ಹುಟ್ಟಿದ ಮೊದಲ ದಿನವೇ ತಾಯಿಯಿಂದ ತಿರಸ್ಕೃತಗೊಂಡ ಹುಲಿಮರಿಯನ್ನು ಏಳು ತಿಂಗಳುಗಳಿಂದ ನಿರಂತರವಾಗಿ ಆರೈಕೆ ಮಾಡುವ ಮೂಲಕ ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಆಸರೆಯಾಗಿದ್ದಾರೆ.
ವರದಿ : ಟಿ.ಮಂಜುನಾಥ, ಹೆಬ್ಬಗೋಡಿ, ಏಷ್ಯಾನೆಟ್ ಸುವರ್ಣನ್ಯೂಸ್
ಆನೇಕಲ್ (ಅ.21): ವನ್ಯಜೀವಿಗಳು ಅಂದರೆ ಎಂತಹವರಿಗೂ ಭಯ ಆದ್ರೇ ಮಗುವಿನಂತೆ ಇಲ್ಲೊಂದು ಕಡೇ ಹಾಲು ಕುಡಿಸುವುದು, ಅದರೊಂದಿಗೆ ಆಟವಾಡುತ್ತಿರುವುದನ್ನೇಲ್ಲಾ ನೋಡುತ್ತಿದ್ದರೇ ಖುಷಿಯಾಗುತ್ತಲ್ವಾ ಆದ್ರೆ ಇದೊಂದು ಕಣ್ಣೀರ ಕಥೆ, ಹುಟ್ಟಿದ ದಿನವೇ ತಾಯಿಯ ಆರೈಕೆಯಿಂದ ಈಕೆ ಬೇರ್ಪಟ್ಟಿದ್ದಳು, ತಾಯಿಯಿಂದ ದೂರ ಆದ ಇವಳಿಗೆ ಆಸರೆಯಾಗಿದ್ದು ಮಾತ್ರ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು. ಹುಟ್ಟಿದ ಮೊದಲ ದಿನವೇ ತಾಯಿಯಿಂದ ತಿರಸ್ಕೃತಗೊಂಡ ಹುಲಿಮರಿಯನ್ನು ಏಳು ತಿಂಗಳುಗಳಿಂದ ನಿರಂತರವಾಗಿ ಆರೈಕೆ ಮಾಡುವ ಮೂಲಕ ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಆಸರೆಯಾಗಿದ್ದಾರೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆಸ್ಪತ್ರೆಯಲ್ಲಿ ಬೆಳೆಯುತ್ತಿರುವ ಏಳು ತಿಂಗಳ ಹುಲಿಮರಿಯ ಕಥೆ ಇದು, ಹುಟ್ಟಿದ ದಿನವೇ ಈ ಹುಲಿಮರಿ ತಾಯಿಯಿಂದ ಬೇರ್ಪಡುತ್ತಿದ್ದಂತೆ ಎರಡು ಕಣ್ಣುಗಳ ದೃಷ್ಟಿ ಕಳೆದುಕೊಂಡಿದ್ದಳು. ತಾಯಿಯ ಹಾಲಿಲ್ಲದೆ ಕಣ್ಣು ದೃಷ್ಟಿ ಇಲ್ಲದೆ ಏಳು ತಿಂಗಳಿನಿಂದ ಬೆಳೆಯುತ್ತಿದ್ದಾಳೆ ಈ ಕಂದಮ್ಮ, ವೈದ್ಯರ ಹಾಗೂ ಸಿಬ್ಬಂದಿಯ ಆಸರೆಯಲ್ಲಿ ಪ್ರತಿದಿನ ಆರೈಕೆ ಮಾಡಲಾಗುತ್ತಿದ್ದು ಮೇಕೆ ಹಾಲನ್ನು ಮಗುವಿಗೆ ಕುಡಿಸುವ ರೀತಿಯಲ್ಲಿ ಹುಲಿಮರಿಯನ್ನು ಆರೈಕೆ ಮಾಡುತ್ತಿದ್ದಾರೆ ಇಲ್ಲಿನ ಆಸ್ಪತ್ರೆಯ ಸಿಬ್ಬಂದಿ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿನ ಅನುಷ್ಕಾ ಹಾಗೂ ಮಿಥುನ್ ಹುಲಿಗಳಿಗೆ 25 ಮಾರ್ಚ್ 2022 ರಂದು ಜನಿಸಿದ್ದ ಹುಲಿಮರಿ ಇವಳಾಗಿದ್ದು ಜನಿಸಿದ ದಿನವೇ ತಾಯಿ ಮರಿಯನ್ನು ಹತ್ತಿರ ಸೇರಿಸಿರಲಿಲ್ಲ ಬಳಿಕ ಹುಲಿಮರಿಯನ್ನು ಅಲ್ಲಿಂದ ಉದ್ಯಾನವನದಲ್ಲಿರುವ ಆಸ್ಪತ್ರೆಗೆ ತಂದು ಬನ್ನೇರುಘಟ್ಟ ಆಸ್ಪತ್ರೆಯಲ್ಲಿ ಆರೈಕೆ ಮಾಡಲಾಗುತ್ತಿದೆ.
