ವಿಜಯಪುರ: ನಂದಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್‌ ಸ್ಫೋಟ, ನಾಲ್ವರಿಗೆ ಗಾಯ

By Girish Goudar  |  First Published Mar 5, 2023, 12:36 PM IST

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಚಿಕ್ಕ ಗಲಗಲಿ ಬಳಿ ನಂದಿ ಸಹಕಾರಿ ಕಾರ್ಖಾನೆಯಲ್ಲಿ ನೂತನ ಬಾಯ್ಲರ್‌ ಪರೀಕ್ಷಾರ್ಥ ವೇಳೆ ಸ್ಫೋಟ. 


ವಿಜಯಪುರ(ಮಾ.05): ಜಿಲ್ಲೆಯ ಬಬಲೇಶ್ವರ ತಾಲೂಕಿನ ಚಿಕ್ಕ ಗಲಗಲಿ ಬಳಿ ನಂದಿ ಸಹಕಾರಿ ಕಾರ್ಖಾನೆಯಲ್ಲಿ ನೂತನ ಬಾಯ್ಲರ್‌ ಪರೀಕ್ಷಾರ್ಥ ವೇಳೆ ಸ್ಫೋಟಗೊಂಡಿದ್ದರಿಂದ ನಾಲ್ವರು ಕಾರ್ಮಿಕರು ಗಾಯಗೊಂಡಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. 

ಅವಘಡದಲ್ಲಿ ಗಾಯಗೊಂಡಿರುವವರೆಲ್ಲರೂ ಕಾರ್ಮಿಕರಾಗಿದ್ದಾರೆ. ಗಾಯಗೊಂಡಿರುವ ಕಾರ್ಮಿಕರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತೀಚೆಗಷ್ಟೇ ಕಾರ್ಖಾನೆಯಲ್ಲಿ ನೂತನವಾಗಿ ಬಾಯ್ಲರ್‌ ಸ್ಥಾಪನೆ ಮಾಡಲಾಗಿತ್ತು. ಅದನ್ನು ಶನಿವಾರ ಪ್ರಾಯೋಗಿಕ ಪರೀಕ್ಷೆಗೆ ಪ್ರಾರಂಭಿಸಲಾಗಿತ್ತು. ಈ ವೇಳೆ ಬಾಯ್ಲರ್‌ ಸ್ಫೋಟಗೊಂಡಿದೆ. ಆಗ ಸ್ಥಳದಲ್ಲಿದ್ದ ನಾಲ್ವರು ಕಾರ್ಮಿಕರು ಗಾಯಗೊಂಡಿದ್ದಾರೆ. 

Tap to resize

Latest Videos

ಬೆಂಗಳೂರು: ಮನೆಯಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟ: ಮಕ್ಕಳು ಸೇರಿ 13 ಮಂದಿಗೆ ಗಾಯ

ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ, ಘಟನೆಯಿಂದಾಗಿ ಬೆಂಕಿ ಹೊತ್ತಿಕೊಂಡಿದ್ದರಿಂದ ವಿಜಯಪುರ, ಮುಧೋಳ, ಬಾಗಲಕೋಟೆ, ಬೀಳಗಿಯಿಂದ ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಲಾಯಿತು. ಸತತ ಎರಡು ಗಂಟೆಗಳ ಕಾಲ ಬೆಂಕಿ ನಂದಿಸುವ ಕಾರ್ಯದಲ್ಲಿ ಸಿಬ್ಬಂದಿ ತೊಡಗಿದರು. ಈ ಕುರಿತು ಬಬಲೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುಣೆಯ ಎಸ್‌.ಎಸ್‌.ಇಂಜಿನಿಯರ್ಸ್‌ನಿಂದ ಕಾರ್ಖಾನೆಯಲ್ಲಿ ಬಾಯ್ಲರ್‌ ಅಳವಡಿಸಲಾಗಿತ್ತು. 220 ಟನ್‌ ಸಾಮರ್ಥ್ಯದ ಬಾಯ್ಲರ್‌ ಅನ್ನು 51 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ದೆಹಲಿಯ ಐಎಸ್‌ಜಿಸಿ ಕಂಪನಿಯ ಬಾಯ್ಲರ್‌ ಬದಲಾಗಿ ಪುಣೆಯ ಎಸ್‌.ಎಸ್‌.ಇಂಜಿನಿಯರ್ಸ್‌ನಿಂದ ಅಳವಡಿಸಲಾಗಿತ್ತು. ದೆಹಲಿಯ ಐಎಸ್‌ಜಿಸಿ ಕಂಪನಿಯ ಬಾಯ್ಲರ್‌ ಗುತ್ತಿಗೆಯನ್ನು ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ರದ್ದುಪಡಿಸಿತ್ತು. ಬಾಯ್ಲರ್‌ ಸ್ಥಾಪನೆ ಗುತ್ತಿಗೆ ರದ್ದುಪಡಿಸಿದ್ದ ಕಾರಣ ದೆಹಲಿಯ ಐಎಸ್‌ಜಿಸಿ ಕಂಪನಿಗೆ 5 ಕೋಟಿ ದಂಡ ಕಟ್ಟಲಾಗಿದೆ. ಘಟನೆ ಕುರಿತು ತನಿಖೆ ನಡೆಸಬೇಕು ಎಂದು ಈ ಭಾಗದ ರೈತರು ಪಟ್ಟು ಹಿಡಿದಿದ್ದಾರೆ.

click me!