ಮೆದುಳು ನಿಷ್ಕ್ರೀಯಗೊಂಡಿದ್ದ ಅಥಣಿಯ 30 ವರ್ಷದ ಯುವಕನ ಲೀವರ್ ಅನ್ನು ಹಾವೇರಿಯ 19 ವರ್ಷದ ಯುವಕನಿಗೆ ಮರುಜೋಡಿಸುವಲ್ಲಿ ಯಶಸ್ವಿಯಾದ ತಜ್ಞವೈದ್ಯರು
ಬೆಳಗಾವಿ(ಅ.21): ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಇದೇ ಮೊದಲ ಬಾರಿಗೆ ಲೀವರ್ ಕಸಿ ಮಾಡಿದೆ. ಮೆದುಳು ನಿಷ್ಕ್ರೀಯಗೊಂಡಿದ್ದ ಅಥಣಿಯ 30 ವರ್ಷದ ಯುವಕನ ಲೀವರ್ ಅನ್ನು ಹಾವೇರಿಯ 19 ವರ್ಷದ ಯುವಕನಿಗೆ ಮರುಜೋಡಿಸುವಲ್ಲಿ ತಜ್ಞವೈದ್ಯರು ಯಶಸ್ವಿಯಾಗಿದ್ದಾರೆ. ಉತ್ತರ ಕರ್ನಾಟಕ, ಗೋವಾ ಹಾಗೂ ದ.ಮಹಾರಾಷ್ಟದಲ್ಲಿ ಪ್ರಥಮ ಲೀವರ್ ಕಸಿಯಾಗಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.
ಕೆಎಲ್‌ಇ ಆಸ್ಪತ್ರೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೀವರ್ ಕಸಿ ಶಸ್ತ್ರಚಿಕಿತ್ಸೆಗೆ ಬೆಂಗಳೂರಿನ ಆಸ್ಟರ್ ಆಸ್ಪತ್ರೆ ಸಹಕಾರ ನೀಡಿದೆ. ಅಥಣಿಯ ಡಾ.ರವಿ ಪಾಂಗಿ ಅವರ ಅನ್ನಪೂರ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ 30 ವರ್ಷದ ವ್ಯಕ್ತಿಯ ಮೆದುಳು ನಿಷ್ಕ್ರೀಯಗೊಂಡಾಗ ಆ ರೋಗಿಯ ಲೀವರ್ ಅನ್ನು ತೆಗೆದು 19 ವರ್ಷದ ಯುವಕನಿಗೆ ಜೋಡಿಸಲಾಗಿದ್ದು, ಯುವಕ ಸಂಪೂರ್ಣವಾಗಿ ಗುಣಮುಖಗೊಂಡಿದ್ದಾನೆ. 10 ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಿದ್ದಾನೆ ಎಂದರು.
undefined
ಅಧಿಕಾರಿಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಗ್ರಾಂ.ಪಂ. ಅಭ್ಯರ್ಥಿ: ಮರು ಮತ ಎಣಿಕೆಯಲ್ಲೂ ಪರಾಭವ..!
ಯಕೃತ್ತಿನ (ಲೀವರ್) ಕಸಿ ಅತ್ಯಂತ ಕ್ಲಿಷ್ಟಕರವಾದ ಹಾಗೂ ತಾಂತ್ರಿಕವಾಗಿ ಸಂದಿಗ್ದತೆಯಿಂದ ಕೂಡಿದ ಶಸ್ತ್ರಚಿಕಿತ್ಸೆಯಾಗಿದ್ದು, ಸಕಲ ವೈದ್ಯಕೀಯ ವ್ಯವಸ್ಥೆಯುಳ್ಳ ಆಸ್ಪತ್ರೆಯಲ್ಲಿ ನುರಿತ ತಜ್ಞಶಸ್ತ್ರಚಿಕಿತ್ಸಕರಿಂದ ಮಾತ್ರ ಲೀವÃರ್‌ಕಸಿ ಮಾಡಲಾಗುತ್ತದೆ. ಸುಮಾರು 12-18 ಗಂಟೆಗಳ ಕಾಲ ಸುದೀರ್ಘ ಶಸ್ತ್ರಚಿಕಿತ್ಸೆಗೆ ನುರಿತ ಸಿಬ್ಬಂದಿ ಅಗತ್ಯವಿದೆ ಎಂದರು.
