ಭಿಕ್ಷುಕನಿಗೆ ಮರು ಜೀವ ಕೊಟ್ಟ ಸಾರ್ವಜನಿಕರ ಗುಮಾನಿ: ಪರಿಶೀಲನೆ ನಡೆಸಿದ ಕೊರಟಗೆರೆ ಪೊಲೀಸರಿಗೆ ಶಾಕ್!

By Govindaraj S  |  First Published Oct 18, 2023, 1:38 PM IST

ಗಾಂಜಾ ಮಾರಾಟಗಾರ ಎಂಬ ಸಾರ್ವಜನಿಕರ ಗುಮಾನಿ ಭಿಕ್ಷುಕನಿಗೆ ಮರು ಜೀವನ ನೀಡಿದೆ. ಸಾರ್ವಜನಿಕರ ದೂರಿನ ಮೇರಿಗೆ ತಪಾಸಣೆ ನಡೆಸಿದ ಪೊಲೀಸರು ಭಿಕ್ಷುಕನ ಹಿನ್ನೆಲೆಯನ್ನು ಕುಲಂಕಷವಾಗಿ ಪರಿಶೀಲಿಸಿ ಆತನನ್ನು ವಾಪಸ್ ಮನೆ ಸೇರಿಸುವಲ್ಲಿ ಸಫಲರಾಗಿದ್ದಾರೆ. 
 


ವರದಿ: ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್‌, ತುಮಕೂರು. 

ತುಮಕೂರು (ಅ.18): ಗಾಂಜಾ ಮಾರಾಟಗಾರ ಎಂಬ ಸಾರ್ವಜನಿಕರ ಗುಮಾನಿ ಭಿಕ್ಷುಕನಿಗೆ ಮರು ಜೀವನ ನೀಡಿದೆ. ಸಾರ್ವಜನಿಕರ ದೂರಿನ ಮೇರಿಗೆ ತಪಾಸಣೆ ನಡೆಸಿದ ಪೊಲೀಸರು ಭಿಕ್ಷುಕನ ಹಿನ್ನೆಲೆಯನ್ನು ಕುಲಂಕಷವಾಗಿ ಪರಿಶೀಲಿಸಿ ಆತನನ್ನು ವಾಪಸ್ ಮನೆ ಸೇರಿಸುವಲ್ಲಿ ಸಫಲರಾಗಿದ್ದಾರೆ. ಈ ಮೂಲಕ ಕರ್ತವ್ಯದೊಂದಿಗೆ ಪೊಲೀಸರು ಮಾನವೀಯತೆ ಮರೆದಿದ್ದಾರೆ. ಇಂತಹ ಘಟನೆಯೊಂದು ತುಮಕೂರಿನ ಕೊರಟಗೆರೆ ತಾಲ್ಲೂಕಿನಲ್ಲಿ ನಡೆದಿದೆ. ಕೊರಟಗೆರೆ ಪೊಲೀಸ್ ಠಾಣೆಯ ಸಿಬ್ಬಂದಿ ಮಾನವೀಯತೆ ಮೆರೆದವರು.‌

Tap to resize

Latest Videos

undefined

ಘಟನೆ ಹಿನ್ನೆಲೆ: ಸಿದ್ದರಬೆಟ್ಟ ಬಳಿಯ ಮರೇನಾಯನಕಹಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ಭಿಕ್ಷುಕನೊಬ್ಬ ಚಲನವಲನ ಅನುಮಾನಾಸ್ಪದವಾಗಿ ಕಂಡ ಸ್ಥಳೀಯರು ಆತ ಗಾಂಜಾ ಮಾರಾಟಗಾರ ಎಂದು ಶಂಕಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಕೊರಡಗೆರೆ ಪೊಲೀಸರು ಆತನನ್ನು ತಪಾಸಣೆ ನಡೆಸಿದ್ದಾರೆ. ಆತನ ಬಳಿಯಿದ್ದ ಗಂಟು ಬಿಚ್ಚಿ ನೋಡಿದ್ದಾಗ 50 ಸಾವಿರ‌ ಹಣ ಪತ್ತೆಯಾಗಿದೆ. ಆ ಹಣವೂ ಕೂಡ 10,20,1,2 ರೂಪಾಯಿ‌ ಚಿಲ್ಲರೆ‌  ಹಣವಾಗಿದ್ದು, ಅದನ್ನು ಭಿಕ್ಷೆ ಮಾಡಿ ಕೂಡಿಟ್ಟುಕೊಂಡಿದ್ದಾನೆ ಎಂದು ತಿಳಿದು ಬಂದಿದೆ. 

ಅರಣ್ಯಾಧಿಕಾರಿಗೆ ನಿಂದನೆ: ಶಾಸಕ ಹರೀಶ್‌ ಪೂಂಜಾ ವಿರುದ್ಧ ಎಫ್ಐಆರ್ ದಾಖಲು!

ಕೂಡಲೇ ಆತನ ಪೂರ್ವಾಪರಗಳನ್ನು ವಿಚಾರಿಸಿದಾಗ,‌ಆತ ಗುಬ್ಬಿ ತಾಲೂಕಿನ ಚೇಳೂರು ಹೋಬಳಿ ಎಂ.ಹೆಚ್ ಪಟ್ಟಣ ಬಳಿಯ ಮಾದಾಪುರ ಗ್ರಾಮದ ನಿವಾಸಿಯಾಗಿದ್ದ ಗುರುಸಿದ್ದಪ್ಪ ಎಂಬು ಗುರುತು ಪತ್ತೆಯಾಗಿದೆ. ಕಳೆದ 10 ವರ್ಷಗಳ ಹಿಂದೆ ತನ್ನ ಪತ್ನಿ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡು ಮನೆ ಬಿಟ್ಟಿದ್ದ ಗುರುಸಿದ್ದಪ್ಪ ಭಿಕ್ಷೆ ಬೇಡುತ್ತಾ ಕಾಲ‌ ಕಳೆದಿದ್ದಾನೆ‌.  ಗುಬ್ಬಿ, ತುಮಕೂರು, ಕೊರಟಗೆರೆ ಭಾಗಗಳಲ್ಲಿ ಭಿಕ್ಷೆ ಬೇಡಿಕೊಂಡು ಜೀವನ ನಡೆಸಿದ್ದಾನೆ.‌ ಕೊನೆಗೆ ಪೊಲೀಸರು ಆತನ ಪತ್ನಿ ಹಾಗೂ ಪುತ್ರನನ್ನ ಠಾಣೆಗೆ ಕರೆಸಿ ಗುರುಸಿದ್ದಪ್ಪ ಹಾಗೂ ಆತನ ಬಳಿಯಿದ್ದ 50 ಸಾವಿರ ರೂಪಾಯಿ ಚಿಲ್ಲರೆ ಹಣವನ್ನು ಕೊಟ್ಟು ಮನೆಗೆ ಕಳುಹಿಸಿದ್ದಾರೆ. ಈ ಮೂಲಕ ಕೊರಟಗೆರೆ ಪೊಲೀಸರು ಭಿಕ್ಷುಕನಿಗೆ ಮರು ಜೀವನ ನೀಡಿ ಮಾನವಿಯತೆ ಮೆರೆದಿದ್ದಾರೆ.

click me!