ಬ್ರೇಕಿಂಗ್: 11 ಜಿಲ್ಲೆಗಳಲ್ಲಿ ಲಾಕ್ ಮುಂದುವರಿಕೆ, ಉಳಿದೆಡೆ ಸಡಿಲಿಕೆ, ಸಮಯ ವಿಸ್ತರಣೆ

By Suvarna News  |  First Published Jun 10, 2021, 8:16 PM IST

* ಹನ್ನೊಂದು ಜಿಲ್ಲೆಗಳಲ್ಲಿ ಇನ್ನೊಂದು ವಾರ ಲಾಕ್ ಡೌನ್
* ಜೂ.  14  ರಿಂದ  19 ಜಿಲ್ಲೆಗಳು ಅನ್ ಲಾಕ್
* ಆಟೋ, ಕ್ಯಾಬ್ ಸಂಚಾರಕ್ಕೆ ಅನುಮತಿ
*  ಬಸ್ ಸಂಚಾರ ಆರಂಭ ಇಲ್ಲ


ಬೆಂಗಳೂರು(ಜೂ.  10) ಲಾಕ್ ಡೌನ್ ಮುಂದುವರಿಕೆ ಬೇಕೋ? ಬೇಡವೋ? ಎನ್ನುವುದಕ್ಕೆ ಉತ್ತರ ಸಿಕ್ಕಿದೆ.  ಪಾಸಿಟಿವಿಟಿ ಜಾಸ್ತಿ ಇರುವ ಜಿಲ್ಲೆಗಳಲ್ಲಿ ಲಾಕ್  ಸಂಪೂರ್ಣ ಲಾಕ್ ಆಗಿರಲಿದ್ದು ಉಳಿದ ಜಿಲ್ಲೆಗಳಲ್ಲಿ ಸೆಮಿ ಲಾಕ್ ಡೌನ್ ಮುಂದುವರಿಯಲಿದೆ. ಜಿಲ್ಲಾಧಿಕಾರಿಗಳು ನೀಡಿದ ವರದಿ ಆಧಾರದ ಮೇಲೆ ತೀರ್ಮಾನ ತೆಗೆದುಕೊಳ್ಳಲಾಗಿದೆ .

ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ,  ಹಾಸನ, ಮಂಡ್ಯ,  ಕೊಡಗು, ಬೆಂಗಳೂರು ಗ್ರಾಮಾಂತರ ಸೇರಿ  11 ಜಿಲ್ಲೆಗಳಲ್ಲಿ ಈಗಿರುವ ನಿಯಮದಲ್ಲಿ ಯಾವುದೇ ಸಡಿಲಿಕೆ ಇಲ್ಲ. ಪಾಸಿಟಿವಿಟಿ ದರ  ಇಳಿಯದ ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿಯಲಿದೆ.  ಬೆಂಗಳೂರು ಸೋಮವಾರದಿಂದ ಅನ್ ಲಾಕ್ ಆಗಲಿದೆ. 

Tap to resize

Latest Videos

ಎಂಟು ಜಿಲ್ಲೆಗಳ ಪರಿಸ್ಥಿತಿ ಹೇಗಿದೆ?

Positivity Rate ಹೆಚ್ಚಿರುವ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಮಂಡ್ಯ ಬೆಳಗಾವಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿಯಲಿದೆ. ಈಗಿರುವ ಮಾರ್ಗಸೂಚಿಗಳಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ, ಅಂದರೆ ಈ ಜಿಲ್ಲೆಗಳಲ್ಲಿ ಯಥಾಸ್ಥಿತಿ ಮುಂದುವರೆಯುತ್ತದೆ. ಹಾಗೂ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಉಸ್ತುವಾರಿ ಸಚಿವರುಗಳೊಂದಿಗೆ ಸಮಾಲೋಚಿಸಿ ಇನ್ನೂ ಹೆಚ್ಚಿನ ಕಠಿಣ ಕ್ರಮಗಳನ್ನು ಕೈಗೊಳ್ಳಲು ಅಧಿಕಾರ ನೀಡಲಾಗಿದೆ. 

ಮೊದಲ ಹಂತದ ಸಡಿಲಿಕೆ( ಅನ್ ಲಾಕ್ ನ ಹತ್ತೊಂಭತ್ತು ಜಿಲ್ಲೆಗಳಿಗೆ ಅನ್ವಯ) 
* ಎಲ್ಲ ಕಾರ್ಖಾನೆಗಳು ಶೇ.  50 ಸಿಬ್ಬಂದಿಯೊಂದಿಗೆ ಓಪನ್
*  ಗಾರ್ಮೆಂಟ್ಸ್  ಶೇ. 30 ಹಾಜರಾತಿಯೊಂದಿಗೆ ಓಪನ್
*  ಮಧ್ಯಾಹ್ನ  2 ಗಂಟೆವರೆಗೆ ಅಂಗಡಿ ತೆರೆಯಲು ಅವಕಾಶ
* ಸಿಮೆಂಟ್ , ಸ್ಟೀಲ್ ಅಂಗಡಿ ತೆರೆಯಲು ಅವಕಾಶ
* ಪಾರ್ಕ್ ಬೆಳಗ್ಗೆ 5 ರಿಂದ 10 ಓಪನ್ , ಮಧ್ಯಾಹ್ನ  2 ಗಂಟೆವರೆಗೆ ವ್ಯಾಪಾರ ಮಾಡಬಹುದು
* ಆಟೋ ಟ್ಯಾಕ್ಸಿಯಲ್ಲಿ ಇಬ್ಬರ ಪ್ರಯಾಣಕ್ಕೆ ಅವಕಾಶ
* ವಾರಾಂತ್ಯದ ನಿಷೇಧಾಜ್ಞೆ ಶುಕ್ರವಾರ ಸಂಜೆ ಏಳರಿಂದ ಸೋಮವಾರ ಬೆಳಗ್ಗೆ ವರೆಗೆ
* ಕೊರೋನಾ ನಿಯಮ ಕಟ್ಟುನಿಟ್ಟಿನ ಪಾಲನೆ ಮಾಡಬೇಕು
* ವಿವರವಾದ ಮಾರ್ಗಸೂಚಿ ಇನ್ನು ಬರಬೇಕಿದೆ

click me!