* ಲೋಕಾಯುಕ್ತದಲ್ಲಿರೋ ಅಧಿಕಾರಿಗಳಿಗೆ ಬಿಬಿಎಂಪಿ ಸದಸ್ಯರು ಇದಾರೋ, ಇಲ್ವೋ ಅನ್ನೋದೇ ಗೊತ್ತಿಲ್ಲ
* ಲೋಕಾಯುಕ್ತ ಪತ್ರಕ್ಕೆ ಪ್ರತಿ ಉತ್ತರ ನೀಡೋದಕ್ಕೆ ಬಿಬಿಎಂಪಿ ಅಧಿಕಾರಿಗಳ ಚಿಂತನೆ
* ಲೋಕಾಯುಕ್ತ ಪತ್ರದಿಂದ ಕಂಗೆಟ್ಟಿದ್ದಾರೆ ಪಾಲಿಕೆ ಅಧಿಕಾರಿಗಳು
ಬೆಂಗಳೂರು(ಮೇ.31): ಲೋಕಾಯುಕ್ತ ಪತ್ರ ನೋಡಿ ಪಾಲಿಕೆ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಹೌದು, ಲೋಕಾಯುಕ್ತ ಅಧಿಕಾರಿಗಳ ಎಡವಟ್ಟಿನಿಂದ ಬಿಬಿಎಂಪಿ ಅಧಿಕಾರಿಗಳು ಅಕ್ಷರಶಃ ನಿದ್ದೆಗೆಟ್ಟಿದ್ದರು.
ಪತ್ರದಲ್ಲಿ ಏನಿದೆ?
ಲೋಕಾಯುಕ್ತ ಕಚೇರಿ ಅಧಿಕಾರಿಗಳು ಬಿಬಿಎಪಿ ಅಯುಕ್ತರಿಗೆ ಪತ್ರವೊಂದನ್ನು ಬರೆದಿದ್ದರು. 2021-22 ನೇ ಸಾಲಿನ ಅಸ್ತಿ ವಿವರ ಸಲ್ಲಿಸುವಂತೆ ಲೋಕಾಯುಕ್ತ ಕಚೇರಿಯಿಂದ ಬಿಬಿಎಂಪಿಗೆ ಪತ್ರವೊಂದು ಬಂದಿತ್ತು. ಹಾಲಿ ಪಾಲಿಕೆ ಸದಸ್ಯರು, ಮಹಾಪೌರರು ಸೇರಿದಂತೆ ಎಲ್ಲಾ ಸದಸ್ಯರ ಕುಟುಂಬ ಸಮೇತ ಆಸ್ತಿ ವಿವರ ಸಲ್ಲಿಸುವಂತೆ ಪತ್ರದಲ್ಲಿ ತಿಳಿಸಿಲಾಗಿತ್ತು.
ಬೆಂಗ್ಳೂರಲ್ಲಿ ಇನ್ನೂ ಇವೆ 1478 ಕಸ ಸುರಿವ ಬ್ಲಾಕ್ ಸ್ಪಾಟ್‌ಗಳು..!
ಜೂ.30 2022 ರೊಳಗೆ ಎಲ್ಲಾ ಸದಸ್ಯರು ಅಸ್ತಿ ವಿವರವನ್ನು ಲೋಕಾಯುಕ್ತ ಕಚೇರಿಗೆ ಸಲ್ಲಿಸುವಂತೆ ಪತ್ರದಲ್ಲಿ ತಿಳಿಸಲಾಗಿದೆ. ಆದರೆ, ಬಿಬಿಎಂಪಿ ಸದಸ್ಯರ ಅಧಿಕಾರ ಮುಗಿದು ಒಂದೂವರೆ ವರ್ಷ ಕಳೆದಿದೆ. ಲೋಕಾಯುಕ್ತ ಅಧಿಕಾರಿಗಳಿಗೆ ಈಗ್ಲೂ ಮಹಾಪೌರರ ಅಡಳಿತ ನಡೆತ್ತಿದೆ ಅನ್ನೋ ಭ್ರಮೆಯಲ್ಲಿದ್ದಾರೆ. ಸೆಪ್ಟೆಂಬರ್ 10, 2020 ರಲ್ಲಿ ಪಾಲಿಕೆ ಮಹಾಪೌರರು ಹಾಗೂ ಸದಸ್ಯರ ಅವಧಿ ಮುಕ್ತಯವಾಗಿದೆ. ಆದ್ರೆ ಈಗ ಲೋಕಾಯುಕ್ತ ಅಧಿಕಾರಿಗಳ ಎಡವಟ್ಟಿನಿಂದ ಪಾಲಿಕೆ ಆಯುಕ್ತರಿಗೆ ಪತ್ರ ಬಂದಿದೆ.
ಈ ಪತ್ರದಿಂದ ಪಾಲಿಕೆ ಅಧಿಕಾರಿಗಳು ಕಂಗೆಟ್ಟಿದ್ದಾರೆ. ಚುನಾಯಿತ ಜನಪ್ರತಿನಿದಿಗಳು ಇಲ್ದೇ ಅಸ್ತಿ ವಿವರ ಹೇಗೆ ಕೋಡೋದು ಅಂತ ತಲೆ ಮೇಲೆ ಕೈ ಇಟ್ಟು ಕುಳಿತಿದ್ದಾರೆ ಪಾಲಿಕೆ ಅಧಿಕಾರಿಗಳು. ಸದ್ಯ ಬಿಬಿಎಂಪಿಯಲ್ಲಿ ಮಹಾಪೌರರು ಇಲ್ಲ ಸದಸ್ಯರು ಇಲ್ಲ. ಲೋಕಾಯುಕ್ತ ಈ ರೀತಿ ಪತ್ರ ಬರೆದ್ರೆ ಹೇಗೆ ಉತ್ತರಿಸೋಣ ಅಂತ ಪಾಲಿಕೆಯ ಹಿರಿಯ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ. ಲೋಕಾಯುಕ್ತದಲ್ಲಿರೋ ಅಧಿಕಾರಿಗಳಿಗೆ ಬಿಬಿಎಂಪಿ ಸದಸ್ಯರು ಇದಾರೋ, ಇಲ್ವೋ ಅನ್ನೋದೇ ಗೊತ್ತಿಲ್ಲ. ಲೋಕಾಯುಕ್ತ ಪತ್ರಕ್ಕೆ ಪ್ರತಿ ಉತ್ತರ ನೀಡೋದಕ್ಕೆ ಬಿಬಿಎಂಪಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.