ಕನ್ನಡ ಕವಿಗಳ ನಾಮಫಲಕ ಬಡಾವಣೆಯ ರಸ್ತೆಗಳಿಗೆ ಅಳವಡಿಸಲು ಸ್ಥಳೀಯರ ವಿರೋಧ

By Kannadaprabha News  |  First Published Oct 30, 2024, 9:19 AM IST

ಕನ್ನಡ ಕವಿಗಳ ನಾಮಫಲಕವನ್ನು ಬಡಾವಣೆಯ ರಸ್ತೆಗಳಿಗೆ ಅಳವಡಿಸಲು ಹೋದಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಘಟನೆ ಆನೇಕಲ್‌ನ ನೆರಳೂರು ಪಂಚಾಯಿತಿ ವ್ಯಾಪ್ತಿಯ ಬೆಂಡಗಾನಹಳ್ಳಿಯ ಬ್ರಿಕ್‌ ಫೀಲ್ಡ್‌ ಶೆಲ್ವರ್ಸ್‌ನಲ್ಲಿ ನಡೆದಿದೆ. 


ಆನೇಕಲ್‌ (ಅ.30): ಕನ್ನಡ ಕವಿಗಳ ನಾಮಫಲಕವನ್ನು ಬಡಾವಣೆಯ ರಸ್ತೆಗಳಿಗೆ ಅಳವಡಿಸಲು ಹೋದಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಘಟನೆ ಆನೇಕಲ್‌ನ ನೆರಳೂರು ಪಂಚಾಯಿತಿ ವ್ಯಾಪ್ತಿಯ ಬೆಂಡಗಾನಹಳ್ಳಿಯ ಬ್ರಿಕ್‌ ಫೀಲ್ಡ್‌ ಶೆಲ್ವರ್ಸ್‌ನಲ್ಲಿ ನಡೆದಿದೆ. ಇದರಿಂದ ಕನ್ನಡ ಪರ ಸಂಘಟನೆಗಳು ಮತ್ತು ಸ್ಥಳೀಯ ನಿವಾಸಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಕೆಆರ್‌ಎಸ್‌ ಪಕ್ಷದ ಮುಖಂಡ ಮಹೇಶ್ ನೇತೃತ್ವದಲ್ಲಿ ಬ್ರಿಕ್‌ ಫೀಲ್ಡ್‌ ಶೆಲ್ವರ್ಸ್‌ ಬಡಾವಣೆಯ ರಸ್ತೆಗಳಿಗೆ ಕವಿಗಳು, ಸಾಹಿತಿಗಳು ಹಾಗೂ ಕನ್ನಡ ಹೋರಾಟಗಾರರ ಹೆಸರಿನ ನಾಮಫಲಕಗಳನ್ನು ಅಳವಡಿಸಲು ಹೋದಾಗ ಕೆಲವು ನಿವಾಸಿಗಳು ವಿರೋಧ ವ್ಯಕ್ತಪಡಿಸಿದರು.

ನಾಮ ಫಲಕಗಳನ್ನು ಕಿತ್ತುಹಾಕಲು ಮುಂದಾದ ಆಕ್ರೋಶಗೊಂಡ ಕಾರ್ಯಕರ್ತರು ಕನ್ನಡ ನಾಡಿನ ಅನ್ನ, ನೀರು, ಗಾಳಿ ಬೇಕು. ಕನ್ನಡ ಕಟ್ಟಿ ಬೆಳೆಸಿದ ಮಹನೀಯರ ಸ್ಮರಣೆ ಬೇಡವೇ ಎಂದಾಗ ಮಾತಿನ ಚಕಮಕಿ ನಡೆಯಿತು. ಕೂಡಲೇ ಮಧ್ಯ ಪ್ರವೇಶಿಸಿದ ಅತ್ತಿಬೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿವರಣೆ ಪಡೆದರು. ಈ ನಡುವೆ ಮಹೇಶ್‌, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಬದುಕು ನಡೆಸಲು ಬಂದ ಕನ್ನಡಡೇತರರು ಕನ್ನಡ ಕಲಿತು, ಕನ್ನಡದ ಅಸ್ಮಿತೆಯನ್ನು ಉಳಿಸುವ ಜೊತೆಗೆ ಕನ್ನಡಿಗರನ್ನು ಗೌರವಿಸಬೇಕೆಂದು ಗುಡುಗಿದರು.

Tap to resize

Latest Videos

undefined

ಕವಿ ಪುಂಗವರ ನಾಮಫಲಕಗಳನ್ನು ಅಳವಡಿಸಲು ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದಿದ್ದೆವು. ನಾಮಫಲಕ ನೆಡುವ ಸಂದರ್ಭದಲ್ಲಿ ಬ್ರಿಕ್‌ ಫೀಲ್ಡ್‌ ಶೆಲ್ಟರ್ಸ್‌ ಬಡಾವಣೆಯ ಕನ್ನಡ ದ್ವೇಷಿಗಳು ಫಲಕ ಕಿತ್ತು ಹಾಕುವ ದುಸ್ಸಾಹಸ ಮಾಡಿದ್ದಾರೆ ಎಂದು ಆರೋಪಿಸಿದರು. ಪೊಲೀಸರು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸ್ಥಳೀಯರ ನಡುವೆ ಸೌಹಾರ್ಧ ಮಾತುಕತೆ ನಡೆದು ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಗ್ರಾಮ ಪಂಚಾಯಿತಿ ವತಿಯಿಂದ ನಾಮಫಲಕಗಳನ್ನು ಅಳವಡಿಸಲಾಗುವುದು. ಸ್ಥಳೀಯ ನಿವಾಸಿಗಳು ಸಹಕಾರ ನೀಡಬೇಕು ಎಂದು ತೀರ್ಮಾನವಾದ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಶಮನವಾಯಿತು.

ಸಬರ್ಬನ್ ರೈಲ್ವೆ ವಿಳಂಬಕ್ಕೆ ಸಿಎಸ್ ಶಾಲಿನಿ ರಜನೀಶ್ ಅಸಮಾಧಾನ

ಬಡಾವಣೆಯಲ್ಲಿ ನ.1ಕ್ಕೆ ಕನ್ನಡ ರಾಜ್ಯೋತ್ಸವ: ಕನ್ನಡ ಪರ ಸಂಘಟನೆಯ ರೂಪೇಶ್‌ ರಾಜಣ್ಣ ಭೇಟಿ ನೀಡಿ ಬಡಾವಣೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ನೆರೆ ಹೊರೆಯ ಇತರೆ ಅಪಾರ್ಟ್‌ಮೆಂಟ್‌ಗಳಲ್ಲಿಯೂ ಕನ್ನಡ ನಾಡು ನುಡಿಯ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು. ನೆರಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಂಗಾಧರ್ ಮಾತನಾಡಿ, ಗ್ರಾಪಂ ವತಿಯಿಂದ ನಾಮಫಲಕಗಳನ್ನು ಸಿದ್ಧಪಡಿಸಲಾಗಿದ್ದು ಶೀಘ್ರದಲ್ಲಿ ಫಲಕಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.

click me!