ಸಂತಸದ ಸುದ್ದಿ: ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ವ್ಯಾಪಾರಿಗಳಿಗೆ ಸಾಲ

By Kannadaprabha NewsFirst Published Nov 4, 2020, 9:05 AM IST
Highlights

ಸಣ್ಣ ಮತ್ತು ಬೀದಿ ವ್ಯಾಪಾರಕ್ಕೆ ಹೊಡೆತ ಬೀಳುವುದನ್ನು ತಪ್ಪಿಸಲು ಬೀದಿ ವ್ಯಾಪಾರಿಗಳೂ ಆನ್‌ ಲೈನ್‌ ವ್ಯಾಪಾರ ಮಾಡಲು ಅನುಕೂಲ ಆಗುವಂತೆ ’ಬೋಹ್ನಿ’ ಮೊಬೈಲ್‌ ಆ್ಯಪ್‌ ಪರಿಚಯಿಸುಚ ಅಭಿಯಾನ| ಸಣ್ಣ ವ್ಯಾಪಾರಿಗಳಿಗೂ ‘ಡಿಜಿಟಲ್‌ ವೇದಿಕೆ’ ಕಲ್ಪಿಸಿಕೊಡುವ ಎಂಬ ಉದ್ದೇಶದಿಂದ ’ದಿ ಫಾರ್ವರ್ಡ್‌ ಫೌಂಡೇಶನ್‌’ ಸದಸ್ಯರು ಎಚ್‌.ಎಸ್‌.ಆರ್‌. ಬಡಾವಣೆಯ ಬೀದಿ ವ್ಯಾಪಾರಿಗಳ ನಡುವೆ ಪ್ರಚಾರ|

ಬೊಮ್ಮನಹಳ್ಳಿ(ನ.04): ಬೀದಿಬದಿ ವ್ಯಾಪಾರಿಗಳನ್ನು ಡಿಜಿಟಲೀಕರಣಗೊಳಿಸುವ ಮತ್ತು ಪ್ರಧಾನಮಂತ್ರಿ ಸ್ವನಿಧಿ ಯೋಜನೆಗೆ ನೋಂದಾಯಿಸುವ ಬೋಹ್ನಿ ಆ್ಯಪ್‌ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ಕೆ ಕೇಂದ್ರ ರಕ್ಷಣಾ ಇಲಾಖೆ ಸ್ವತಂತ್ರ ನಿರ್ದೇಶಕರು ಹಾಗೂ ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಲತಾ ನರಸಿಂಹಮೂರ್ತಿ ಚಾಲನೆ ನೀಡಿದ್ದಾರೆ. 

ಸಣ್ಣ ಮತ್ತು ಬೀದಿ ವ್ಯಾಪಾರಕ್ಕೆ ಹೊಡೆತ ಬೀಳುವುದನ್ನು ತಪ್ಪಿಸಲು ಬೀದಿ ವ್ಯಾಪಾರಿಗಳೂ ಆನ್‌ ಲೈನ್‌ ವ್ಯಾಪಾರ ಮಾಡಲು ಅನುಕೂಲ ಆಗುವಂತೆ ’ಬೋಹ್ನಿ’ ಮೊಬೈಲ್‌ ಆ್ಯಪ್‌ ಪರಿಚುಸುವ ಅಭಿಯಾನ ಆರಂಭಗೊಂಡಿದೆ. ಸಣ್ಣ ವ್ಯಾಪಾರಿಗಳಿಗೂ ‘ಡಿಜಿಟಲ್‌ ವೇದಿಕೆ’ ಕಲ್ಪಿಸಿಕೊಡುವ ಎಂಬ ಉದ್ದೇಶದಿಂದ ’ದಿ ಫಾರ್ವರ್ಡ್‌ ಫೌಂಡೇಶನ್‌’ ಸದಸ್ಯರು ಎಚ್‌.ಎಸ್‌.ಆರ್‌. ಬಡಾವಣೆಯ ಬೀದಿ ವ್ಯಾಪಾರಿಗಳ ನಡುವೆ ಪ್ರಚಾರ ಅಭಿಯಾನ ನಡೆಸಿದರು.

ಸರ್ಕಾರಿ ಬ್ಯಾಂಕ್‌ನಿಂದ ಗೃಹ ಸಾಲ ಬಡ್ಡಿ ಇಳಿಕೆ; ಮಹಿಳೆಯರಿಗೆ ಬಂಪರ್!

ಈ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಉಚಿತ ಹೆಲ್ತ್‌ ಕಿಟ್‌ ಹಾಗೂ ಆಹಾರದ ಕಿಟ್‌ನ್ನು ಸುಮಾರು 100ಕ್ಕೂ ಅಧಿಕ ಮಂದಿಗೆ ವಿತರಿಸಲಾಯಿತು. ಎ.ಎಂ.ನರಸಿಂಹಮೂರ್ತಿ, ದಿ ಫಾರ್ವರ್ಡ್‌ ಫೌಂಡೇಶನ್‌ ಮುಖ್ಯಸ್ಥ ಕೆ.ಸುಧಾಕರ್‌ ಪೈ ಇದ್ದರು.
 

click me!