
ಕಲಬುರಗಿ (ಸೆ. 03): ನಗರಸಭಾ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ. ಕಲಬುರಗಿ ಜಿಲ್ಲೆಯಲ್ಲಿ ಎಂದಿನಂತೆ ಕಾಂಗ್ರೆಸ್ ಪ್ರಾಬಲ್ಯ ಮುಂದುವರೆದಿದೆ.
ಒಟ್ಟು 6 ಪುರಸಭೆಯಲ್ಲಿ 3 ಕಾಂಗ್ರೆಸ್, ಬಿಜೆಪಿ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. 1 ಸ್ಥಾನ ಅತಂತ್ರವಾಗಿದೆ.
ಶಹಭಾದ್ ನಗರಸಭೆಯನ್ನು ಬಿಜೆಪಿ ತೆಕ್ಕೆಯಿಂದ ಕಾಂಗ್ರೆಸ್ ಕಿತ್ತುಕೊಂಡು ಗೆಲುವಿನ ನಗೆ ಬೀರಿದೆ. ಆಳಂದದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು ಶಾಸಕ, ಸಂಸದರ ಬಲದಿಂದ ಬಿಜೆಪಿಗೆ ಅಧಿಕಾರ ಸಿಗಲಿದೆ.
ಶಾಸಕ ಅಜಯ್ ಸಿಂಗ್ ತನ್ನ ಸ್ವಂತ ಕ್ಷೇತ್ರದಲ್ಲೇ ಮುಖಭಂಗ ಅನುಭವಿಸಿದ್ದಾರೆ. ಮಾಲೀಕಯ್ಯ ಗುತ್ತೇದಾರ್ ಸೋಲನುಭವಿಸಿದ್ದಾರೆ. ಪ್ರಿಯಾಂಕ ಖರ್ಗೆ ಇಲ್ಲಿನ ಉಸ್ತುವಾರಿ ವಹಿಸಿಕೊಂಡಿದ್ದು ಸಮರ್ಥವಾಗಿ ಸಂಘಟನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.