
ಮಂಡ್ಯ: ಅನೈತಿಕ ಸಂಬಂಧದ ಹಿನ್ನೆಲೆ ಪ್ರಿಯಕರನೊಂದಿಗೆ ಗೃಹಿಣಿ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ತಾಲೂಕಿನ ಇಂಡುವಾಳು ಗ್ರಾಮ ಸಮೀಪವಿರುವ ರೈಲುಹಳಿ ಬಳಿ ನಡೆದಿದೆ.
ಬೆಂಗಳೂರಿನ ನಿವಾಸಿ ವೀರೇಶ್ ಅವರ ಪತ್ನಿ ಸಹನಾ (27) ಹಾಗೂ ಈಕೆಯ ಪ್ರಿಯಕರ ಮಡಿಕೇರಿ ಮೂಲದ ಸುರೇಶ ಅವರ ಪುತ್ರ ರಾಹುಲ್ (30) ಆತ್ಮಹತ್ಯೆ ಮಾಡಿಕೊಂಡವರು.
ಮಂಡ್ಯ ತಾಲೂಕು ಗುನ್ನಾಯ್ಕನಹಳ್ಳಿ ಮೂಲದ ಸಹನಾ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಪಾವಗಡದ ಸಮೀಪವಿರುವ ಅರಸೀಕೆರೆ ನಿವಾಸಿ ಬೆಂಗಳೂರಿನಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ವೀರೇಶ್‌ನೊಂದಿಗೆ ಪರಿಚಯವಾಗಿ ಪ್ರೀತಿಸಿ ಆತನನ್ನು ಮದುವೆ ಮಾಡಿಕೊಂಡು ಬೆಂಗಳೂರಿನಲ್ಲೇ ವಾಸಿಸುತ್ತಿದ್ದರು.
ಈ ದಂಪತಿಗೆ 5 ವರ್ಷದ ಹೆಣ್ಣು ಹಾಗೂ 2 ವರ್ಷದ ಗಂಡು ಮಗುವಿದೆ. ಈ ಮಧ್ಯೆ ರ್‍ಯಾಪಿಡ್ ಬೈಕ್ ಚಾಲನೆ ಮಾಡಿಕೊಂಡು ಜೀವನ ನಡೆಸುತ್ತಿದ್ದ ರಾಹುಲ್‌ನನ್ನು ಸಹನಾ ಪರಿಚಯ ಮಾಡಿಕೊಂಡಿದ್ದಾಳೆ. ನಂತರ ಇಬ್ಬರ ನಡುವೆ ಪ್ರೀತಿ ಆರಂಭವಾಗಿ ನಂತರ ಅನೈತಿಕ ಸಂಬಂಧ ಬೆಳೆದಿದೆ. ಈ ವಿಚಾರ ಗಂಡ ವೀರೇಶನಿಗೆ ತಿಳಿದು ಪತ್ನಿ ಸಹನಾಳೊಂದಿಗೆ ಜಗಳವಾಡಿದ್ದಾನೆ. ಜೊತೆಗೆ ಬುದ್ದಿ ಹೇಳಿ ನಡತೆ ಬದಲಿಸಿಕೊಳ್ಳುವಂತೆ ಎಚ್ಚರಿಕೆ ನೀಡಿದ್ದಾನೆ. ಆದರೂ ಸಹನಾ ತನ್ನ ಹಳೇ ಚಾಳಿಯನ್ನು ಮುಂದುವರಿದ್ದಾಳೆ.
