ಪ್ರೀತಿ ಬಲೆಯಲ್ಲಿ ಬಾಲಕ : ಮಧ್ಯರಾತ್ರಿ ಮಗಳ ಮೂಲಕ ಮನೆಗೆ ಕರೆಸಿ ಕೊಲೆಗೈದ ಮುಖಂಡ

By Kannadaprabha News  |  First Published Apr 16, 2021, 2:57 PM IST

ಮಂಡ್ಯದಲ್ಲೊಂದು ಭೀಕರ ಘಟನೆ ನಡೆದಿದೆ. ಬಾಲಕ ಶ್ರೀಮಂತರ ಮನೆಯ ಬಾಲಕಿಯ ಪ್ರೇಮದ ಬಲೆಯಲ್ಲಿ ಬಿದ್ದಿದ್ದ. ಮಧ್ಯರಾತ್ರಿ ಆಕೆ ಕರೆದಳೆಂದು ಬಂದವ ಅಲ್ಲಿಯೇ ಶವವಾದ. ಪ್ರೀತಿ ನಡುವೆ ಬಂದಿದ್ದು ಅಂತಸ್ತು, ಜಾತಿ.


ಮಂಡ್ಯ (ಏ.16):  ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಬಾಲಕನೊಬ್ಬ ಕೊಲೆಯಾಗಿರುವ ಘಟನೆ ನಗರದ ಕಲ್ಲಹಳ್ಳಿ ಬಡಾವಣೆಯ ವಿಶ್ವೇಶ್ವರಯ್ಯ ನಗರದಲ್ಲಿ ಗುರುವಾರ ಮುಂಜಾನೆ ನಡೆದಿದೆ.

ಬಡಾವಣೆಯ ನಿವಾಸಿ ಸತೀಶ್ ಅವರ ಪುತ್ರ  ದರ್ಶನ್ (17) ಪ್ರೇಮ ಪ್ರಕರಣಕ್ಕೆ ಬಲಿಯಾದ ಬಾಲಕ. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್.ಶಿವಲಿಂಗು ಹಾಗೂ ಇತರರು ಬಾಲಕನನ್ನು ಮಧ್ಯರಾತ್ರಿ ಮನೆಗೆ ಕರೆಸಿಕೊಂಡು ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಮೃತನ ಪೋಷಕರು ಗಂಭೀರವಾಗಿ ಆರೋಪಿಸಿದ್ದಾರೆ.

Tap to resize

Latest Videos

ಬಾಲಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನ ಸೋದರ ಮಾವ ನೀಡಿದ ದೂರನ್ನು ಆಧರಿಸಿ 15 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, 5 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಏನಾಯ್ತು? ಮಂಡ್ಯ ನಗರಸಭೆಯ 7ನೇ ವಾರ್ಡ್ ನ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್.ಶಿವಲಿಂಗು ಹಾಗೂ ಸರ್ಕಾರಿ ಶಾಲಾ ಶಿಕ್ಷಕಿ ಅನು ರಾಧ ದಂಪತಿ ಪುತ್ರಿ ಹಾಗೂ ಸತೀಶ್ ಮತ್ತು ಪವಿತ್ರಾ ದಂಪತಿ ಪುತ್ರ ದರ್ಶನ್ ಕಳೆದೆರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.  ದರ್ಶನ್ ತಂದೆಗಾರೆ ಕೆಲಸ ಮಾಡಿಕೊಂ ಡು ಸಂಸಾರಕ್ಕೆ ನೆರವಾಗಿದ್ದರೆ, ತಾಯಿ ಚಿಲ್ಲರೆ ಅಂಗಡಿ ನಡೆಸುತ್ತಿದ್ದರು.  ಇಬ್ಬರ ಪ್ರೀತಿಯ ವಿಷಯ ಹುಡುಗಿಯ ತಂದೆ ಎಂ.ಎಸ್.ಶಿವಲಿಂಗು ಅವರಿಗೆ ತಿಳಿದಿತ್ತು. ದರ್ಶನ್ ಕುಟುಂಬದವರು ಆರ್ಥಿಕವಾಗಿ ಹಿಂದುಳಿದಿದ್ದರಲ್ಲ  , ಜಾತಿಯೂ ಬೇರೆ ಬೇರೆಯಾಗಿದ್ದರಿಂದ ಇಬ್ಬರ ಪ್ರೀತಿಯನ್ನು ಶಿವಲಿಂಗು ಒಪ್ಪಿರಲಿಲ್ಲವೆಂದು ಹೇಳಲಾಗಿದೆ. ಮಗಳ ಸಹವಾಸಕ್ಕೆ ಬರದಂತೆ ದರ್ಶನ್‌ಗೆ ಒಂದೆರಡು ಬಾರಿ ಎಚ್ಚರಿಕೆಯನ್ನೂ ನೀಡಿದ್ದರು. ಆದರೆ, ಇದನ್ನು ಲೆಕ್ಕಿಸದೆ ಇಬ್ಬರೂ ಪ್ರೀತಿಯನ್ನು ಮುಂದುವರೆಸಿದ್ದರು. ಇಬ್ಬರ ಪ್ರೀತಿ ಶಿವಲಿಂಗು ನೆಮ್ಮದಿಯನ್ನು ಕೆಡಿಸುವಂತೆ ಮಾಡಿತ್ತು ಎನ್ನಲಾಗಿದೆ.

