ಸಂಚಾರಿ ಮದ್ಯ ಪೂರೈಕೆ ಬಗ್ಗೆ ಹೇಳಿಕೆ ನೀಡಿದ ಅಬಕಾರಿ ಸಚಿವ ಎಚ್. ನಾಗೇಶ್‌ಗೆ ಅಬಕಾರಿ ಇಲಾಖೆ ಮಾಜಿ ಸಚಿವ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ನೀತಿ ಪಾಠ ಮಾಡಿದ್ದಾರೆ. ಚರ್ಚೆಗೆ ಗ್ರಾಸವಾದ ಹೇಳಿಕೆ ನೀಡಿದ ಅಬಕಾರಿ ಸಚಿವರಿಗೆ ಮಾಜಿ ಅಬಕಾರಿ ಸಚಿವ ಬುದ್ಧಿ ಮಾತು ಹೇಳಿದ್ದಾರೆ.
ದಾವಣಗೆರೆ(ಸೆ.07): ರಾಜ್ಯದಲ್ಲಿ ಸಂಚಾರಿ ಮದ್ಯ ಪೂರೈಕೆ ಸೇವೆ ಆರಂಭಿಸುವ ಹೇಳಿಕೆ ನೀಡಿರುವ ಅಬಕಾರಿ ಸಚಿವರು ಬೇಕಾಬಿಟ್ಟಿಹೇಳಿಕೆ ನೀಡುವುದನ್ನು ನಿಲ್ಲಿಸಲಿ ಎಂದು ಅಬಕಾರಿ ಇಲಾಖೆ ಮಾಜಿ ಸಚಿವ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ನೀತಿ ಪಾಠ ಮಾಡಿದ್ದಾರೆ.
ಅಬಕಾರಿ ಸಚಿವರು ಯಾವುದೇ ಹೇಳಿಕೆ ನೀಡುವಾಗಿ ಒಮ್ಮೆ ಯೋಚಿಸಿ ಮಾತನಾಡಬೇಕು. ನಿಮಗೆ ಅಧಿಕಾರವಿದೆಯೆಂದು ಹೇಗೆ ಬೇಕೋ ಹಾಗೆ ತೆಗೆದುಕೊಳ್ಳಬೇಡಿ ಎಂದು ರೇಣು ಸಚಿವರಿಗೆ ಬುದ್ಧಿ ಹೇಳಿದ್ದಾರೆ.
undefined
'ಸುಳ್ಳನ್ನು ನಿಜಮಾಡುವುದರಲ್ಲಿ ಬಿಜೆಪಿಯವರು ನಿಸ್ಸೀಮರು'..!
ಹೊನ್ನಾಳಿ ಕ್ಷೇತ್ರದ ಸವಳಂಗ ಕೆರೆಗೆ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಕುಡುಕರನ್ನು ಪ್ರೋತ್ಸಾಹಿಸಬಾರದು. ಮದ್ಯವ್ಯಸನಿಗಳ ಸಂಖ್ಯೆ ತಗ್ಗಿಸಲು ಅಂತಹವರ ಮನವೊಲಿಸುವ ಕೆಲಸ ಮಾಡಬೇಕು. ಆದರೆ ಈಗಿನ ಅಬಕಾರಿ ಸಚಿವರು ಏನು ಮಾತನಾಡುತ್ತಿದ್ದೇನೆಂಬ ಅರಿವು ಇಟ್ಟುಕೊಂಡು ಮಾತನಾಡಬೇಕು ಎಂದು ತಿಳಿಸಿದರು.
ಹೇಳಿಕೆ ನೀಡೋ ಮುನ್ನ ಸಿಎಂ ಜೊತೆ ಚರ್ಚಿಸಲಿ:
ನಮ್ಮ ಅಬಕಾರಿ ಸಚಿವರು ಪರಿಶಿಷ್ಟರಾಗಿದ್ದು, ಎಲ್ಲಾ ತಳ ಸಮುದಾಯಗಳ ಸಾಮಾಜಿಕ ಸ್ಥಿತಿಗತಿಯೂ ಗೊತ್ತಿರುವಂತಹ ಜನ ಪ್ರತಿನಿಧಿ. ಆದರೂ, ಸಂಚಾರಿ ಮದ್ಯ ಕೇಂದ್ರ ಆರಂಭಿಸಲು ಹೊರಟಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಹಿರಿಯರಿದ್ದು, ಇಂತಹ ಹೇಳಿಕೆ ನೀಡುವ ಮುನ್ನ ಸಿಎಂ ಬಳಿ ಚರ್ಚಿಸಲಿ. ಇಲ್ಲದಿದ್ದರೆ ಸರ್ಕಾರಕ್ಕೇ ಮುಜುಗರವಾಗುತ್ತದೆ ಎಂದು ರೇಣುಕಾಚಾರ್ಯ ಅಬಕಾರಿ ಸಚಿವ ನಾಗೇಶ್‌ಗೆ ಕಿವಿಮಾತು ಹೇಳಿದ್ದಾರೆ.
ದಾವಣಗೆರೆ ಜಿಲ್ಲೆ ಆರೋಗ್ಯ ಕೇಂದ್ರಕ್ಕೆ ಸ್ವಚ್ಛತಾ ಪ್ರಶಸ್ತಿ