ಮಧುಗಿರಿ ಜನತೆಗೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧ : ನಿಖಿಲ್

By Kannadaprabha News  |  First Published Feb 14, 2023, 1:14 PM IST

ಮಧುಗಿರಿಗೂ ನಮ್ಮ ಕುಟುಂಬಕ್ಕೂ ಮೊದಲಿಂದಲೂ ಅವಿನಾಭಾವ ಸಂಬಂಧವಿದೆ ಎಂದು ರಾಜ್ಯ ಯುವ ಘಟಕದ ಜೆಡಿಎಸ್‌ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ತಿಳಿಸಿದರು.


 ಮಧುಗಿರಿ :  ಮಧುಗಿರಿಗೂ ನಮ್ಮ ಕುಟುಂಬಕ್ಕೂ ಮೊದಲಿಂದಲೂ ಅವಿನಾಭಾವ ಸಂಬಂಧವಿದೆ ಎಂದು ರಾಜ್ಯ ಯುವ ಘಟಕದ ಜೆಡಿಎಸ್‌ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ತಿಳಿಸಿದರು.

ಇಲ್ಲಿನ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ಕರುನಾಡ ವಿಜಯ ಸೇನೆಯಿಂದ ಹಮ್ಮಿಕೊಂಡಿದ್ದ ಮಧುಗಿರಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Tap to resize

Latest Videos

ಹಿಂದೆ ಬಿಜೆಪಿ ಆಪರೇಷನ್‌ ಕಮಲ ನಡೆಸಿದ ಸಂದರ್ಭದಲ್ಲಿ ಕ್ಷೇತ್ರವನ್ನು ವೀರಭದ್ರಯ್ಯಗೆ ಬಿಟ್ಟುಕೊಡಬೇಕು ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ನಿರ್ಧರಿಸಿದ್ದರು. ಆದರೆ ಅವರಿಗೆ ಅಂದು ವಿಆರ್‌ಎಸ್‌ ದೊರೆಯದ ಕಾರಣ ನನ್ನ ತಾಯಿ ಅನಿತಾಕುಮಾರಸ್ವಾಮಿ ಅವರು ಸ್ಪರ್ಧಿಸಿ ಜಯಗಳಿಸಿದ್ದು ಮಧುಗಿರಿ ಕ್ಷೇತ್ರದ ಜನತೆಗೂ ಮತ್ತು ನಮ್ಮ ಕುಟುಂಬಕ್ಕೂ ಅನೇಕ ವರ್ಷಗಳ ನಂಟು ಬೆಸದಿದ್ದು ಈ ಪ್ರೀತಿ ವಿಶ್ವಾಸವನ್ನು ಯಾರು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದರು.

ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ಕಳೆದ ನಾಲ್ಕೂವರೆ ವರ್ಷಗಳಲ್ಲಿ ನನಗೆ ಒಳ್ಳೆಯ ವಾತಾವರಣ ಸಿಗಲಿಲ್ಲ. ಆದರೂ ಜನತೆಯ ಪರ ಕೆಲಸ ಮಾಡಿರುವ ಸಮಾಧಾನವಿದೆ. ಪ್ರಸ್ತುತ ಬಿಜೆಪಿ ಸರ್ಕಾರವಿದ್ದು ಅನುದಾನ ಹಂಚಿಕೆಯಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ. ಮಧುಗಿರಿ ಕಂದಾಯ ಜಿಲ್ಲೆಯಾಗಬೇಕು. ಏಕಶಿಲಾ ಬೆಟ್ಟಕ್ಕೆ ರೋಪ್‌ವೇ ಅಳವಡಿಸಿ ಪ್ರವಾಸೋದ್ಯಮ ಕೇಂದ್ರವಾಗಬೇಕು. ಸುಸ್ಸಜ್ಜಿತ ಕ್ರೀಡಾಂಗಣ, ಕೈಗಾರಿಕಾ ಪ್ರದೇಶದ ಆರಂಭಕ್ಕಾಗಿ ಮತ್ತೊಮ್ಮೆ ನನ್ನನ್ನು ಆಶೀರ್ವದಿಸಿ ಎಂದು ಮನವಿ ಮಾಡಿದರು.

