆಸರಿಗೆ ಮಾತ್ರ ನಮ್ಮ ಸಮುದಾಯದ ಗೋವಿಂದ ಕಾರಜೋಳ ಅವರಿಗೆ ಡಿಸಿಎಂ ಮಾಡಿದ್ದೀರಿ. ಆದರೆ ಅವರಿಗೆ ಯಾವುದೇ ಅ​ಧಿಕಾರವಿಲ್ಲ. ಸದಾಶಿವ ಆಯೋಗದ ವರದಿಯನ್ನು ಬಹಿರಂಗಪಡಿಸಿ ಅನುಷ್ಠಾನಗೊಳಿಸುವಲ್ಲಿ ಬಿಜೆಪಿ ಸರಕಾರ ನಿರ್ಲಕ್ಷ ಮಾಡಿದೆ. ಪ.ಜಾತಿ, ಪ.ಂಗಡ ಹಿಂದುಳಿದ ವರ್ಗಗಳ ಅನುದಾನ ಕಡಿತ ಮಾಡಿದೆ. ನಾಗಮೋಹನ್‌ ದಾಸ್‌ ವರದಿ, ಮತ್ತು ಹಿಂದುಳಿದ ಆಯೋಗಗಳ ವರದಿ ಬಹಿರಂಗಗೊಳಿಸಿ. ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳನ್ನು ಹೆಚ್ಚು ಮಾಡಬೇಕು. ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿ ಅನುದಾನವನ್ನು ವಾಪಸ್ಸು ತೆಗೆದುಕೊಳ್ಳುತ್ತಿದ್ದೀರಿ. ಇದರಿಂದ ಮಾದಿಗ ಸಮುದಾಯ ಅಭಿವೃದ್ದಿ ಕಿಂಚಿತ್ತೂ ಆಗಿಲ್ಲ. ಆಡಳಿತ ಬಿಜೆಪಿ ನಿರ್ಲಕ್ಷ ಮಾಡಿದೆ. ಇದಕ್ಕೆ ತಕ್ಕ ಪಾಠ ಕಲಿಸುತ್ತೇವೆ. ಮತಜಾಗೃತಿ ಅಭಿಯಾನದ ಮೂಲಕ. ಪ್ರತಿಯೊಂದು ಹಳ್ಳಿಗಳಲ್ಲಿ ಹೋಗಿ ಮತಜಾಗೃತಿ ಮಾಡಿ. ಸಾಮೂಹಿಕ ನಾಯಕತ್ವ ಮಾಡಿ ಬಿಜೆಪಿ ಸೋಲಿಸುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಭಾನುಪ್ರಕಾಶ್‌, ಮಾಗಡಿ ಕೃಷ್ಣ, ಗುಲ್ಬರ್ಬ ವಿಭಾಗದ ರಾಜ್ಯ ಕಾರ್ಯದರ್ಶಿ ಶಿವರಾಯ ಅಕ್ಕರಕಿ, ಬೆಳಗಾಂ ವಿಭಾಗದ ರಾಜ್ಯ ಕಾರ್ಯದರ್ಶಿ ಸೋಮು ಚೂರಿ, ಬಿ.ಟಿ.ಚಂದ್ರಶೇಖರ್‌, ಶಿರಾ ತಾಲ್ಲೂಕು ಅಧ್ಯಕ್ಷ ಶಿವಾಜಿ ನಗರ ತಿಪ್ಪೇಸ್ವಾಮಿ, ಅಪ್ಪಿ ರಂಗನಾಥ್‌ ಕೋಟೆ ಲಿಂಗರಾಜು, ಸಿದ್ದಗಂಗಯ್ಯ, ಶಾಂತಕುಮಾರ್‌, ಚನ್ನಪ್ಪ ಸೇರಿದಂತೆ ಹಲವರು ಹಾಜರಿದ್ದರು.

click me!