ಮೆಚ್ಯೂರಿಟಿ ಹಣದ ಬಿಲ್ ಮಾಡಿಕೊಡಲು ಲಂಚಕ್ಕೆ ಬೇಡಿಕೆ, ಬಿಇಓ ಕಛೇರಿಯ ಗುಮಾಸ್ತ ಲೋಕಾ ಬಲೆಗೆ

By Suvarna News  |  First Published Jan 8, 2024, 6:15 PM IST

ನಿವೃತ್ತಿ ನಂತರದ ಜಿ.ಪಿ.ಎಫ್ ಮತ್ತು ಜಿ.ಐ.ಎಸ್ ಮೆಚ್ಯೂರಿಟಿ ಹಣದ ಬಿಲ್ಲುಗಳನ್ನು ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಗುಮಾಸ್ತ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಜ.8): ನಿವೃತ್ತಿ ನಂತರದ ಜಿ.ಪಿ.ಎಫ್ ಮತ್ತು ಜಿ.ಐ.ಎಸ್ ಮೆಚ್ಯೂರಿಟಿ ಹಣದ ಬಿಲ್ಲುಗಳನ್ನು ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಗುಮಾಸ್ತ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದೆ.

Tap to resize

Latest Videos

undefined

ಕಾಟೇರನಿಗೆ ಕಂಟಕ, ಲೇಟ್‌ ನೈಟ್‌ ಪಾರ್ಟಿಯಲ್ಲಿದ್ದ ನಟ ದರ್ಶನ್, ಡಾಲಿ ಧನಂಜಯ್‌ ಸೇರಿ 8 ಮಂದಿಗೆ ನೊಟೀಸ್‌!

ಬೀರೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುಮಾಸ್ತ ಚಂದ್ರಶೇಖರ್ ಲೋಕಾಯುಕ್ತ ಬಲೆಗೆ ಬಿದ್ದ ವ್ಯಕ್ತಿ.ವಯೋ ನಿವೃತ್ತಿಯ ನಂತರ ಪಡೆಯುವ ಜಿ.ಪಿ.ಎಫ್ ಮತ್ತು ಜಿ.ಐ.ಎಸ್ ಗಳ ಮೆಚ್ಯೂರಿಟಿ ಬಿಲ್ಲು ಮಾಡಿಕೊಡಲು 40,000/- ರೂ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, ಗುಮಾಸ್ತ ಚಂದ್ರಶೇಖರ್ ಜೊತೆ ಮಾತನಾಡಿದ ಸಂಭಾಷಣೆಯನ್ನು ಆಡಿಯೋ ಮಾಡಿಕೊಂಡು ಲೋಕಾಯುಕ್ತಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ, ಲೋಕಾಯುಕ್ತ ಅಧಿಕಾರಿ ಅನಿಲ್ ರಾತೋಡ್ ನೇತೃತ್ವದಲ್ಲಿ ದಾಳಿ ನಡೆಸಿ ಬೀರೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುಮಾಸ್ತ ಚಂದ್ರಶೇಖರ್ ಅನ್ನು ಬಂಧಿಸಲಾಗಿದೆ.

ಹಿಂದೂಗಳ ಊರಾಗಿದ್ದ ಲಕ್ಷದ್ವೀಪ ಸಂಪೂರ್ಣ ಮುಸ್ಲಿಮರ ಪಾಲಾಗಿದ್ದು ಹೇಗೆ?

ಟ್ಯಾಕ್ಸ್ ಉಳಿಸಿಕೊಡುತ್ತೇನೆ : 
ನೀವು ಸರ್ಕಾರಕ್ಕೆ ಕಟ್ಟಬೇಕಾದ ಟ್ಯಾಕ್ಸ್ ಉಳಿಸಿಕೊಡುತ್ತೇನೆ ಬಂದ ಹಣದಲ್ಲಿ ಇಬ್ಬರು ಫಿಫ್ಟಿ ಫಿಫ್ಟಿ ಮಾಡಿಕೊಳ್ಳೊಣ , ನೀವು ಸರ್ಕಾರಕ್ಕೆ ಕಟ್ಡಬೇಕಿದ್ದ ಟ್ಯಾಕ್ಸ್ ಉಳಿಸಿಕೊಂಡಿದ್ದೀರಿ, ಅದರ ಬಾಕಿ ಇದೆ. ಅದನ್ನು ನಾನು ಸರಿ ಮಾಡುತ್ತೇನೆ. ನನಗೆ ಬಂದ ಹಣದಲ್ಲಿ ಅರ್ಧ ಕೊಡಬೇಕು ಎಂದು ಲಂಚಕ್ಕೆ ಎಸ್ ಡಿ ಎ ಚಂದ್ರಶೇಖರ್ ಬೇಡಿಕೆ ಇಟ್ಟಿದ್ದರು. ಇಂದು ಎಸ್.ಡಿ.ಎ ಚಂದ್ರಶೇಖರ್ ೪೦ ಸಾವಿರ ಲಂಚದ ಹಣ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಕಾರ್ಯಾಚರಣೆಯಲ್ಲಿ ಲೋಕಾ ಇನ್ಸ್ಪೆಕ್ಟರ್ ಅನಿಲ್ ರಾಥೋಡ್ ಹಾಗೂ ಸಿಬ್ಬಂದಿ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

click me!