ಧರ್ಮ ಕಾರ್ಯ​ಗಳು ನಿರಂತರ ನಡೆ​ಯ​ಬೇ​ಕು: ಬಿ.ಎಸ್‌.ಯಡಿಯೂರಪ್ಪ

ಕಾರ್ಯಕ್ರಮದಲ್ಲಿ ತುಮುಲ್‌ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್‌, ಪುರಸಭಾ ಅಧ್ಯಕ್ಷ ತಿಮ್ಮರಾಯಪ್ಪ, ಸದಸ್ಯರಾದ ಎಂ.ಆರ್‌.ಜಗನ್ನಾಥ್‌, ಕೆ.ನಾರಾಯಣ್‌, ಎಂ.ಎಸ್‌.ಚಂದ್ರಶೇಖರ್‌ಬಾಬು, ಎಂ.ಎಲ್‌.ಗಂಗರಾಜು, ತಾಲೂಕು ಜೆಡಿಎಸ್‌ ಅಧ್ಯಕ್ಷ ಬಸವರಾಜು, ಕರುನಾಡ ವಿಜಯ ಸೇನೆ ತಾಲೂಕು ಅಧ್ಯಕ್ಷ ತಿಮ್ಮರಾಜು, ಮಹಿಳಾ ಘಟಕದ ಅಧ್ಯಕ್ಷೆ ಲತಾಗೋವಿಂದರಾಜು, ಗೌರವಾಧ್ಯಕ್ಷೆ ಲತಾ ನಾರಾಯಣ್‌, ನಗರ ಅಧ್ಯಕ್ಷರಾದ ರಾಜು, ಪದಾಧಿಕಾರಿಗಳಾದ ವೆಂಕಟೇಶ್‌, ದಾದು ಸಿದ್ದಿಕ್‌, ಷರೀಫ್‌, ಮುಖಂಡರಾದ ತುಂಗೋಟಿ ರಾಮಣ್ಣ, ಕೆಎಎಸ್‌ ಅಧಿಕಾರಿ ಪಾತರಾಜು, ವೆಂಕಟಾಪುರ ಗೋವಿಂದರಾಜು, ಬಿ.ಸ್‌.ಶ್ರೀನಿವಾಸ್‌, ಚೌಡಪ್ಪ ಸೇರಿದಂತೆ ಅನೇಕರಿದ್ದರು. ನಂತರ ನಡೆದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಜನ ಮೆಚ್ಚುಗೆ ಪಡೆಯಿತು.