ಸ್ನೇಹಿತನೊಂದಿಗೆ ಪತ್ನಿ ಅಕ್ರಮ ಸಂಬಂಧ : ರೆಡ್ ಹ್ಯಾಂಡ್‌ಆಗಿ ಸಿಕ್ಕಳು ಅವನ ಜೊತೆ

ಮಗಳ ಮೊಬೈಲ್ ಮೂಲಕ ಆತನಿಗೆ ಮನೆಗೆ ಬರುವಂತೆ ಗುರುವಾರ ಮುಂಜಾನೆ ಮೆಸೇಜ್  ಕಳುಹಿಸಿದ್ದಾರೆ. ಪ್ರೇಯಸಿ ಕಳುಹಿಸಿದ ಮೆಸೇಜ್ ನೋಡಿ ದರ್ಶನ್ ಕೂಡಲೇ ಆಕೆಯ ಮನೆಗೆ ಬಂದಿದ್ದಾನೆ. ಪ್ರಿಯಕರನಿಗೆ ಚಪ್ಪಲಿಯನ್ನು ಹೊರಗೆ ಬಿಟ್ಟು ಶಬ್ಧ ಮಾಡದಂತೆ ಒಳಗೆ ಬರಲು ಆಕೆ ತಿಳಿಸಿದ್ದಳು. ಅದರಂತೆ ದರ್ಶನ್ ಮನೆಯೊಳಗೆ ಹೋಗಿದ್ದನು ಎಂದು ಹೇಳಲಾಗಿದೆ.

ಈ ಸಮಯದಲ್ಲಿ ಹುಡುಗಿಯ ಕುಟುಂಬದವರು ಸೇರಿಕೊಂಡು ದರ್ಶನ್ ಮೇಲೆ ಹಲ್ಲೆ ನಡೆಸಲಾರಂಭಿಸಿದರು. ಹಲ್ಲೆಯಿಂದ ದರ್ಶನ್ ಚೀರಾಡಲಾರಂಭಿಸಿ ದಾಗ ಸುತ್ತಮುತ್ತಲಿನವರು ಎಚ್ಚರಗೊಂಡರು. ಹೊರಗೆ ಬಂದು ನೋಡಿದ ನೆರೆಹೊರೆಯವರು ಕೂಡಲೇ ಬಾಲಕನ ಸ್ನೇಹಿತರು, ಪೋಷಕರಿಗೆ ಸುದ್ದಿ ಮುಟ್ಟಿಸಿದರು.

ಅವರು ಸ್ಥಳಕ್ಕೆ ಬರುವ ವೇಳೆಗೆ ದರ್ಶನ್ ಗಂಭೀರವಾಗಿ ಗಾಯಗೊಂಡಿದ್ದನು. ಕೂಡಲೇ ಆತನನ್ನು ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್‌ಸ್ಗೆ ದಾಖಲಿಸಿದಾಗ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.  ದರ್ಶನ್ ಸಾವಿನಿಂದ ಪೋಷಕರು ಹಾಗೂ ಸ್ನೇಹಿತರ ಆಕ್ರಂದನ ಮುಗಿಲುಮುಟ್ಟಿತ್ತು. ದರ್ಶನ್ ನನ್ನು ಕೊಲೆ ಮಾಡುವ ಸಂಚಿನಿಂದಲೇ ಮಧ್ಯರಾತ್ರಿ ಕರೆಸಿಕೊಂಡಿದ್ದಾರೆ. ಇದೊಂದು ಪೂರ್ವನಿಯೋಜಿತ ಸಂಚು. ಬುದ್ಧಿಮಾತು ಹೇಳಿದ್ದರೆ ಅಥವಾ ನಮಗಾದರೂ ತಿಳಿಸಿದ್ದರೆ ಆ ಹುಡುಗಿಯ ತಂಟೆಗೆ ಹೋಗದಂತೆ ತಡೆಯುತ್ತಿದ್ದೆವು ಎಂದು ಪೋಷಕರು ಕಂಬನಿಗರೆಯುತ್ತಾ ಹೇಳಿದರು.

ಕೊಲೆ ಮಾಡಿರುವ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್.ಶಿವಲಿಂಗು ಸೇರಿದಂತೆ ಇತರರನ್ನು ಬಂಧಿಸಬೇಕು. ಮಗನ ಸಾವಿಗೆ ನ್ಯಾಯ ದೊರಕಿಸಬೇಕು ಎಂದು ಪೋಷಕರು ಒತ್ತಾಯಿಸಿದರು. ಘಟನೆ ಸಂಬಂಧ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಲಿಂಗು ಅವರ ಮನೆಗೆ ಬಿಗಿ ಪೊಲೀಸ್
ಬಂದೋ ಬಸ್‌ತ್ ವ್ಯವಸ್ಥೆ ಮಾಡಲಾಗಿದೆ.

click me!