ಲೋಕಾಯುಕ್ತ ಪೊಲೀಸರು ರಾಜ್ಯದ ಹಲವು ಜಿಲ್ಲೆಗಳಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ಮುಟ್ಟಿಸಿದ್ದಾರೆ. ಸೂರ್ಯ ಮೂಡುವಷ್ಟರಲ್ಲಿ ಭ್ರಷ್ಟ ಅಧಿಕಾರಿಗಳ ಮನೆಗಳ ಕದತಟ್ಟಿದ್ದ ಅಧಿಕಾರಿಗಳು ಕೊಡಗಿನಲ್ಲೂ ಅಪರ ಜಿಲ್ಲಾಧಿಕಾರಿ ಡಾ. ನಂಜುಂಡೇಗೌಡ ಅವರ ಮನೆ ಮೇಲೆ ದಾಳಿ ಮಾಡಿದ್ದಾರೆ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಆ.17): ಲೋಕಾಯುಕ್ತ ಪೊಲೀಸರು ರಾಜ್ಯದ ಹಲವು ಜಿಲ್ಲೆಗಳಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ಮುಟ್ಟಿಸಿದ್ದಾರೆ. ಸೂರ್ಯ ಮೂಡುವಷ್ಟರಲ್ಲಿ ಭ್ರಷ್ಟ ಅಧಿಕಾರಿಗಳ ಮನೆಗಳ ಕದತಟ್ಟಿದ್ದ ಅಧಿಕಾರಿಗಳು ಕೊಡಗಿನಲ್ಲೂ ಅಪರ ಜಿಲ್ಲಾಧಿಕಾರಿ ಡಾ. ನಂಜುಂಡೇಗೌಡ ಅವರ ಮನೆ ಮೇಲೆ ದಾಳಿ ಮಾಡಿದ್ದಾರೆ. ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ ಅವರು ಎದ್ದೇಳುವ ಮೊದಲೇ ಮಡಿಕೇರಿಯಲ್ಲಿರುವ ಮನೆಗೆ ಹೋಗಿ ಬಾಗಿಲು ತೆರೆಸಿದ್ದ ಲೋಕಾಯುಕ್ತ ಪೊಲೀಸರು ಅಕ್ರಮವನ್ನು ಬಯಲಿಗೆ ಎಳೆದಿದ್ದಾರೆ. ಮನೆಯಲ್ಲಿ 23 ಲಕ್ಷ ನಗದು, 21.34 ಲಕ್ಷದ ಮೌಲ್ಯದ 388.2 ಗ್ರಾಂ ಚಿನ್ನಾಭರಣ, 9.408 ರೂಪಾಯಿಯ ಮೌಲ್ಯದ 235 ಗ್ರಾಂ ಬೆಳ್ಳಿಯ ವಸ್ತುಗಳು, 5 ಲಕ್ಷ ಮೌಲ್ಯದ ಕಾರು, 35 ಲಕ್ಷ ರೂಪಾಯಿ ಫಿಕ್ಸೆಡ್ ಡೆಪಾಸಿಟ್, ಮತ್ತೊಂದು ಬ್ಯಾಂಕ್ ಖಾತೆಯಲ್ಲಿ 4 ಲಕ್ಷ ಹಣ ಹೊಂದಿದ್ದಾರೆ.
undefined
ಜೊತೆಗೆ ವಿವಿಧೆಡೆ 2.55 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಖರೀದಿಸಿದ್ದಾರೆ. ತಮ್ಮ ಊರು ಚಾಮರಾಜನಗರದ ಕೊಳ್ಳೆಗಾಲದಲ್ಲಿ 83 ಲಕ್ಷ ಮೌಲ್ಯದ 23.74 ಎಕರೆ ಭೂಮಿ, ಕೊಡಗಿನ ಸುಂಟಿಕೊಪ್ಪದಲ್ಲಿ 10 ಲಕ್ಷ ಮೌಲ್ಯದ ಸೈಟ್, ಭಾಗಮಂಡಲದಲ್ಲಿ 40.30 ಲಕ್ಷ ಮೌಲ್ಯದ 6.80 ಎಕರೆ ಕೃಷಿ ಭೂಮಿ, ಪಿರಿಯಾಪಟ್ಟಣದ ವಿವಿಧೆಡೆ 71 ಲಕ್ಷ ಮೌಲ್ಯದ 20 ಎಕರೆ ಕೃಷಿ ಭೂಮಿ, ಜೊತೆಗೆ ಮೈಸೂರಿನ ವಿವಿಧೆಡೆ 36 ಲಕ್ಷ ಮೌಲ್ಯದ ಎರಡು ನಿವೇಶನ ಜೊತೆಗೆ 14.70 ಲಕ್ಷ ಮೌಲ್ಯದ 1.09 ಎಕರೆ ಕೃಷಿ ಭೂಮಿ ಖರೀದಿಸಿರುವುದು ಪತ್ತೆಯಾಗಿದೆ. ಒಟ್ಟಿನಲ್ಲಿ ಸ್ಥಿರಾಸ್ತಿ ಮತ್ತು ಚರಾಸ್ತಿ ಸೇರಿ 3.53 ಕೋಟಿ ಮೌಲ್ಯದ ಸಂಪತ್ತನ್ನು ಬಯಲಿಗೆಳೆದಿದ್ದಾರೆ.
