ಚಿತ್ರದುರ್ಗ (ಡಿ.19): ಕೌಟುಂಬಿಕ ಕಲಹದ (Family Clashes) ಹಿನ್ನೆಲೆಯಲ್ಲಿ ಪರಸ್ಪರ ದೂರವಾಗಿದ್ದ ದಂಪತಿಯನ್ನು ಶನಿವಾರ ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ್ ಅದಾಲತ್‌ನಲ್ಲಿ (Lok Adalath) ಒಂದಾಗುವುದರ ಮೂಲಕ ವಿರಸ ಮರೆತು ಸಾಂಸಾರಿಕ ಸಾಮರಸ್ಯದೆಡೆ ಹೆಜ್ಜೆ ಹಾಕಿದ್ದಾರೆ. ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರು (Judge) ನೀಡಿದ ಸಲಹೆ ಸ್ವೀಕರಿಸಿದ ದಂಪತಿಗಳು ಒಂದಾಗು ಹೋಗುವ ತೀರ್ಮಾನ ಕೈಗೊಂಡರು. ನ್ಯಾಯಾಧೀಶರ ಸಮ್ಮುಖದಲ್ಲಿ ಪರಸ್ಪರ ಹಾರ ಬದಲಿಸಿಕೊಂಡು ಕೂಡಿ ಬಾಳೋಣ ಎಂಬ ಪಥ ಅನುಸರಿಸಿದರು.
ಮೊಳಕಾಲ್ಮುರು ತಾಲೂಕಿನ ಕೊಂಡ್ಲಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಕನಾಗಿ (Teacher) ಕಾರ್ಯನಿರ್ವಹಿಸುತ್ತಿದ್ದ ಯುವಕ ಅದೇ ಗ್ರಾಮದ (Village) ಯುವತಿ ವರಿಸಿ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದ (Marruage). ನಂತರ ಹಾಸನಕ್ಕೆ (Hassan) ಕರೆದೊಯ್ದು ಅಲ್ಲಿ ಬದುಕು ಸಾಗಿಸಿದ್ದ. ಏತನ್ಮಧ್ಯೆ ತಂದೆ ತೀರಿಕೊಂಡಾಗ ಆಕೆ ಮರಳಿ ಕೊಂಡ್ಲಹಳ್ಳಿಗೆ ಬಂದು ತಾಯಿ ಸಂಗಡ ವಾಸವಾಗಿದ್ದರು. ಇದಾದ ತರುವಾಯ ಇಬ್ಬರ ನಡುವೆ ಸಣ್ಣ ಪುಟ್ಟವಾಗ್ವಾದಗಳು ಆಗಿ ಅಂತಿಮವಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ತನ್ನ ಗಂಡನಿಂದ ಮಾಸಿಕ ನಿರ್ವಹಣೆ ವೆಚ್ಚ ನೀಡುವಂತೆ ಆಕೆ ಸಲ್ಲಿಸಿದ್ದ ಮನವಿಗೆ ನ್ಯಾಯಾಲಯ ಪುರಸ್ಕರಿಸಿ ಆರು ಸಾವಿರ ರುಪಾಯಿ ನೀಡುವಂತೆ ಆದೇಶಿಸಿತ್ತು. ಪ್ರತಿಯಾಗಿ ಆತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ಹಂತದಲ್ಲಿ ನ್ಯಾಯಾಧೀಶರು (Judge) ಇಬ್ಬರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಪ್ರೇಮಾವತಿ ಎಂ ಮನುಗೊಳಿ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ.ಗಿರೀಶ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ ಜಿತೇಂದ್ರನಾಥ್, 2ನೇ ಅಪರ ಹರಿಯ ಸಿವಿಲ್ ನ್ಯಾಯಾಧೀಶ ದೇವರಾಜ್ ಈ ಸಂದರ್ಭದಲ್ಲಿ ಹಾಜರಿದ್ದರು.
ಡಿವೋರ್ಸ್‌ನಿಂದ ಹಿಂದೆ ಸರಿದ ಜೋಡಿ : ತಿಪಟೂರು ನಗರದ ನ್ಯಾಯಾಲಯದಲ್ಲಿ (Court) ನಡೆದ ಮೆಗಾ ಲೋಕ ಅದಾಲತ್ನಲ್ಲಿ ಕೌಟುಂಬಿಕ ಪ್ರಕರಣಗಳು, ಆಸ್ತಿ ವಿಚಾರಕ್ಕೆ ಸಂಬಂಧಸಿದ ಪ್ರಕರಣಗಳು, ಚೆಕ್ ಬೌನ್ಸ್ (Cheque Bounce) ಅಪಘಾತ, ವಿಮೆ ಸೇರಿದಂತೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದ ಒಟ್ಟು 4390 ಪ್ರಕರಣಗಳನ್ನು ಇತ್ಯರ್ಥ ಮಾಡಲಾಯಿತು.
