ಲಂಚ ಸ್ವೀಕರಿಸಿದರೆ ಕಠಿಣ ಕ್ರಮ: ಮುರಳೀಕೃಷ್ಣ

By Kannadaprabha News  |  First Published Apr 3, 2023, 6:05 AM IST

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲು ವೈದ್ಯರು ಸಾವಿರಾರು ರುಪಾಯಿ ವಸೂಲು ಮಾಡುತ್ತಿರುವ ಸಂಬಂಧ ಕೇಳಿ ಬಂದ ದೂರಿಗೆ ಆರೋಗ್ಯ ಇಲಾಖೆಯ ಬೆಂಗಳೂರು ವಿಭಾಗದ ಜಂಟಿ ನಿರ್ದೇಶಕ ಡಾ.ಮುರುಳಿಕೃಷ್ಣ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.


  ತುರುವೇಕೆರೆ :ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲು ವೈದ್ಯರು ಸಾವಿರಾರು ರುಪಾಯಿ ವಸೂಲು ಮಾಡುತ್ತಿರುವ ಸಂಬಂಧ ಕೇಳಿ ಬಂದ ದೂರಿಗೆ ಆರೋಗ್ಯ ಇಲಾಖೆಯ ಬೆಂಗಳೂರು ವಿಭಾಗದ ಜಂಟಿ ನಿರ್ದೇಶಕ ಡಾ.ಮುರುಳಿಕೃಷ್ಣ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.

ವಿಶ್ವ ಮಾನವ ಹಕ್ಕುಗಳ ಹೋರಾಟಗಾರ ಮಾವಿನಕೆರೆ ಸಿದ್ದಲಿಂಗೇಗೌಡರು ಲೋಕಾಯುಕ್ತಕ್ಕೆ ಸಲ್ಲಿಸಿದ್ದ ದೂರಿನನನ್ವಯ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿದ್ದ ಸಂಧರ್ಭದಲ್ಲಿ ಸಾರ್ವಜನಿಕರು ಈ ಆಸ್ಪತ್ರೆಯಲ್ಲಿರುವ ವೈದ್ಯರು ಹೆರಿಗೆಗೆ 8 ರಿಂದ 10 ಸಾವಿರ ರು.ಗಳನ್ನು ಪಡೆಯುತ್ತಿದ್ದಾರೆ. ಬಡವರಿಗೆ ಹಣ ಹೊಂದಿಸಲಾಗದೆ ತಮ್ಮ ಮನೆಯಲ್ಲಿದ್ದ ಒಡವೆಗಳನ್ನು ಮಾರಿ ಹಣ ಹೊಂದಿಸಿ ವೈದ್ಯರಿಗೆ ನೀಡಲಾಗುತ್ತಿದೆ ಎಂದು ದೂರಿದರು.

Tap to resize

Latest Videos

ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಸೇವೆ ನೀಡಬೇಕೆಂಬುದು ಕಡ್ಡಾಯವಾಗಿದೆ. ಆದರೆ ಸಾರ್ವಜನಿಕರಿಂದ ಹಣ ವಸೂಲು ಮಾಡಲಾಗುತ್ತಿದೆ ಎಂಬ ಸಂಗತಿ ತಿಳಿದ ಡಾ.ಮುರುಳಿಕೃಷ್ಣರವರು ತಾಲೂಕು ವೈದ್ಯಾಧಿಕಾರಿ ಡಾ.ಸುಪ್ರಿಯಾ ಮತ್ತು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಹರಿಪ್ರಸಾದ್‌ರನ್ನು ತರಾಟೆಗೆ ತೆಗೆದುಕೊಂಡರು. ಹಲವಾರು ವರ್ಷಗಳಿಂದ ಬಿಡಾರ ಹೂಡಿರುವ ಸಿಬ್ಬಂದಿಯನ್ನು ಬದಲಾಯಿಸುವಂತೆಯೂ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುನಾಥ್‌ಗೆ ಸೂಚನೆ ನೀಡಿದರು.

ಆಸ್ಪತ್ರೆಯ ಆವರಣ ಹಾಗೂ ಒಳಾಂಗಣ ಬಹಳ ಶುಚಿಯಾಗಿ ಇಟ್ಟಿರುವುದಕ್ಕೆ ಡಾ.ಮುರುಳೀಕೃಷ್ಣ ಶಹಬ್ಬಾಶ್‌ ಗಿರಿ ನೀಡಿದರು. ಆದರೆ ಸಾರ್ವಜನಿಕರಿಂದ ಲಂಚ ಪಡೆಯುತ್ತಿರುವ ಬಗ್ಗೆ ಮತ್ತೊಮ್ಮೆ ದೂರು ಬಂದಲ್ಲಿ ಯಾವುದೇ ಮುಲಾಜಿಲ್ಲದೇ ಕ್ರಮ ಜರುಗಿಸುವ ಎಚ್ಚರಿಕೆಯನ್ನೂ ಸಹ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುನಾಥ್‌, ತಾಲೂಕು ಆರೋಗ್ಯಾಧಿಕಾರಿ ಡಾ.ಸುಪ್ರಿಯಾ, ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಹರಿಪ್ರಸಾದ್‌, ವಿಶ್ವ ಮಾನವ ಹಕ್ಕುಗಳ ಹೋರಾಟಗಾರ ಮಾವಿನಕೆರೆ ಸಿದ್ದಲಿಂಗೇಗೌಡ ಸೇರಿದಂತೆ ಹಲವರು ಇದ್ದರು.