ಹಳೆ ದೇಶಪಾಂಡೆ ಯುಗ ಮುಗಿಯಿತು, ಇನ್ನು ಸ್ಟ್ರಿಕ್ಟ್ ಆಗಿರುವೆ: ನಾನು ಯಾರಿಗೂ ಕಂಟ್ರಾಕ್ಟ್ ಕೊಡಲ್ಲ
ಕೊಡಗು ಲೋಕಾಯುಕ್ತ ಡಿವೈಎಸ್ಪಿ ಪವನ್ ಕುಮಾರ್ ನೇತೃತ್ವದಲ್ಲಿ ಮೂವರು ಇನ್ಸ್ಪೆಕ್ಟರ್ಗಳು ಮತ್ತು ಹತ್ತಕ್ಕೂ ಹೆಚ್ಚು ಸಿಬ್ಬಂದಿಗಳ ತಂಡ ಬೆಳಿಗ್ಗೆ 5.50 ಗಂಟೆಗೆ ದಾಳಿ ನಡೆಸಿತ್ತು. ಮನೆಗೆ ದಾಳಿ ಮಾಡಿ ತಲಾಶ್ ಶುರುಮಾಡಿದ್ದ ಅಧಿಕಾರಿಗಳಿಗೆ ಶಾಕ್ ಆಗಿತ್ತು. ಎಡಿಸಿ ಅವರ ಮನೆಯ ಯಾವ ಕಡೆಗೆ ಹೋಗಿ ನೋಡಿದರೂ ದುಡ್ಡಿನ ಕಂತೆಗಳೇ ಸಿಕ್ಕಿದ್ದವು. ಅಡುಗೆ ಕೋಣೆ, ಮಲಗುವ ಕೋಣೆ ಹೀಗೆ ಯಾವ ಕಡೆ ಹೋಗಿ ತಡಕಾಡಿದ್ದರೂ ಕಂತೆ, ಕಂತೆ ಹಣ ದೊರೆತಿತ್ತು. ಆರಂಭದಲ್ಲಿ ಕೈಯಿಂದಲೇ ಲೆಕ್ಕ ಹಾಕುವುದಕ್ಕೆ ಶುರು ಮಾಡಿದ್ದ ಲೋಕಾಯುಕ್ತ ಪೊಲೀಸರಿಗೆ ನಂತರ ಮತ್ತೆ ಮತ್ತೆ ಹಣದ ಕಂತೆ ದೊರೆತ್ತಿದ್ದರಿಂದ ಬಳಿಕ ಹಣ ಎಣಿಸುವ ಯಂತ್ರವನ್ನೇ ಮನೆಗೆ ತಂದು ಲೆಕ್ಕ ಹಾಕಿದರು.
ಸಾಕಷ್ಟು ಪ್ರಮಾಣದ ಕಾಯಿನ್ಗಳೇ ಮನೆಯಲ್ಲಿ ದೊರೆತ್ತಿದ್ದು ಲೆಕ್ಕ ಹಾಕುವುದಕ್ಕೆ ಲೋಕಾಯುಕ್ತ ಪೊಲೀಸರು ಸುಸ್ತು ಸುಸ್ತಾಗಿದ್ದಾರೆ. ಒಂದು ತಂಡ ಅವರ ಮನೆಯಲ್ಲಿ ಶೋಧ ಮುಂದುವರಿಸಿದ್ದಾಗಲೇ ಲೋಕಾಯುಕ್ತ ಪೊಲೀಸರ ಮತ್ತೊಂದು ತಂಡ ಅಪರ ಜಿಲ್ಲಾಧಿಕಾರಿ ಡಾ. ನಂಜುಂಡೇಗೌಡ ಅವರನ್ನು ಮನೆಯಿಂದ ಕೊಡಗು ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲೇ ಇರುವ ಅಪರ ಜಿಲ್ಲಾಧಿಕಾರಿ ಕಚೇರಿಗೆ ಕರೆದೊಯ್ದಿತು. ಅಲ್ಲಿಯೂ ಎರಡು ಗಂಟೆಗೂ ಹೆಚ್ಚು ಸಮಯ ಶೋಧ ನಡೆಸಿದ ಲೋಕಾಯುಕ್ತ ಪೊಲೀಸರಿಗೆ ಅಚ್ಚರಿಯೇ ಎದುರಾಗಿದೆ.
ಪ್ರಧಾನಿ ಮೋದಿ ಉದ್ದಿಮೆದಾರರ ಪರ: ಸಚಿವ ಸಂತೋಷ್ ಲಾಡ್
ಮನೆ ಜೊತೆಗೆ ಕಚೇರಿಯಲ್ಲಿಯೂ ಸಾಕಷ್ಟು ಆಸ್ತಿ ದಾಖಲೆ ಪತ್ರಗಳು ದೊರೆತ್ತಿವೆ. ಡಾ. ನಂಜುಂಡೇಗೌಡ ಅವರು ತಾವು ಎಲ್ಲಿಲ್ಲೆ ಸೇವೆ ಸಲ್ಲಿಸಿದ್ದಾರೆಯೋ ಅಲ್ಲೆಲ್ಲಾ ಆಸ್ತಿ ಖರೀದಿಸಿದ್ದಾರೆ ಎನ್ನುವುದು ಲೋಕಾಯುಕ್ತ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಸ್ಥಳಕ್ಕೆ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಪ್ರತಿಕ್ರಿಯಿಸಿದ ಅವರು ಸದ್ಯ ಇನ್ನೂ ಕೂಡ ತನಿಖೆ ನಡೆಯುತ್ತಿದ್ದು ಬಳಿಕ ಮಾಹಿತಿ ನೀಡುವುದಾಗಿ ತಿಳಿಸಿದರು. ಒಟ್ಟಿನಲ್ಲಿ ಲೋಕಾಯುಕ್ತ ಪೊಲೀಸರು ಭ್ರಷ್ಟ ಅಧಿಕಾರಿಗಳ ಭೇಟೆಯಾಡಿ ಅವರನ್ನು ಖೆಡ್ಡಾಕ್ಕೆ ಬೀಳಿಸಿದ್ದಾರೆ.