undefined
ಮೇಕೆ ಹಾಲನ್ನು ನೀಡಿ ಮರಿಯನ್ನು ಸಲಹುತ್ತಿರುವ ಸಿಬ್ಬಂದಿಯ ಆರೈಕೆ ಮಾಡುತ್ತಿರುವುದನ್ನು ನೋಡಿದರೆ ಎಂತವರಿಗೂ ಕೂಡ ಕಣ್ಣಲ್ಲಿ ನೀರು ಬಯಸುತ್ತದೆ ಆದರೆ ಇಲ್ಲಿನ ಸಿಬ್ಬಂದಿಗಳು ಮಾತ್ರ ತಮ್ಮ ಮನೆಯ ಮಗುವಿನಂತೆ ಹುಲಿಮರಿಯನ್ನು ಆಯ್ಕೆ ಮಾಡುತ್ತಿರುವುದರಿಂದ ಆಸ್ಪತ್ರೆಯಲ್ಲಿ ಇವಳ ಚೆಲ್ಲಾಟ ತುಂಟಾಟ ಎಲ್ಲರಲ್ಲೂ ಕೂಡ ಸಂತಸ ಉಂಟು ಮಾಡಿದೆ. ಮೇಕೆ ಹಾಲು, ವುಡ್ ವರ್ಡ್ ನೀಡಿಸಲಾಗುತ್ತಿರುವ ವೈದ್ಯರು ಹಾಗೂ ಸಿಬ್ಬಂದಿ ದಿನದಲ್ಲಿ ಹಲವಾರು ಬಾರಿ ಬಾಟಲ್ ಮೂಲಕ ಹಾಲನ್ನು ಮರಿಗೆ ಉಣ ಬಡಿಸುತ್ತಿದ್ದಾರೆ.
ಪ್ರಾರಂಭದಲ್ಲಿ ತಾಯಿಯಿಂದ ಬೇರ್ಪಟ್ಟ ಮರಿಗೆ ಎರಡು ಕಣ್ಣು ಕಣ್ಣಿನ ಪೊರೆಯನ್ನು ಸರಿಪಡಿಸಲು ವೈದ್ಯರು ನಿರಂತರ ಮರಿಯನ್ನು ಪ್ರತ್ಯೇಕವಾಗಿ ಆರೈಕೆ ಮಾಡಲು ಮುಂದಾಗಿದ್ದರು, ಕಳೆದ ಮೂರು ತಿಂಗಳಿಂದ ಈಚೆಗೆ ಹುಲಿಮರಿಗೆ ಕಣ್ಣುಗಳು ಕಾಣಲು ಪ್ರಾರಂಭ ಆಗಿದ್ದು ಈಗ ಇವಳ ಓಡಾಟ ಕುಣಿದಾಟ ಚೆಲ್ಲಾಟ ಪಾರ್ಕಿನ ಸಿಬ್ಬಂದಿಗೆ ಹಬ್ಬದ ವಾತಾವರಣ ಉಂಟು ಮಾಡಿದೆ.
