• ಸಾಯುವ ಮುನ್ನ ಮದುವೆ, ಸ್ವರ್ಗದಲ್ಲಿ ಒಂದಾದ ಪ್ರೇಮಿಗಳು..!
• ಮನೆಯಲ್ಲಿ ತಮ್ಮ ಪ್ರೀತಿಯನ್ನು ಒಪ್ಪುವುದಿಲ್ಲ ಎಂದು ಸಾವಿಗೆ ಶರಣಾದ ಜೋಡಿ
• ತೋಟದಲ್ಲಿನ ಮರಕ್ಕೆ ಒಂದೇ ಹಗ್ಗದಿಂದ ನೇಣು ಬಿಗಿದುಕೊಂಡು ಸಾವು
ವರದಿ- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಜ.18) : ಮನೆಯಲ್ಲಿ ಮದುವೆಗೆ ನಿರಾಕರಿಸಿದ್ದರಿಂದ ಮನನೊಂದು ಪ್ರೇಮಿಗಳಿಬ್ಬರು ನೇಣಿಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಜೈನಾಪೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ರಾಕೇಶ್ ಅಂಬಲಿ (23) ಹಾಗೂ ಸಾವಿತ್ರಿ ಅಂಬಲಿ (19) ಮೃತಪಟ್ಟಿರುವ ಪ್ರೇಮಿಗಳು. ಜೈನಾಪೂರ ಗ್ರಾಮದ ಹೊರ ವಲಯದ ತೊಟವೊಂದರಲ್ಲಿ ಗಿಡಕ್ಕೆ ನೇಣು ಹಾಕಿ ಕೊಂಡಿದ್ದಾರೆ. ರಾಕೇಶ್ ಮತ್ತು ಸಾವಿತ್ರಿ ಮನೆಯಿಂದ ಹೊರ ಹೋಗಿದ್ದರು ಎಂದು ತಿಳಿದು ಬಂದಿದೆ. ಇಬ್ಬರೂ ಮೂರು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ 6 ತಿಂಗಳ ಬಳಿಕ ಪ್ರತಿಮೆಗಳಿಗೆ ಮದುವೆ ಮಾಡಿದ ಕುಟುಂಬಸ್ಥರು..!
ಟ್ರಾಕ್ಟರ್ ಡ್ರೈವರ್ ಪ್ರೀತಿಯ ಬಲೆಗೆ ಬಿದ್ದಿದ್ದ ಸಾವಿತ್ರಿ: ರಾಕೇಶ ಹಾಗೂ ಸಾವಿತ್ರಿ ಜೈನಾಪುರ ಗ್ರಾಮದವ ರಾಗಿದ್ದರು. ಇಬ್ಬರ ಮನೆ ಎದುರು ಬದಿರು ಇತ್ತು, ಹೀಗಾಗಿ ನಿತ್ಯ ಒಬ್ಬರೊಬ್ಬರು ನೋಡುತ್ತ ಪ್ರೇಮಾಂಕುರವಾಗಿತ್ತು. ರಾಕೇಶ ಟ್ಯಾಕ್ಟರ್ ಚಾಲಕನಾಗಿದ್ದನು. ಸಾವಿತ್ರಿ 9ನೇ ಕ್ಲಾಸ್ ವರೆಗೆ ಓದಿ ಕಲಿಯುವದು ಬಿಟ್ಟು ಮನೆಯಲ್ಲಿದ್ದಳು. ಕಳೆದ ನಾಲ್ಕೈದು ವರ್ಷಗಳಿಂದ ಒಬ್ವರಿಗೊಬ್ಬರು ಪ್ರೀತಿಸುತ್ತಿದ್ದರು. ಇದು ಇಬ್ಬರ ಮನೆಯಲ್ಲಿ ಗೊತ್ತಾದ ಮೇಲೆ ಮದುವೆ ಮಾಡಿ ಎಂದು ಮನೆಯವರ ಎದುರು ಪ್ರೇಮಿಗಳು ಒತ್ತಾಯಿಸುತ್ತಿದ್ದರು. ಆದರೆ ಜಾತಿ ಬೇರೆ ಹಾಗೂ ಎದುರು ಮನೆಯವರು ಬೇಡ ಎಂದು ಪೋಷಕರು ಮದುವೆಗೆ ನಿರಾಕರಿಸಿದ್ದರು. ಇದರಿಂದ ಮನನೊಂದಿದ್ದ ಪ್ರೇಮಿಗಳು ತಮ್ಮ ಪ್ರೀತಿಗೆ ಹಿರಿಯರು ಬೆಲೆ ಕೊಡುವದಿಲ್ಲ ಎಂದು ಹೇಳಿ ಆತ್ಮಹತ್ಯೆ ಗೆ ಶರಣಾಗಿದ್ದಾರೆ.
ಸಾಯುವ ಮುನ್ನ ಮದುವೆಯಾಗಿದ್ದ ಜೋಡಿ: ರಾಕೇಶ ಹಾಗೂ ಸಾವಿತ್ರಿ ಮದುವೆಗೆ ಎರಡು ಕುಟುಂಬದವರು ನಿರಾಕರಿಸಿದ್ದರಿಂದ ಮನ ನೊಂದಿದ್ದ ಪ್ರೇಮಿಗಳು ಮಂಗಳವಾರವೇ ಮನೆಯಿಂದ ಓಡಿ ಹೋಗಿದ್ದರು. ತಮ್ಮ ಆಸೆಯಂತೆ ಮದುವೆಯಾಗಿ ನಂತರ ನೇಣಿಗೆ ಶರಣಾಗಿದ್ದಾರೆ. ನೇಣು ಬಿಗಿದುಕೊಂಡು ಸಾವನ್ನಪ್ಪಿದ ಮೇಲೆ ಗ್ರಾಮದ ಜನರಿಗೆ ವಿಷಯ ಗೊತ್ತಾಗಿದೆ.
engaluru Murder: ಪ್ರೀತಿ ನಿರಾಕರಿಸಿದಳೆಂದು ಯುವತಿಯ ಕತ್ತು ಕೊಯ್ದ ಪಾಗಲ್ ಪ್ರೇಮಿ!
ಶವದ ಕೊರಳಲ್ಲಿತ್ತು ತಾಳಿ..! ಶವಗಳನ್ನು ನೇಣಿನಿಂದ ಕೆಳಗೆ ಇಳಿಸಿದ ಮೇಲೆ ಸಾವಿತ್ರಿ ಕೊರಳಲ್ಲಿ ತಾಳಿ ಇರುವದು ಗೊತ್ತಾಗಿದೆ. ಹೀಗಾಗಿ ತಮ್ಮ ಆಸೆಯಂತೆ ಮದುವೆಯಾಗಿ ನಂತರ ಆತ್ಮಹತ್ಯೆ ಮಾಡಿ ಕೊಂಡಿರಬಹುದು ಎಂದು ಬಸವನಬಾಗೇವಾಡಿ ಪಿಎಸ್ ಐ ದಡ್ಡಿಮನಿ ತಿಳಿಸಿದ್ದಾರೆ. ಬಸವನಬಾಗೇವಾಡಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯ ಕುರಿತು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.