ಲಂಚಾವತಾರ: 2 ತಿಂಗಳ ಹಿಂದಷ್ಟೇ ಗುಟ್ಕಾ ಕಂಪನಿ ತೆರೆದಿದ್ದ ಮಾಡಾಳ್‌ ವಿರೂಪಾಕ್ಷಪ್ಪ

By Kannadaprabha News  |  First Published Mar 5, 2023, 1:34 PM IST

‘ಎಂಆರ್‌ಪಿ ಪಾನ್‌ ಮಸಾಲ‘ ಹೆಸರಿನ ಕಂಪನಿ, 2 ತಿಂಗಳ ಹಿಂದಷ್ಟೇ ಸ್ವಗ್ರಾಮ ಚನ್ನೇಶಪುರದಲ್ಲಿ ಘಟಕ ಆರಂಭಿಸಿದ್ದ ಚನ್ನಗಿರಿ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ. 


ದಾವಣಗೆರೆ(ಮಾ.05):  ಚನ್ನಗಿರಿ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಅವರು ತಮ್ಮ ಮೂವರು ಗಂಡು ಮಕ್ಕಳ ಹೆಸರಿನಲ್ಲಿ ‘ಎಂಆರ್‌ಪಿ ಪಾನ್‌ ಮಸಾಲ’ ಎಂಬ ಗುಟ್ಕಾ ಕಂಪನಿಯನ್ನು ಆರಂಭಿಸಿದ್ದು ಬೆಳಕಿಗೆ ಬಂದಿದೆ.

ತಮ್ಮ ಮಕ್ಕಳಾದ ಮಾಡಾಳ್‌ ಮಲ್ಲಿಕಾರ್ಜುನ, ರಾಜಣ್ಣ ಅಲಿಯಾಸ್‌ ಪ್ರವೀಣ ಹಾಗೂ ಪ್ರಶಾಂತ ಹೆಸರಿನಲ್ಲಿ ಎಂಆರ್‌ಪಿ ಪಾನ್‌ ಮಸಾಲ ಘಟಕವನ್ನು ಚನ್ನಗಿರಿ ತಾಲೂಕಿನ ತಮ್ಮ ಸ್ವಗ್ರಾಮ ಚನ್ನೇಶಪುರದಲ್ಲಿ 2 ತಿಂಗಳ ಹಿಂದಷ್ಟೇ ಆರಂಭಿಸಿದ್ದರು. ಚನ್ನಗಿರಿ ಸುತ್ತಮುತ್ತಲಿನ ಎಲ್ಲಾ ಪಾನ್‌ ಮಸಾಲ, ಬೀಡಿ ಅಂಗಡಿಗಳಲ್ಲಿ, ತಳ್ಳುಗಾಡಿಗಳಲ್ಲಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಒಡೆತನದ ಎಂಆರ್‌ಪಿ ಗುಟ್ಕಾ ಮಾರಾಟವಾಗುತ್ತಿರುವುದು ಬೆಳಕಿಗೆ ಬಂದಿದೆ.

Latest Videos

undefined

ಲೋಕಾಯುಕ್ತಕ್ಕೆ ಸೇರಲು ಯತ್ನ ನಡೆಸಿದ್ದ ಪ್ರಶಾಂತ್‌ ಮಾಡಾಳ್‌..!

ದಾವಣಗೆರೇಲೂ ಮಾಡಾಳು ವಿರುದ್ಧ ಲೋಕಾಯುಕ್ತ ಎಫ್‌ಐಆರ್‌ ಸಾಧ್ಯತೆ

ದಾವಣಗೆರೆ: ಲೋಕಾಯುಕ್ತ ದಾಳಿ ವೇಳೆ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪನವರ ಮನೆಯಲ್ಲಿ 8 ಕೋಟಿ ರು. ಪತ್ತೆಯಾದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾ ಲೋಕಾಯುಕ್ತ ಪೊಲೀಸ್‌ ಕಚೇರಿಯಿಂದ ಮತ್ತೊಂದು ಎಫ್‌ಐಆರ್‌ ದಾಖಲಾಗುವ ಸಾಧ್ಯತೆ ಇದೆ.

ಲಂಚ ಪ್ರಕರಣ: ಬಿಜೆಪಿ ಶಾಸಕ ಮಾಡಾಳುಗಾಗಿ ಲೋಕಾ ಬೇಟೆ..!

ಪ್ರಕರಣದ ತನಿಖಾಧಿಕಾರಿ ಕುಮಾರಸ್ವಾಮಿಯವರಿಗೆ ದಾವಣಗೆರೆ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ದಾಳಿ ಬಗ್ಗೆ ಸಂಪೂರ್ಣ ವಿವರ ಸಲ್ಲಿಸಲಾಗಿದೆ. ವಿವರ ಪಡೆದ ಬಳಿಕ, ದಾವಣಗೆರೆ ಲೋಕಾಯುಕ್ತ ಕಚೇರಿಯಿಂದ ಮತ್ತೊಂದು ಎಫ್‌ಐಆರ್‌ ದಾಖಲಾಗುವ ಸಾಧ್ಯತೆ.

ಕೆಎಸ್‌ಡಿಎಲ್‌ಗೆ ರಾಸಾಯನಿಕ ಕಚ್ಚಾ ಪೂರೈಕೆಗೆ ಕಾರ್ಯಾದೇಶ ನೀಡಲು 81 ಲಕ್ಷ ರು.ಲಂಚಕ್ಕೆ ಬೇಡಿಕೆ ಇಟ್ಟು, 40 ಲಕ್ಷ ರು. ಲಂಚ ಪಡೆಯುತ್ತಿದ್ದ ವೇಳೆ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್‌ ಅವರು ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಬಳಿಕ, ವಿರುಪಾಕ್ಷಪ್ಪ ಅವರ ಸ್ವಗ್ರಾಮ ಚನ್ನೇಶಪುರದ ಮನೆ ಮೇಲೂ ದಾಳಿ ನಡೆಸಲಾಗಿತ್ತು. ಆಗ ಪತ್ತೆಯಾದ ಸ್ಥಿರ, ಚರ ಆಸ್ತಿ, ದಾಖಲೆಗಳು ಹಾಗೂ ಸಿಸಿ ಕ್ಯಾಮೆರಾದ ಡಿವಿಆರ್‌ನ ವರದಿ ಆಧರಿಸಿ, ತನಿಖಾ ವರದಿ ಸಿದ್ಧಪಡಿಸುತ್ತಿರುವ ಲೋಕಾಯುಕ್ತ, ದಾವಣಗೆರೆಯಲ್ಲಿ ಮತ್ತೊಂದು ಎಫ್‌ಐಆರ್‌ ದಾಖಲಿಸುವ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ.

click me!