ಅದಾಲತ್‌ನಲ್ಲಿ ಮುಖ್ಯವಾಗಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ (Civil Court) ವಿವಾಹ ವಿಚ್ಛೆದನಕ್ಕೆ (Divorce) ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ್ದ 2 ಜೋಡಿಗಳಾದ ಕಿರಣ್ ಮತ್ತು ತೇಜಸ್ವಿನಿ ಹಾಗು ಕೇಶವಮೂರ್ತಿ ಮತ್ತು ಗಾಯತ್ರಿ ಮತ್ತೆ ಒಟ್ಟಾಗಿ ಜೀವನ ನಡೆಸುವ ನಿಟ್ಟಿನಲ್ಲಿ ನಿರ್ಧಾರ ಕೈಗೊಂಡು ರಿಯೂನಿಯನ್ ಆಗಿ ಈ ಮೆಗಾ ಲೋಕ ಅದಲಾತ್‌ನಲ್ಲಿ ಒಂದಾದ ಘಟನೆ ನಡೆಯಿತು.
ಸಮಂತಾ-ನಗಚೈತನ್ಯ ವಿಚ್ಛೇದನೆ: ಸ್ಟಾರ್ ಜೋಡಿಗೆ ನಟಿ ಶ್ರೀರೆಡ್ಡಿ ಕಿವಿಮಾತಿದು
ಪ್ರಕರಣಗಳಿಗೆ ಹಿರಿಯ ವಕಿಲರಾದ ವೇಣು, ಎಚ್ ಎಲ್ ಸುಧಾಕರ್, ಭರತ್ರಾತ್, ಎಚ್ ಎಲ್ ಬಸವರಾಜು ಪರಿಶ್ರಮಕ್ಕೆ ಶ್ಲಾಘನೆ ವ್ಯಕ್ತವಾಯಿತು. ಈ ರೀತಿಯ ಅನೇಕ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತದೆ. ಕೆಲ ದಿನಗಳ ಹಿಂದೆ ಮೈಸೂರಿನಲ್ಲಿಯೂ (Mysuru) ಇದೇ ರೀತಿಯಾದ ಘಟನೆಯೊಂದು ನಡೆದಿತ್ತು.
ಗದಗದಲ್ಲಿಯೂ ಲೋಕ ಅದಾಲತ್ ನಲ್ಲೆ ಒಂದಾಗಿತ್ತು ಜೋಡಿ : ಮದುವೆಯಾದ ಬಳಿಕ ವಿವಿಧ ಕಾರಣಗಳಿಂದ ದೂರವಿದ್ದು ಹಲವು ವರ್ಷಗಳಿಂದ ವಿಚ್ಛೇದನಕ್ಕಾಗಿ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದ ಎರಡು ಜೋಡಿಗಳು ಗದಗ (Gadag) ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಮೆಗಾ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡು ಮತ್ತೊಮ್ಮೆ ಹೊಸ ಜೀವನಕ್ಕೆ ಕಾಲಿರಿಸಿದರು.
ವಿಧಿಯ ಆಟಕ್ಕೆ ಸಿಲುಕಿ ಬೇರೆ ಬೇರೆಯಾಗಿದ್ದ ಜೋಡಿಗಳು ಒಂದೆಡೆಯಾದರೆ ಮಕ್ಕಳು ಸಹ ತಂದೆ-ತಾಯಿ ಪ್ರೀತಿ ಸಿಗದೆ ಅನಾಥರಂತಾಗಿದ್ದರು. ಆದರೆ ನ್ಯಾಯಾಲಯದಲ್ಲಿ ಆಯೋಜಿಸಿದ್ದ ಲೋಕ ಅದಾಲತ್ ಇದಕ್ಕೆಲ್ಲ ಇತಿಶ್ರೀ ಹಾಡಿದ್ದು ದಂಪತಿಗಳನ್ನು ಒಂದಾಗಿಸಿ ಮಕ್ಕಳ ಸಂತಸಕ್ಕೂ ಕಾರಣವಾಗಿತ್ತು.