ತಾಯಿ ಹಾಲು ಇಲ್ಲದೆ ಏಳು ತಿಂಗಳಿಂದ ಆಸ್ಪತ್ರೆಯಲ್ಲಿ ಬೆಳೆಯುತ್ತಿರುವ ಹುಲಿಮರಿಗೆ ಪ್ರತಿದಿನ ಮಗುವಿನಂತೆ ಬಾಟಲ್ ಮೂಲಕ ಹಾಲನ್ನು ಕುಡಿಸುವ ಸಂದರ್ಭದಲ್ಲಿ ಸಿಬ್ಬಂದಿಗಳ ಜೊತೆಗೆ ಇವಳು ಮಗುವಿನಂತೆ ಆಟ ಆಡುತ್ತಾಳೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಬೆಳೆಯುತ್ತಿರುವ ಈ ಹುಲಿ ಮರಿ ಜೈವಿಕ ಉದ್ಯಾನವನದ ವೈದ್ಯ ರಾಧ ಡಾ. ಉಮಾಶಂಕರ್ ನೇತೃತ್ವದ ವೈದ್ಯರ ತಂಡ ಪ್ರತಿದಿನವೂ ಕೂಡ ಹೆಚ್ಚಿನ ಕಾಳಜಿ ವಹಿಸಿ ಇವಳ ಆರೋಗ್ಯದ ಕಡೆ ಗಮನ ನೀಡುತ್ತಾರೆ.
ಇಲ್ಲಿನ ವೈದ್ಯಾಧಿಕಾರಿ ಡಾ. ಉಮಾಶಂಕರ್ ಅವರ ನೇತೃತ್ವದ ಡಾ.ಮಂಜುನಾಥ್ ಡಾ. ವಿಜಯ್,ಡಾ.ವಿಶಾಕ್ ತಂಡ ಪ್ರತಿದಿನ ಹುಲಿ ಮರಿ ಆರೈಕೆ ಮಾಡಲು ಸಿಬ್ಬಂದಿ ನೇಮಕ ನೇಮಕ ಮಾಡಿದ್ದು ಹಗಲಿನಲ್ಲಿ ಸಾವಿತ್ರಮ್ಮ, ಶಿವಕುಮಾರ್ ರಾತ್ರಿ ಸಮಯದಲ್ಲಿ ಮಹಾದೇವ, ರಾಜು, ಬಸಯ್ಯ ಅವರನ್ನು ಹುಲಿಮರಿಗೆ ಆಹಾರ ನೀಡಲು ನೇಮಕ ಮಾಡಿದ್ದಾರೆ. ಹಾಲು ಉಣಿಸುವ ಸಾವಿತ್ರಮ್ಮ- ಪ್ರತಿದಿನ ಬೆಳಿಗ್ಗೆ ಮಧ್ಯಾಹ್ನ ಸಂಜೆ ರಾತ್ರಿ ಸಮಯದಲ್ಲಿ ಬಾಟಲ್ ಮೂಲಕ ಹಾಲನ್ನು ಕುಡಿಸುತ್ತೇವೆ ಮೇಕೆ ಹಾಲನ್ನು ನೀಡಲು ವೈದ್ಯರು ಪ್ರತಿದಿನವೂ ತರಿಸಿಕೊಳ್ಳುತ್ತಿದ್ದು ಇದನ್ನು ಬಾಟಲ್ ಮೂಲಕ ಅವಳಿಗೆ ಕುಡಿಸುವ ಕೆಲಸವನ್ನು ಮಾಡುತ್ತೇನೆ, ಹಾಲು ಕುಡಿಯುವ ಸಂದರ್ಭದಲ್ಲಿ ನಮ್ಮ ಮನೆಯ ಮಕ್ಕಳಂತೆ ಅವಳು ಕೂಡ ಆಟವಾಡುತ್ತಾ ಹಾಲನ್ನು ಕುಡಿಯುತ್ತಾಳೆ.
