ಕೊಡಗು: ಕಾಫಿ ತೋಟದ ನೀರಿನ ತೊಟ್ಟಿಗೆ ಬಿದ್ದು ನರಳಿ ಹೆಣ್ಣಾನೆ ಸಾವು

By Kannadaprabha News  |  First Published Feb 19, 2023, 4:00 AM IST

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಎಳನೀರು ಗುಂಡಿ ಗ್ರಾಮದ ಚಂದ್ರಶೇಖರ್‌ ಎಂಬುವರ ಕಾಫಿತೋಟದಲ್ಲಿ ನೀರಾವರಿ ಸೌಲಭ್ಯಕ್ಕಾಗಿ ನಿರ್ಮಿಸಿದ ನೀರು ಸಂಗ್ರಹ ತೊಟ್ಟಿಯೊಳಗೆ ಶನಿವಾರ ಮುಂಜಾನೆ ವೇಳೆಗೆ ಸುಮಾರು 20 ವರ್ಷದ ಹೆಣ್ಣಾನೆಯೊಂದು ಬಿದ್ದಿದ್ದು, ಮೇಲೇಳಲಾಗದೆ ಮೃತಪಟ್ಟಿದೆ.

ಶನಿವಾರಸಂತೆ(ಫೆ.19): ಕಾಫಿ ತೋಟದಲ್ಲಿದ್ದ 10 ಅಡಿ ಆಳದ ನೀರು ಸಂಗ್ರಹಣಾ ತೊಟ್ಟಿಯೊಳಗೆ ಕಾಡಾನೆ ಬಿದ್ದು ಮೃತಪಟ್ಟ ಘಟನೆ ಶನಿವಾರ ಮುಂಜಾನೆ ಎಳನೀರುಗುಂಡಿ ಗ್ರಾಮದಲ್ಲಿ ನಡೆದಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಎಳನೀರು ಗುಂಡಿ ಗ್ರಾಮದ ಚಂದ್ರಶೇಖರ್‌ ಎಂಬುವರ ಕಾಫಿತೋಟದಲ್ಲಿ ನೀರಾವರಿ ಸೌಲಭ್ಯಕ್ಕಾಗಿ ನಿರ್ಮಿಸಿದ ನೀರು ಸಂಗ್ರಹ ತೊಟ್ಟಿಯೊಳಗೆ ಶನಿವಾರ ಮುಂಜಾನೆ ವೇಳೆಗೆ ಸುಮಾರು 20 ವರ್ಷದ ಹೆಣ್ಣಾನೆಯೊಂದು ಬಿದ್ದಿದ್ದು, ಮೇಲೇಳಲಾಗದೆ ಮೃತಪಟ್ಟಿದೆ.

Tap to resize

Latest Videos

undefined

KODAGU MAHASHIVRATRI: ಕೂರ್ಗ್‌ನಲ್ಲಿ ಸಂಭ್ರಮದ ಶಿವರಾತ್ರಿ ಉತ್ಸವ, ಕಾಶಿ ಶಿವಲಿಂಗಕ್ಕೆ ವಿವಿಧ ಅಭಿಷೇಕ

ಪಕ್ಕದ ಮೀಸಲು ಅರಣ್ಯದಿಂದ ಹೆಣ್ಣಾನೆ ಸೇರಿ 3 ಕಾಡಾನೆ ಹಿಂಡು ಕಾಫಿತೋಟದೊಳಗೆ ನುಸುಳಿವೆ. ಈ ಸಂದರ್ಭದಲ್ಲಿ ಹೆಣ್ಣಾನೆ ಆಕಸ್ಮಿಕವಾಗಿ ನೀರು ಶೇಖರಣ ತೊಟ್ಟಿಯೊಳಗೆ ಬಿದ್ದಿದೆ. ನೀರಿನ ತೊಟ್ಟಿಆನೆಯಷ್ಟೇ ಅಗಲ ಇದ್ದ ಕಾರಣ ಉಸಿರುಗಟ್ಟಿ ಮೃತಪಟ್ಟಿದೆ.

ತೋಟಕ್ಕೆ ತೆರಳಿದ್ದ ಕಾರ್ಮಿಕರು ಆನೆ ಬಿದ್ದು ಮೃತಪಟ್ಟಿರುವುದನ್ನು ನೋಡಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಶನಿವಾರಸಂತೆ ಅರಣ್ಯ ವಲಯಾಧಿಕಾರಿ ಪ್ರಫುಲ್‌ ಕುಮಾರ್‌ ಶೆಟ್ಟಿಹಾಗೂ ಸಿಬ್ಬಂದಿ ಪರಿಶೀಲಿಸಿ ಆನೆ ಮೃತದೇಹವನ್ನು ಹೊರತೆಗೆದರು. ಶನಿವಾರಸಂತೆ ಪಶುವೈದ್ಯಾಧಿಕಾರಿ ಡಾ. ಸತೀಶ್‌ ಮರಣೋತ್ತರ ಪರೀಕ್ಷೆ ನಡೆಸಿದರು. ಪಕ್ಕದ ಮೀಸಲು ಅರಣ್ಯದಲ್ಲಿ ಆನೆಯ ಶವ ಸಂಸ್ಕಾರ ಮಾಡಲಾಯಿತು.

click me!