ಸಾಮಾನ್ಯವಾಗಿ ಮದ್ಯಪಾನ, ಮಧುಮೇಹ ಹಾಗೂ ಬೊಜ್ಜುತನದಿಂದ ಕೊಬ್ಬಿನಿಂದಾಗಿ ಲೀವರ್ ಹಾಳಾಗುತ್ತದೆ. ಜತೆಗೆ ಹೆಪಾಟೈಟಿಸ್ ಬಿ ಮತ್ತು ಸಿ., ಸೋಂಕು, ಜೆನೆಟಿಕ್ ಮತ್ತು ಮೆಟಬಾಲಿಕ್ ಲಿವರ್ ಡಿಸೀಸ್. ನಿರಂತರವಾಗಿ ಔಷಧಗಳ ಸೇವನೆಯಿಂದಲೂ ಪಿತ್ತಜನಕಾಂಗದ ವೈಫಲ್ಯ ಕಂಡು ಬರುತ್ತದೆ ಎಂದು ವಿವರಿಸಿದರು.
ಡಾ.ಸಂತೋಷ ಹಜಾರೆ ಹಾಗೂ ಡಾ.ಸುದರ್ಶನ ಚೌಗುಲೆ ಅವರ ನೇತೃತ್ವದ ತಂಡವು ಬೆಂಗಳೂರಿನ ಅಸ್ಟರ ಆಸ್ಪತ್ರೆಯ ಡಾ.ಸೋನಲ್ ಆಸ್ಥಾನಾ ಅವರು ಯಶಸ್ವಿ ಲೀವರ್ ಕಸಿ ಮಾಡುವಲ್ಲಿ ಸಾಧನೆ ಮಾಡಿದ್ದಾರೆ. ಅರಿವಳಿಕೆ ತಜ್ಞವೈದ್ಯರಾದ ಡಾ.ಅರುಣ, ಡಾ.ರಾಜೇಶ ಮಾನೆ, ಡಾ ಮಂಜುನಾಥ ಪಾಟೀಲ ಅವರು ಸಹರಿಸಿದರು.
ಬೆಳಗಾವಿ: ಮಾರಾಕಸ್ತ್ರಗಳಿಂದ ಇರಿದು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ವಿದ್ಯಾರ್ಥಿಯ ಬರ್ಬರ ಹತ್ಯೆ
ಮೆಟ್ರೊ ಪಾಲಿಟಿನ್ ನಗರಗಳ ಆಸ್ಪತ್ರೆಗೆ ಹೋಲಿಸಿದರೆ ನಮ್ಮ ಆಸ್ಪತ್ರೆಯಲ್ಲಿ ಕೇವಲ ಶೇ. 50 ವೆಚ್ಚದಲ್ಲಿ ಅಂಗಾಂಗ ಕಸಿ ಶಸ್ತಚಿಕಿತ್ಸೆಯನ್ನು ನೆರವೇರಿಸಲಾಗುತ್ತಿದೆ. ಅಂಗಾಂಗ ಕಸಿಗೆ ಆರೋಗ್ಯ ಕರ್ನಾಟಕ ಹಾಗೂ ಆಯುಷ್ಮಾನ್ ಭಾರತ, ಕಾರ್ಮಿಕ ವಿಮಾ(ಇಎಸ್‌ಐ) ಹಾಗೂ ಇನ್ನೀತರ ವಿಮಾ ಯೋಜನೆಗಳಲ್ಲಿ ಧನಸಹಾಯ ಲಭ್ಯವಿದೆ ಎಂದರು.
ಯಶಸ್ವಿ ಲೀವರ ಕಸಿ ಶಸ್ತಚಿಕಿತ್ಸೆ ನೆರವೇರಿಸಿದ ವೈದ್ಯರ ತಂಡ ಹಾಗೂ ದಾನಿಯ ಕುಟುಂಬ ಸದಸ್ಯರ ಕಾರ್ಯವನ್ನು ಡಾ.ಪ್ರಭಾಕರ ಕೋರೆ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ.ಜಾಲಿ ಹಾಗೂ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದರು. ಈ ವೇಳೆ ಡಾ.ಆರ್.ಬಿ. ನೇರ್ಲಿ, ಡಾ. ಸಂತೋಷ ಹಜಾರೆ, ಬೆಂಗಳೂರಿನ ಆಸ್ಟರ ಆಸ್ಪತ್ರೆಯ ಕಸಿ ತಜ್ಞಶಸ್ತಚಿಕಿತ್ಸಕರಾದ ಡಾ. ಸೋನಲ್ ಆಸ್ಥಾನಾ, ಡಾ. ಸುದರ್ಶನ ಚೌಗಲೆ, ಡಾ. ಮಂಜುನಾಥ ಪಾಟೀಲ, ಅಥಣಿಯ ಡಾ. ರವಿ ಪಾಂಗಿ ಇದ್ದರು.