ಕ್ವಾರಂಟೈನ್‌ನಲ್ಲಿ ಪ್ರೇಮಾಂಕುರ: ಮಗು ಬಿಟ್ಟು, ವಿವಾಹಿತ ಪ್ರೇಮಿ ಜೊತೆ ಮಹಿಳೆ ಪರಾರಿ!

By Kannadaprabha News  |  First Published May 21, 2020, 9:44 AM IST

ಹೀಗೊಂದು ಲವ್‌ - ಉಡು​ಪಿಯ ಕಾರ್ಕ​ಳ​ದಲ್ಲಿ ಅಚ್ಚ​ರಿಯ ಪ್ರಸಂಗ| ‘ಕೊರೋನಾ ಪ್ಯಾರ್‌ ಹೇ’!| ಮಗು ಬಿಟ್ಟು ವಿವಾಹಿತ ಪ್ರಿಯಕರನ ಜೊತೆ ಪರಾರಿಯಾದ ಮಹಿಳೆ


ಕಾರ್ಕಳ(ಮೇ.21): ಹೋಂ ಕ್ವಾರಂಟೈನ್‌ ಮುಗಿಯುತ್ತಿದ್ದಂತೆ ವಿವಾಹಿತೆಯೊಬ್ಬರು ತನ್ನ ಮಗು ಬಿಟ್ಟು ವಿವಾಹಿತ ಪ್ರಿಯಕರನ ಜೊತೆ ಪರಾರಿಯಾದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದಲ್ಲಿ ನಡೆದಿದೆ.

ಅಜೆಕಾರು ಕೈಕಂಬದ 28 ವರ್ಷದ ಗೃಹಿಣಿ 8 ವರ್ಷಗಳ ಹಿಂದೆ ಮದುವೆಯಾಗಿ ಪುಣೆಯಲ್ಲಿ ನೆಲೆಸಿದ್ದರು. ಆದರೆ, 4 ತಿಂಗಳ ಹಿಂದೆ ಕೌಟುಂಬಿಕ ಸಮಸ್ಯೆಯಿಂದ 8 ವರ್ಷದ ಮಗಳೊಂದಿಗೆ ಊರಿಗೆ ಬಂದು ಈಕೆ ಹೆತ್ತವರೊಂದಿಗೆ ವಾಸವಾಗಿದ್ದರು. ಈ ಸಂದರ್ಭದಲ್ಲಿ ಮಂಗಳೂರಿನಲ್ಲಿ ನಡೆದ ಸಂಬಂಧಿಕರ ವಿವಾಹಕ್ಕೆ ಹೋಗಿ ಊರಿಗೆ ಬಂದ ಆಕೆ, ತಾಯಿ, ಸಹೋದರನನ್ನು ಅಜೆಕಾರಿನಲ್ಲಿ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು.

Tap to resize

Latest Videos

ಕ್ವಾರಂಟೈನ್‌ ಕೇಂದ್ರದಲ್ಲಿ ಸೆಕ್ಸ್: ರಾತ್ರಿ ವೇಳೆ ಒಬ್ಬರ ಕೋಣೆಯಲ್ಲಿ ಮತ್ತೊಬ್ಬರು ಪತ್ತೆ!

ಮಂಗಳೂರಿನಲ್ಲೇ ಸಿಲುಕಿಕೊಂಡು ಕ್ವಾರಂಟೈನ್‌ನಲ್ಲಿದ್ದ ಆಕೆಯ ತಂದೆ ಮನೆಗೆ ಬರುವಷ್ಟರಲ್ಲಿ ಮಗಳು ತಾನು ಹಲವು ವರ್ಷಗಳ ಹಿಂದೆ ಪ್ರೀತಿಸಿದ್ದ ಮೂಡುಬಿದಿರೆ ಮೂಲದ ವಿವಾಹಿತ ವ್ಯಕ್ತಿಯೊಂದಿಗೆ ನಾಪತ್ತೆಯಾಗಿದ್ದಾಳೆ. ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!