ಬೆಂಗಳೂರಿನಲ್ಲಿ ಯುವಕನೋರ್ವ ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಬೆಂಗಳೂರು (ಮಾ.10): ಕೆಲಸ ಮಾಡುತಿದ್ದ ಕಂಪನಿಯೊಳಗೆ ಉದ್ಯೋಗಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಚಿಕ್ಕಜಾಲದ ಎಂವಿ ಸೋಲಾರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶಾಂತ ಕುಮಾರ್ ಎಂಬಾತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾತ್ರಿ 9:30ರ ಸುಮಾರಿಗೆ ಘಟನೆ ನಡೆದಿದ್ದು, ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡಿದ್ದಾನೆ.
ಅಪ್ಪಿಕೊಂಡು, ಮುದ್ದಾಡುತ್ತಲೇ ಗರ್ಭಿಣಿ ಗರ್ಲ್‌ಫ್ರೆಂಡ್ ಕತ್ತು ಕೊಯ್ದ ಪ್ರೇಮಿ!
ಸಾಯುವ ಮುನ್ನ ಶಾಂತಕುಮಾರ್ ಡೆತ್ ನೋಟ್ ಬರೆದಿಟ್ಟಿದ್ದು, ಆರ್ಥಿಕ ಸಮಸ್ಯೆ ಹಾಗೂ ಇನ್ಕ್ರಿಮೆಂಟ್ ಆಗದ ಹಿನ್ನಲೆ ನೊಂದು ನೇಣಿಗೆ ಶರಣಾಗಿದ್ದಾಗಿ ಬರೆದಿದ್ದಾರೆ. ಮೂಲತಃ ಹಿರಿಯೂರಿನವನಾದ ಶಾಂತಕುಮಾರ್ ಹಲವು ವರ್ಷದಿಂದ ಇದೇ ಕಂಪನಿಯಲ್ಲಿ ಕೆಲಸಕ್ಕಿದ್ದರು. ಐಟಿಐ ಮುಗಿಸಿ ಕೆಲಸಕ್ಕೆ ಸೇರಿದ್ದ ಅವರು ಇತ್ತೀಚೆಗೆ ಆರ್ಥಿಕವಾಗಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರು.
ಅಲ್ಲದೇ ಕಂಪನಿಯಿಂದ ಕಳೆದ ನಾಲ್ಕು ವರ್ಷದಿಂದ ಇನ್ಕ್ರಿಮೆಂಟ್ ಆಗಿರಲಿಲ್ಲ. ಈ ಹಿನ್ನಲೆ ಡೆತ್ ನೋಟ್ ಬರೆದು ಆತಹತ್ಯೆ ಮಾಡಿಕೊಂಡಿದ್ದು, ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹ ಮರಣೊತ್ತರ ಪರೀಕ್ಷೆ ಅಂಬೇಡ್ಕರ್ ಆಸ್ಪತ್ರೆಯಲ್ಲಿ ನಡೆದಿದೆ.