ಗರ್ಭಿಣಿ ಸಾಯಿಸಿದ ವೈದ್ಯರು

ಕೋಲಾರ (ಏ.02): ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾದ ಮಹಿಳೆಗೆ ವೈದ್ಯರು ಸೂಕ್ತ ಚಿಕಿತ್ಸೆಯನ್ನು ನೀಡದೇ ನಿರ್ಲಕ್ಷ್ಯ ಮಾಡಿದ್ದರಿಂದ ಆಸ್ಪತ್ರೆಯಲ್ಲಿಯೇ ನರಳಿ- ನರಳಿ ಗರ್ಭಿಣಿ ಪ್ರಾಣ ಬಿಟ್ಟಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಬಂಗಾರಪೇಟೆ ನಗರದ ವಿಜಯನಗರ ಬಡಾವಣೆಯ ನಿವಾಸಿ ಭಾರತಿ (26) ತನ್ನ ಎರಡನೇ ಹೆರಿಗೆಗೆ ಬಂದಿದ್ದ ಮಹಿಳೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿದ ಸಾವನ್ನಪ್ಪಿದ್ದಾಳೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಇನ್ನು ಆಸ್ಪತ್ರೆಗೆ ಮಹಿಳೆ ದಾಖಲಾದ ಬಳಿಕ ಮೊದಲು ಆರೈಕೆ ಮಾಡಿದ್ದಾರೆ, ನಂತರ ಹೆರಿಗೆ ನೋವು ಹೆಚ್ಚಾಗಿ ಬರಲೆಂದು ಇಂಜೆಕ್ಷನ್‌ ನೀಡಿದ್ದಾರೆ. ನಂತರ ಗರ್ಭಿಣಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅದರೊಂದಿಗೆ ಉಸಿರಾಟ ಸಮಸ್ಯೆಯೂ ಕಾಣಿಸಿಕೊಂಡಿದೆ. ಆದರೆ, ಇಂಜೆಕ್ಷನ್‌ ಕೊಟ್ಟು 45 ನಿಮಿಷ ಕಳೆದರೂ ಅಲ್ಲಿ ಆಯಾವೊಬ್ಬ ವೈದ್ಯರೂ ಕೂಡ ಆಕೆಗೆ ಚಿಕಿತ್ಸೆ ನೀಡಲು ಮುಂದಾಗದೇ ನಿರ್ಲಕ್ಷ್ಯ ಮಾಡಿದ್ದಾರೆ.

Bengaluru Accident: ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಭೀಕರ ಅಪಘಾತ: ಮಹಿಳೆ ತಲೆಮೇಲೆ ಹರಿದ ಲಾರಿ

ಖಾಸಗಿ ಆಸ್ಪತ್ರೆಗೆ ಹೋಗುವಂತೆ ಸೂಚನೆ: ಇನ್ನು ಗರ್ಭಿಣಿ ಭಾರತಿಗೆ ಇಂಜೆಕ್ಷನ್‌ ಕೊಟ್ಟ ಬಳಿಕ ಉಸಿರಾಟದ ಸಮಸ್ಯೆಯಿಂದ ಮುಕ್ಕಾಲು ಗಂಟೆ ನರಳಾಡಿದ್ದಾಳೆ. ನರಳಾಟ ಮಾಡುತ್ತಿದ್ದರೂ ಆಸ್ಪತ್ರೆಯ ಸಿಬ್ಬಂದಿಗಳಿಂದ ಚಿಕಿತ್ಸೆ ಸಿಗಲಿಲ್ಲ. ಇನ್ನು ಅವರ ಸ್ಥಿತಿ ಗಂಭೀರ ಹಂತಕ್ಕೆ ತಲುಪಿದ ನಂತರ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಮಡು ಹೋಗುವಂತೆ ಸೂಚನೆ ನೀಡಿದ್ದಾರೆ. ಇನ್ನು ಜೀವಕ್ಕೆ ಅಪಾಯವಿದೆ ಎಂದಾಕ್ಷಣ ಕುಟುಂಬ ಸದಸ್ಯರು ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಮಡು ಹೋಗಲು ಮುಂದಾಗಿದ್ದಾರೆ. ಆದರೆ, ಮಾರ್ಗದ ಮಧ್ಯೆಯೇ ಮಹಿಳೆ ನರಳಾಟದಿಂದ ಸಾವನ್ನಪ್ಪಿದ್ದಾರೆ.

ಮಗುವನ್ನು ಉಳಿಸಿದ ವೈದ್ಯರು:  ಇನ್ನು ಗರ್ಭಿಣಿ ಭಾರತಿ ಅವರ ಜೀವ ದಾರಿಯ ಮಧ್ಯದಲ್ಲಿ ಹೋದರೂ ಸಾವು- ಬದುಕಿನ ನಡುವೆ ಹೋರಾಡುತ್ತಿದ್ದ ಹೊಟ್ಟೆಯಲ್ಲಿದ್ದ ಮಗುವನ್ನು ಬದುಕಿಸಿಕೊಳ್ಳುವಲ್ಲಿ ಖಾಸಗಿ ಆಸ್ಪತ್ರೆ ವೈದ್ಯರು ಯಶಸ್ವಿ ಆಗಿದ್ದಾರೆ. ಇನ್ನು ತಾಯಿ 9 ತಿಂಗಳು ಹೊತ್ತು ಸಾವಿನಂತಹ ಹೆರಿಗೆ ನೋವನ್ನು ಅನುಭವಿಸಿದರೂ ಮುದ್ದಾದ ಮಗುವಿನ ಮುಖವನ್ನು ನೋಡಲೂ ಆಗದಂತೆ ಕಣ್ಮುಚ್ಚಿಕೊಂಡಿದ್ದಾಳೆ. ಇನ್ನು ಮಗು ಕೂಡ ಅಳುತ್ತಿದ್ದು, ಹಾಲುಣಿಸಲು ತಾಯಿಗೆ ಜೀವವೇ ಇಲ್ಲದಂತಾಗಿದೆ. 

click me!