ಚಿಕ್ಕಮಗಳೂರು: ದಾರಿ ತಪ್ಪಿಸಿಕೊಂಡು ಹೋಗುತ್ತಿದ್ದ ಮಗುವಿನ ರಕ್ಷಣೆ, ಸ್ಥಳೀಯರ ಕಾರ್ಯಕ್ಕೆ ಮೆಚ್ಚುಗೆ

By Girish Goudar  |  First Published Dec 27, 2023, 11:48 AM IST

ಮಗು ಶ್ರೇಯಸ್ ತರೀಕೆರೆ ಮಾರ್ಗವಾಗಿ ಹೊರಟಿದ್ದ ಬಸ್ ಹತ್ತಿದ್ದ, ತರೀಕೆರೆಯಲ್ಲಿ ಬಸ್ಸಿನಲ್ಲಿ ಅಳುತ್ತಿದ್ದ ಮಗುವನ್ನು ಸ್ಥಳೀಯರು ಠಾಣೆಗೆ ಕರೆದೊಯ್ದಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹರಿಬಿಟ್ಟ ಬಳಿಕ ಪೋಷಕರ ಗಮನಕ್ಕೆ ಬಂದಿತ್ತು. 

ಚಿಕ್ಕಮಗಳೂರು(ಡಿ.27):  ದಾರಿ ತಪ್ಪಿಸಿಕೊಂಡು ಹೋಗುತ್ತಿದ್ದ ಮಗುವನ್ನ ಸ್ಥಳೀಯರು ರಕ್ಷಿಸಿದ ಘಟನೆ ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ನಡೆದಿದೆ. 3 ವರ್ಷದ ಮಗು ಬಸ್ಸಿನಲ್ಲಿ ಅಜ್ಜನ ಜೊತೆ ಪ್ರಯಾಣಿಸುತ್ತಿತ್ತು, ಈ ವೇಳೆ ಅಜ್ಜ ನಿದ್ರೆಗೆ ಜಾರಿದ್ದರಿಂದ ಮಗು ಬಸ್‌ನಿಂದ ಕೆಳಗೆ ಇಳಿದಿತ್ತು.  

ಮಗು ಶ್ರೇಯಸ್ ತರೀಕೆರೆ ಮಾರ್ಗವಾಗಿ ಹೊರಟಿದ್ದ ಬಸ್ ಹತ್ತಿದ್ದ, ತರೀಕೆರೆಯಲ್ಲಿ ಬಸ್ಸಿನಲ್ಲಿ ಅಳುತ್ತಿದ್ದ ಮಗುವನ್ನು ಸ್ಥಳೀಯರು ಠಾಣೆಗೆ ಕರೆದೊಯ್ದಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹರಿಬಿಟ್ಟ ಬಳಿಕ ಪೋಷಕರ ಗಮನಕ್ಕೆ ಬಂದಿತ್ತು. 

Tap to resize

Latest Videos

undefined

ದತ್ತಪೀಠ ಭಾಗಶಃ ಹಿಂದೂಗಳಿಗೆ ಸಿಕ್ಕಂತಾಗಿದೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಇಮ್ರಾನ್ ಎಂಬ ಯುವಕ ಮಗುವನ್ನ ರಕ್ಷಣೆ ಮಾಡಿದ್ದ. ಪೋಷಕರು ಪೊಲೀಸ್ ಠಾಣೆಗೆ ಬಂದು ಮಗುವನ್ನು ಹಿಂಪಡೆದಿದ್ದಾರೆ.  ಮಗುವಿನ ಪೋಷಕರು ತರೀಕೆರೆ ತಾಲೂಕಿನ ತಣಿಗೇಬೈಲು ಗ್ರಾಮದ ನಿವಾಸಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರು ಹಾಗೂ ಸ್ಥಳೀಯರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

click me!