ಯಾರ ಹಂಗಿಲ್ಲದೆ ಸರ್ಕಾರ ರಚಿಸುವ ಶಕ್ತಿ ನೀಡಿ

ತುಮಕೂರು : ಜೆಡಿಎಸ್‌ ಪಕ್ಷ ಬಡವರು, ದೀನ ದಲಿತರು, ಅಲ್ಪಸಂಖ್ಯಾತರ ಕಷ್ಟ ಕಾರ್ಪಣ್ಯಗಳನ್ನು ಅರಿತು, ಅವುಗಳ ನಿವಾರಣೆಗಾಗಿ ಪಂಚರತ್ನ ಯೋಜನೆಯನ್ನು ರೂಪಿಸಿದೆ. ಇವುಗಳು ಅನುಷ್ಠಾನಕ್ಕೆ ಬರಬೇಕೆಂದರೆ ತಾವೆಲ್ಲರೂ ಜೆಡಿಎಸ್‌ ಪಕ್ಷಕ್ಕೆ ಯಾರ ಹಂಗಿಲ್ಲದೆ ಸರ್ಕಾರ ರಚಿಸುವಂತಹ ಶಕ್ತಿಯನ್ನು ನೀಡಬೇಕೆಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ತಿಳಿಸಿದ್ದಾರೆ. ನಗರದ ಜೆಡಿಎಸ್‌ ಜಿಲ್ಲಾ ಕಾರ್ಯಾಲಯದ ಆವರಣದಲ್ಲಿ ಪಕ್ಷದ ವತಿಯಿಂದ ಏರ್ಪಡಿಸಿದ್ದ ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಜನಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ, ಕಾಂಗ್ರೆಸ್‌ ಪಕ್ಷಗಳ ಸೋಗಲಾಡಿತನದ ರಾಜಕಾರಣದಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ. ಹಾಗಾಗಿ ಬದಲಾವಣೆ ಬಯಸಿದ್ದು, ಯಾರ ಹಂಗಿಲ್ಲದೆ ಜೆಡಿಎಸ್‌ ಸ್ವತಂತ್ರವಾಗಿ ಅಧಿಕಾರಕ್ಕೆ ತರಬೇಕೆಂಬುದು ಎಚ್‌.ಡಿ.ಕೆಯವರ ಹೋರಾಟವಾಗಿದೆ. ಅವರೊಂದಿಗೆ ಪಕ್ಷದ ಇತರೆ ಮುಖಂಡರು ಕೈಜೋಡಿಸಿದ್ದಾರೆ. ಕಾರ್ಯಕರ್ತರು ಸಹ ಚುನಾವಣೆಗೆ ಇನ್ನೂ 70-80 ದಿನಗಳಿದ್ದು ಹಗಲಿರುಳು ಶ್ರಮಿಸಿ ಪಕ್ಷದ ಗೆಲುವಿಗೆ ಸಂಕಲ್ಪ ತೊಡಬೇಕು. ಪಕ್ಷಕ್ಕಾಗಿ ದುಡಿದವರನ್ನು ಗುರುತಿಸಿ ಅಧಿಕಾರ ಕೊಡಲಿದೆ ಎಂದರು.

ಸಿದ್ದರಾಮಯ್ಯ ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲಿ: ನಿಖಿಲ್‌ ಕುಮಾರಸ್ವಾಮಿ

ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ 2013 ಮತ್ತು 2018ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ನಗರ ಕ್ಷೇತ್ರದಿಂದ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಸೋತಿದ್ದು ಎನ್‌. ಗೋವಿಂದರಾಜು ಕ್ಷೇತ್ರದ ಜನತೆಯಿಂದ ದೂರವಾಗದೆ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಈ ಬಾರಿ ಅವರನ್ನು ಆಶೀರ್ವದಿಸಿ, ಕುಮಾರಣ್ಣನ ಕೈಬಲಪಡಿಸಿ ಎಂದು ನಿಖಿಲ್‌ ಕುಮಾರಸ್ವಾಮಿ ಮನವಿ ಮಾಡಿದರು. ನಗರ ಜೆಡಿಎಸ್‌ ಅಭ್ಯರ್ಥಿ ಎನ್‌.ಗೋವಿಂದರಾಜು ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್‌ ಪಕ್ಷವು ಅಧಿಕಾರಕ್ಕೆ ಬಂದರೆ ತುಮಕೂರು ನಗರದಲ್ಲಿ 5 ಹೈಟೆಕ್‌ ಆಸ್ಪತ್ರೆ,7 ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಸಿಗುವ ಶಾಲೆಗಳನ್ನು ನಿರ್ಮಿಸುವ ಮೂಲಕ ಗುಣಮಟ್ಟದ ಆರೋಗ್ಯ ಮತ್ತು ಶಿಕ್ಷಣ ಉಚಿತವಾಗಿ ದೊರೆಯುವಂತೆ ಮಾಡಲಿದ್ದಾರೆ. ಕುಮಾರಣ್ಣ ನುಡಿದಂತೆ ನಡೆಯುವ ವ್ಯಕ್ತಿ ಎಂದು ಹೇಳಿದರು.

click me!