ಈ ವಿಚಾರವಾಗಿ ಗಂಡ- ಹೆಂಡತಿ ನಡುವೆ ಜೋರು ಜಗಳವಾಗಿದೆ. ಇದರಿಂದ ಬೇಸತ್ತ ಸಹನಾ ತನ್ನ ಮಕ್ಕಳೊಂದಿಗೆ ಅಜ್ಜಿ ಮನೆ ಮಂಡ್ಯದ ಗುನ್ನನಾಹಕನಹಳ್ಳಿಗೆ ಆಗಮಿಸಿದ್ದರು. ನಂತರ ಸಹನಾ ರಾಹುಲ್ ನನ್ನು ಬೆಂಗಳೂರಿನಿಂದ ಮಂಡ್ಯಕ್ಕೆ ಕರೆಸಿಕೊಂಡಿದ್ದರು. ನಂತರ ಇಬ್ಬರು ತಾಲೂಕಿನ ಇಂಡುವಾಳು ಬಳಿಯ ಹೆದ್ದಾರಿ ಸರ್ವೀಸ್ ರಸ್ತೆ ಕಾಮಗಾರಿ ನಡೆಯುತ್ತಿರುವ ಸ್ಥಳದ ಸಮೀಪ ಆಗಮಿಸಿ ರಾತ್ರಿ ಸುಮಾರು 1.50ರ ಸಮಯದಲ್ಲಿ ಒಬ್ಬರನೊಬ್ಬರು ತಬ್ಬಿಕೊಂಡು ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರ ದೇಹ ಛಿದ್ರವಾಗಿದೆ.
ಸುದ್ದಿ ತಿಳಿದ ರೈಲ್ವೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಶವಗಳನ್ನು ಮಿಮ್ಸ್‌ನ ಶವಾಗಾರಕ್ಕೆ ಸಾಗಿಸಿದರು. ಈ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಬೈಕ್ ಸಾಲದ ಕಂತು ಪಾವತಿಸಿಲ್ಲ ಎಂದು ಎಲ್ ಅಂಡ್ ಟಿ ಮೈಕ್ರೋ ಫೈನಾನ್ಸ್ ಕಂಪನಿ ಏಜೆಂಟರು ವ್ಯಕ್ತಿ ಮೇಲೆ ಹಲ್ಲೆ ಮಾಡಿ, ಆತನ ಸಾವಿಗೆ ಕಾರಣರಾಗಿದ್ದ ಇಬ್ಬರು ಮೈಕ್ರೋ ಫೈನಾನ್ಸ್ ಕಂಪನಿಯ ರಿಕವರಿ ಏಜೆಂಟರನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ರೇವಂತ್ (21) ದಿಲೀಪ್ (22) ಬಂಧಿತ ಏಜೆಂಟರುಗಳು. ಇವರು ಆ.28ರಂದು ನೆಲಮಂಗಲ ತಾಲೂಕಿನ ಬೂದಿಹಾಳ್ ಗ್ರಾಮದ ಬಳಿ ಟಿ.ಬೇಗೂರಿನ ಮುರಳಿ(39) ಬೈಕ್ ಸಾಲದ ಕಂತು ಪಾವತಿಸಿಲ್ಲ ಎಂದು ಆತನನ್ನು ಹಿಂಬಾಲಿಸಿ ಬೆನ್ನಟ್ಟಿದ್ದ ಏಜೆಂಟರು, ಚಲಿಸುತ್ತಿದ್ದ ಬೈಕ್ ಗೆ ಕಾಲಿನಿಂದ ಒದ್ದು ರಸ್ತೆಗೆ ಬೀಳಿಸಿ ದ್ದರು. ಮುರಳಿ ಬೀಳುತ್ತಿದ್ದಂತೆ ರಿಕವರಿ ಏಜೆಂಟರ್ ಸ್ಥಳದಿಂದ ಪರಾರಿಯಾಗಿದ್ದರು.
ಘಟನೆಯಲ್ಲಿ ತೀವ್ರ ಗಾಯ ಗೊಂಡಿದ್ದ ಮುರಳಿ ಅವರನ್ನು ಸ್ಥಳೀಯರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಕೃತ್ಯ ಎಸಗಿ ತಲೆಮರೆಸಿಕೊಂಡಿದ್ದ ಇಬ್ಬರು ಮೈಕ್ರೋ ಫೈನಾನ್ಸ್ ಏಜೆಂಟರನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.