ತುಮಕೂರು: ಮಧುಗಿರಿ ಬಿಜೆಪಿ ಘಟಕದಿಂದ ರಾಷ್ಟ್ರಧ್ವಜಕ್ಕೆ ಅಪಮಾನ

Published : Aug 10, 2022, 11:34 AM IST
ತುಮಕೂರು: ಮಧುಗಿರಿ ಬಿಜೆಪಿ ಘಟಕದಿಂದ ರಾಷ್ಟ್ರಧ್ವಜಕ್ಕೆ ಅಪಮಾನ

ಸಾರಾಂಶ

ಮಧುಗಿರಿ ಬಿಜೆಪಿ ಫ್ಲೆಕ್ಸ್‌ನಲ್ಲಿ ರಾಷ್ಟ್ರಧ್ವಜ ಉಲ್ಟಾ ಆಗಿದ್ದು ಕೇಸರಿ- ಬಿಳಿ- ಹಸಿರು ಬದಲು, ಹಸಿರು-ಬಿಳಿ- ಕೇಸರಿ ಮುದ್ರಣ 

ತುಮಕೂರು(ಆ.10):  ಜಿಲ್ಲೆಯ ಮಧುಗಿರಿ ಬಿಜೆಪಿ ಘಟಕದಿಂದ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಘಟನೆ ನಡೆದಿದೆ. ಹೌದು, ಮಧುಗಿರಿ ಬಿಜೆಪಿ ಘಟಕದಿಂದ ಫ್ಲೆಕ್ಸ್‌ನಲ್ಲಿ ರಾಷ್ಟ್ರಧ್ವಜವನ್ನು ಉಲ್ಟಾ ಮುದ್ರಿಸಿದೆ. ಮಧುಗಿರಿ ಬಿಜೆಪಿ ಫ್ಲೆಕ್ಸ್‌ನಲ್ಲಿ ರಾಷ್ಟ್ರಧ್ವಜ ಉಲ್ಟಾ ಆಗಿದೆ. ಕೇಸರಿ- ಬಿಳಿ- ಹಸಿರು ಬದಲು, ಹಸಿರು-ಬಿಳಿ- ಕೇಸರಿ ಮುದ್ರಣವಾಗಿದೆ. 

ರಾಷ್ಟ್ರಧ್ವಜವನ್ನು ಉಲ್ಟಾ ಮುದ್ರಿಸಿದ ಫ್ಲೆಕ್ಸ್‌ಮಧುಗಿರಿ ಪಟ್ಟಣದಲ್ಲಿ ರಾರಾಜಿಸುತ್ತಿದೆ. ತ್ರಿವರ್ಣ ಧ್ವಜ ಯಾತ್ರೆ ಕಾರ್ಯಕ್ರಮದ ನಿಮಿತ್ತ ಮಧುಗಿರಿ ಬಿಜೆಪಿ ಘಟಕ ಈ ಫ್ಲೆಕ್ಸ್‌ ಹಾಕಿದೆ. ಮಧುಗಿರಿ ಬಿಜೆಪಿ ಘಟಕದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. 

ಸಿಎಂ ಬದಲಾವಣೆ: ಈ ಹಿಂದೆ ಮುಖ್ಯಮಂತ್ರಿ ಬದಲಿಸಿದ ಉದಾಹರಣೆ ಕೊಟ್ಟ ಬಿಜೆಪಿ ನಾಯಕ

ಆ. 14ರಂದು ನಡೆಯಲಿರುವ ಕಾರ್ಯಕ್ರಮದ ಪ್ರಚಾರದ ಫ್ಲೆಕ್ಸ್‌ನಲ್ಲಿ ಬಿಜೆಪಿ ರಾಷ್ಟ್ರಧ್ವಜವನ್ನು ಉಲ್ಟಾ ಮುದ್ರಿಸಿದೆ.  ಬಿಜೆಪಿ ಮುಖಂಡ ಭೀಮಕುಂಟೆ ಹನುಮಂತೇಗೌಡ ಅವರು ಈ ಫ್ಲೆಕ್ಸ್‌ಅನ್ನು ಹಾಕಿದ್ದಾರೆ ಅಂತ ತಿಳಿದು ಬಂದಿದೆ.
 

PREV
Read more Articles on
click me!

Recommended Stories

ಕುಡಿದ ಮತ್ತಿನಲ್ಲಿ ಬೆಂಗಳೂರಿನ ಪಬ್ ಮುಂದೆ ಯುವತಿ ಕಿರಿಕ್.. ಸುಮ್ಮನಿರಿಸಲು ಬಂದ ಯುವಕನಿಗೆ ಶಾಕ್!
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ದಂಧೆ: ಫಾರ್ಮ್ ಪ್ಲಾಟ್ ಹೆಸರಲ್ಲಿ ಅಕ್ರಮ ಮಿನಿ ಟೌನ್‌ಶಿಪ್!