ಹೆದ್ದಾರಿಯಲ್ಲೇ ಲಾರಿ ಚಾಲಕನ ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ

Suvarna News   | Asianet News
Published : Mar 10, 2021, 12:53 PM IST
ಹೆದ್ದಾರಿಯಲ್ಲೇ ಲಾರಿ ಚಾಲಕನ ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ

ಸಾರಾಂಶ

ರಾಷ್ಟ್ರೀಯ ಹೆದ್ದಾರಿಯಲ್ಲೇ ಲಾರಿ ಚಾಲಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ  ಹಣ ಕಿತ್ತುಕೊಂಡ ಹೋದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗಂಭೀರವಾಗು ಗಾಯಗೊಂಡ ಚಾಲಕಗೆ ನೆಲಮಂಗಲದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ನೆಲಮಂಗಲ (ಮಾ.10):  ಲಾರಿ ಚಾಲಕನಿಗೆ ಚಾಕು ಇರಿದು ಮಾರಣಾಂತಿಕ ಹಲ್ಲೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 

ನೆಲಮಂಗಲ ತಾಲ್ಲೂಕು ರಾಷ್ಟ್ರೀಯ ಹೆ‌ದ್ದಾರಿ 4ರ ತುಮಕೂರು ರಸ್ತೆ ಹನುಮಂತಪುರ ಬಳಿ ಎರಡು ದಿನಗಳ ಹಿಂದೆಯೇ ಈ ದುರ್ಘಟನೆ ನಡೆದಿದೆ. ದ್ವಿಚಕ್ರವಾಹನದಲ್ಲಿ ಬಂದ ನಾಲ್ವರು ಅಪರಿಚಿತರು ಈ ದುಷ್ಕೃತ್ಯ ಎಸಗಿದ್ದಾರೆ. 

ಮಹಾರಾಷ್ಟ್ರ ಮೂಲದ ಭರತ್ ವಿಠಲ್ ಕಾಂಬ್ಳೆ 62 ವರ್ಷ ವಯಸ್ಸಿನ ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ನೆಲಮಂಗಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.   

ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಯುವಕ ಆತ್ಮಹತ್ಯೆ : ಡೆತ್‌ನೋಟ್‌ನಲ್ಲೇನಿತ್ತು..?

ವಿಜಯ ಲಾಜಿಸ್ಟಿಕ್ಸ್ ಕಂಪನಿಯಲ್ಲಿ ಲಾರಿ ಚಾಲಕ ಭರತ್ ಕೆಲಸ ಮಾಡುತ್ತಿದ್ದು, ಹೆದ್ದಾರಿಯಲ್ಲಿ ಅಡ್ಡಗಟ್ಟಿ ಚಾಕುವಿನಿಂದ ಇರಿದು 11 ಸಾವಿರ ಕಿತ್ತುಕೊಂಡಿದ್ದರು. 

ಈ ಪ್ರಕರಣ ಸಂಬಂಧ ಇದೀಗ ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

PREV
click me!

Recommended Stories

CM Siddaramaiahಗೆ ಈಶ್ವರಪ್ಪ ವಾರ್ನಿಂಗ್: ಭಗವದ್ಗೀತೆ ಓದಲಿ, ತಾಕತ್ತಿದ್ದರೆ ಕುರಾನ್ ಬಗ್ಗೆ ಮಾತನಾಲಿ
ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