ಕೋಲಾರ: ಲಾರಿ ಪಲ್ಟಿ, ರಸ್ತೆಯಲ್ಲಿ ಚೆಲ್ಲಾಡಿದ ಲಕ್ಷಾಂತರ ಮೌಲ್ಯದ ಟೊಮೆಟೋ

By Suvarna News  |  First Published Jan 2, 2020, 8:59 AM IST

ಲಾರಿ ಮಗುಚಿ ಬಿದ್ದು ಲಕ್ಷಾಂತರ ಮೌಲ್ಯದ ಟೊಮೆಟೋ ರಸ್ತೆಯಲ್ಲಿ ಚೆಲ್ಲಿದೆ. ಕೋಲಾರದಿಂದ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದ ಲಾರಿ ಮಗುಚಿ ಬಿದ್ದಿದ್ದು, ಲಾರಿಯಲ್ಲಿದ್ದ ಅಷ್ಟೂ ಟೊಮೆಟೋ ರಸ್ತೆಯ ತುಂಬ ಚೆಲ್ಲಿದೆ.


ಕೋಲಾರ(ಜ.02): ಲಾರಿ ಮಗುಚಿ ಬಿದ್ದು ಲಕ್ಷಾಂತರ ಮೌಲ್ಯದ ಟೊಮೆಟೋ ರಸ್ತೆಯಲ್ಲಿ ಚೆಲ್ಲಿದೆ. ಕೋಲಾರದಿಂದ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದ ಲಾರಿ ಮಗುಚಿ ಬಿದ್ದಿದ್ದು, ಲಾರಿಯಲ್ಲಿದ್ದ ಅಷ್ಟೂ ಟೊಮೆಟೋ ರಸ್ತೆಯ ತುಂಬ ಚೆಲ್ಲಿದೆ.

ಟೊಮೊಟೊ ತುಂಬಿದ್ದ ಲಾರಿ ಪಲ್ಟಿಯಾಗಿರುವ ಘಟನೆ ಕೋಲಾರ ತಾಲೂಕಿನ ‌ಸುಗಟೂರು ಬಳಿ ನಡೆದಿದೆ. ಲಾರಿ ಮಗುಚಿದ್ದು ಲಕ್ಷಾಂತರ ಮೌಲ್ಯದ ಟೊಮೆಟೋ ರಸ್ತೆಗೆ ಬಿದ್ದಿದೆ. ಕೋಲಾರದಿಂದ ಉತ್ತರ‌ ಪ್ರದೇಶಕ್ಕೆ ಟೊಮೊಟೊ ತೆಗೆದುಕೊಂಡು ಹೋಗುತ್ತಿದ್ದ ಲಾರಿ ಅಪಘಾತಕ್ಕೊಳಗಾಗಿದೆ.

Tap to resize

Latest Videos

ನಾವು ಪ್ರೀತಿ ಮಾಡಿ ಮದುವೆಯಾಗಿದ್ದೇವೆ ರಕ್ಷಣೆ ಕೊಡಿ

ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಲಾರಿಯಲ್ಲಿದ್ದ ಡ್ರೈವರ್ ಹಾಗೂ ಕ್ಲೀನರ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಷ್ಟವಾಗಿರುವ ಟೊಮೊಟೊ MBSM ಕಂಪನಿಯ ನದೀಮ್ ಎಂಬುವರಿಗೆ ಸೇರಿದ್ದಾಗಿದೆ. ಸುಮಾರು ‌ನಾಲ್ಕು ಲಕ್ಷ‌ ಮೌಲ್ಯದ ಟೊಮೊಟೊ ಬೀದಿಪಾಲಾಗಿದ್ದು ಲಾರಿ ಹಾಗೂ ಕ್ರೇಟ್ ಸೇರಿ ಹತ್ತು ಲಕ್ಷದಷ್ಟು ನಷ್ಟವಾಗಿದೆ.

ದಿನದೊಳಗೆ ಉಡುಪಿ ಜಿಲ್ಲೆಯಲ್ಲಿ ಎಸ್ಪಿ ಬದಲು!

click me!