ಮೂಡುಬಿದಿರೆ ತಾಲೂಕಿನ ನಿಡ್ಡೋಡಿ ಹಾಗೂ ನೀರುಡೆ ಪರಿಸರದಲ್ಲಿ ಅಕ್ರಮವಾಗಿ ಕಾರಾರಯಚರಿಸುತ್ತಿದ್ದ 14 ಕೆಂಪು ಕಲ್ಲಿನ ಕೋರೆಗಳಿಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಬುಧವಾರ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಮಂಗಳೂರು(ಜೂ.18): ಮೂಡುಬಿದಿರೆ ತಾಲೂಕಿನ ನಿಡ್ಡೋಡಿ ಹಾಗೂ ನೀರುಡೆ ಪರಿಸರದಲ್ಲಿ ಅಕ್ರಮವಾಗಿ ಕಾರಾರಯಚರಿಸುತ್ತಿದ್ದ 14 ಕೆಂಪು ಕಲ್ಲಿನ ಕೋರೆಗಳಿಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಬುಧವಾರ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ನಿಡ್ಡೋಡಿ ಪರಿಸರದಲ್ಲಿ ಕಳೆದ ಕೆಲವು ವರ್ಷಗಳಿಂದ ಕಾನೂನುಬಾಹಿರವಾಗಿ ಕೆಂಪು ಕಲ್ಲು ಕೋರೆಗಳಿಂದ ಕಲ್ಲುಗಳನ್ನು ತೆಗೆಯಲಾಗುತ್ತಿತ್ತು. ಈ ನಿಟ್ಟಿನಲ್ಲಿ ಸಾರ್ವಜನಿಕರು ತಹಸೀಲ್ದಾರ್ ಅವರಿಗೆ ಕೆಲವು ದಿನಗಳ ಹಿಂದೆ ದೂರು ನೀಡಿದ್ದರು. ಈ ಸಂದರ್ಭ ನೀರುಡೆ ಪರಿಸರದ ಒಂದು ಕಲ್ಲುಕೋರೆಗೆ ಭೂ ಮತ್ತು ಗಣಿ ಇಲಾಖೆ ಅಧಿಕಾರಿಗಳು ಹಾಗೂ ಮೂಡುಬಿದಿರೆ ತಹಸೀಲ್ದಾರ್ ಜಂಟಿ ದಾಳಿ ನಡೆಸಿದ್ದರು.
undefined
ದಕ್ಷಿಣ ಕನ್ನಡದಲ್ಲಿ 8 ಪಾಸಿಟಿವ್, ಒಬ್ಬರು ಡಿಸ್ಚಾರ್ಜ್
ತಹಸೀಲ್ದಾರ್ ಅವರು ಕೇವಲ ಒಂದು ಕೋರೆಗೆ ಮಾತ್ರ ದಾಳಿ ನಡೆಸಿದ್ದರು. ಉಳಿದ ಅಕ್ರಮ ಕಲ್ಲಿನ ಕೋರೆಗಳು ಕಾರ್ಯಚರಿಸುತ್ತಿರುವುದಕ್ಕೆ ಕ್ರಮ ಕೈಗೊಳ್ಳುವ ಬಗ್ಗೆ ಸ್ಥಳೀಯರಿಗೆ ಅಸಮಾಧಾನವಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಇನ್‌ಸ್ಪೆಕ್ಟರ್ ಭಾರತಿ, ಎಎಸ್‌ಐ ವೇಣುಗೋಪಾಲ ಸಿಬ್ಬಂದಿ ಸುರೇಂದ್ರ ಹಾಗೂ ಪ್ರದೀಪ್ ದಾಳಿ ನಡೆಸಿದರು. ಬೆಳಗ್ಗೆಯಿಂದ ಸಂಜೆಯವರೆಗೆ ಸುಮಾರು 14 ಕಲ್ಲುಕೋರೆಗಳನ್ನು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.