ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿಚಾರದಲ್ಲಿ ಖಾದಿ ಮತ್ತು ಕಾವಿ ಅಪವಿತ್ರ ಮೈತ್ರಿ ಮಾಡಿಕೊಂಡಿದೆಯೇ? ಹೀಗೆಂತ ಹಿರಿಯ ನಿವೃತ್ತ ನ್ಯಾಯಾಧೀಶರೊಬ್ಬರೇ ಹೇಳಿದ್ದಾರೆ.
ಕಲಬುರಗಿ(ಜು.30] ಸಮಾನತೆ ಇಲ್ಲದಿದ್ದರೆ ಕುಟುಂಬ ಪ್ರತ್ಯೇಕ ಆಗೋದು ಸಹಜ ಎಂದು ಹೈಕೋಟ್೯ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿಚಾರದಲ್ಲಿ ಮಾತನಾಡಿದ ಅವರು, ಮನೆಯ ಯಜಮಾನನಾದವನು ಎಲ್ಲರನ್ನ ಸಮಾನತೆಯಿಂದ ಕಾಣಬೇಕು. ತಾರತಮ್ಯ ಶುರುವಾದ್ರೆ ಅವಿಭಕ್ತ ಕುಟುಂಬ ವಿಭಕ್ತ ಕುಟುಂಬವಾಗುತ್ತೆ. ಸದ್ಯ ರಾಜ್ಯದಲ್ಲಿನ ಪರಿಸ್ಥಿತಿ ಆಗಿದೋದು ಹಾಗೆ ಆಗಿದೆ ಎಂದರು.
ಕೆಲ ಮಠಾಧೀಶರು ಕೇವಲ ಪ್ರಚಾರ ಪ್ರಿಯರು. ಖಾದಿ ಜೊತೆ ಕಾವಿ ಅಪವಿತ್ರ ಮೈತ್ರಿ ಮಾಡಿಕೊಂಡಿದೆ. ಸಮಾಜದ ಸ್ವಾಸ್ಥ್ಯವನ್ನು ಕೆಲ ಮಠಾಧೀಶರು ಕೆಡಿಸುತ್ತಿದ್ದಾರೆ. ಮಠಾಧೀಶರು ಒಳ್ಳೆ ಕೆಲಸ ಮಾಡಿದ್ದರೆ ಉತ್ತರ ಕರ್ನಾಟಕಕ್ಕೆ ಈ ಗತಿ ಬರುತ್ತಿರಲಿಲ್ಲ ಎಂದು ಹೇಳಿದರು.