ಲಾಕಪ್ ಡೆತ್: PSI ಹೊಡೆತಕ್ಕೆ ಯುವಕ ಸಾವು ಆರೋಪ, ಗಬ್ಬೂರು ಉದ್ವಿಗ್ನ

By Web Desk  |  First Published Sep 15, 2019, 8:59 PM IST

ಪೊಲೀಸ್ ವಶದಲ್ಲಿದ್ದ ಯುವಕ ಸಾವು| ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಘಟನೆ| ಪಿಎಸ್ ಐ ಹೊಡೆತಕ್ಕೆ ಯುವಕ ಸಾವು ಆರೋಪ| ಯುವಕನ ಸಾವು ಖಂಡಿಸಿ ರಾಜ್ಯ ಹೆದ್ದಾರಿ ತಡೆದು ಟಯರ್ ಬೆಂಕಿ ಹಚ್ವಿ ಗ್ರಾಮಸ್ಥರ ಪ್ರತಿಭಟನೆ.


ರಾಯಚೂರು, [ಸೆ.15]: ಪೊಲೀಸ್ ಕಸ್ಟಡಿಯಲ್ಲಿ ಹಲ್ಲೆಗೊಳಗಾಗಿದ್ದ ಯುವಕನೊಬ್ಬ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಇಂದು[ಭಾನುವಾರ] ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ನಡೆದಿದೆ.

ಶಿವಕುಮಾರ್ (23) ಮೃತ ಯುವಕ. ಶಿವರಾಜ್ ಸಾವಿನಿಂದ ರೊಚ್ಚಿಗೆದ್ದ ಗ್ರಾಮಸ್ಥರು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿದ್ದು,  ಡಿವೈಎಸ್ ಪಿ  ವಾಹನದ ಗಾಜು ಪುಡಿ ಪುಡಿಯಾಗಿದೆ. 

Latest Videos

undefined

ರಾಯಚೂರು ಲಾಕಪ್ ಡೆತ್ ಆರೋಪ: ಯುವಕ ಸಾವಿನ ಬಗ್ಗೆ SP ಸ್ಪಷ್ಟನೆ ಹೀಗಿದೆ...

ಯುವಕನ ಸಾವಿಗೆ ಪೊಲೀಸರು ಕಾರಣವೆಂದು ರಾಜ್ಯ ಹೆದ್ದಾರಿ ತಡೆದು ಟಯರ್ ಬೆಂಕಿ ಹಚ್ವಿ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಗೊಬ್ಬೂರಿನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಗ್ರಾಮಸ್ಥರ ಆರೋಪವೇನು?
ಗಬ್ಬೂರು ಗ್ರಾಮದಲ್ಲಿ ನಿನ್ನೆ [ಶನಿವಾರ] ಗಣೇಶ ವಿಸರ್ಜನೆ ವೇಳೆ  ಗಲಾಟೆ ನಡೆದಿತ್ತು. ಆ ವೇಳೆ ಶಿವಕುಮಾರ್ ನನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಹಿಗ್ಗಾಮುಗ್ಗಾ ಹೊಡೆದು ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ತೀವ್ರ ಅಸ್ವಸ್ಥಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಗ್ರಾಮಸ್ಥರ ಆರೋಪವಾಗಿದೆ.

click me!