ವೈದ್ಯರ ಅಚ್ಚುಮೆಚ್ಚಿನ ಈ ಹುಲಿಮರಿ- ತಾಯಿಯಿಂದ ತಿರಸ್ಕೃತಗೊಂಡ ಹುಲಿ ಮರಿಯನ್ನು ಮೊದಲ ದಿನದಿಂದಲೂ ಕೂಡ ಆಸ್ಪತ್ರೆಯಲ್ಲಿ ಆರೈಕೆ ಮಾಡಲಾಗುತ್ತಿದೆ, ಬದುಕುವುದು ಅಸಾಧ್ಯ ಎನ್ನಲಾಗಿದ್ದ ಈ ಹುಲಿಮರಿ ಈಗ ಆರೋಗ್ಯವಾಗಿ ಬೆಳೆಯುತ್ತಿದ್ದು ಎಲ್ಲರ ಅಚ್ಚು ಮೆಚ್ಚಾಗಿದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ. ಡಾ.ಉಮಾಶಂಕರ್- ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯಾಧಿಕಾರಿ- ತಾಯಿಯಿಂದ ಬೇರ್ಪಟ್ಟಾಗ ಮರಿಗೆ ಎರಡು ಕಣ್ಣು ಕಾಣಿಸುತ್ತಿರಲಿಲ್ಲ ಜೊತೆಗೆ ಕಿಡ್ನಿ ಎರಡು ಕೂಡ ವೈಫಲ್ಯದಿಂದ ಮರಿ ಬಳಲುತ್ತಿದೆ,ಆದರೂ ಕೂಡ ನಿರಂತರವಾಗಿ ಚಿಕಿತ್ಸೆ ನೀಡುವ ಮೂಲಕ ಹುಲಿಮರಿಯನ್ನು ಆರೈಕೆ ಮಾಡಲಾಗುತ್ತಿದ್ದು ಏಳು ತಿಂಗಳ ಮರಿ ಈಗ ಬೆಳೆಯುತ್ತಿದೆ ಆದರೆ ಕಿಡ್ನಿಯಲ್ಲಿ ಇರುವ ಕೆಲವು ರಂಧ್ರಗಳು ಈಗಲೂ ಕೂಡ ತೊಂದರೆ ನೀಡುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಮುತುವರ್ಜಿ ನೀಡಿ ಸಲಹಲಾಗುತ್ತಿದೆ.
ಡಾ.ವಿಜಯ್. ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯರು- 15 ಅನುಷ್ಕಾ ಎರಡು ಬಾರಿ ಮರಿ ಹಾಕಿದೆ ಆದರೆ ತಾಯಿತನವನ್ನು ಮಾಡದೆ ಮರಿಗಳನ್ನು ದೂರ ಇಡುತ್ತಿದ್ದು ಇದರಿಂದಾಗಿ ಮರಿಗಳನ್ನು ನಾವು ಆರೈಕೆ ಮಾಡುವ ಸ್ಥಿತಿ ನಿರ್ಮಾಣ ಆಗಿದೆ, ಸದ್ಯ 7 ತಿಂಗಳ ಮರಿ ನಮ್ಮಲ್ಲಿ ಮುದ್ದಾಗಿ ಬೆಳೆಯುತ್ತಿದ್ದು ಅವಳ ಆರೈಕೆ ಪಾಲನೆಯನ್ನು ಸಿಬ್ಬಂದಿಗಳು ಹಾಗೂ ನಾವೆಲ್ಲರೂ ಸೇರಿ ಮಾಡುತ್ತಿದ್ದೇವೆ.
ಚೀತಾ ಭಾರತಕ್ಕೆ ಬಂದ ಖುಷಿ ಮಧ್ಯೆ ಬನ್ನೇರುಘಟ್ಟ ಪಾರ್ಕ್ ನಲ್ಲಿ ಹುಲಿಗಳ ಸರಣಿ ಸಾವು!
ಡಾ.ವಿಶಾಖ.ವೈದ್ಯೆ ಬನ್ನೇರುಘಟ್ಟ- ಪ್ರತಿಯೊಬ್ಬರಿಗೂ ತಾಯಿಯ ಪ್ರೀತಿ ಹಾರೈಕೆ ಬೇಕಾಗುತ್ತದೆ ಪ್ರಾಣಿ ಆಗಿರಲಿ ಪಕ್ಷಿ ಆಗಿರಲಿ ತಾಯಿಯ ಹಾಲು ಕುಡಿದು ಆಸರೆಯಲ್ಲಿ ಬೆಳೆಯುವುದು ಅವಶ್ಯಕ ಆದರೆ ಪ್ರಾರಂಭದ ದಿನದಲ್ಲೇ ತಾಯಿ ಮರಿಯಿಂದ ದೂರ ಆಗಿದ್ದು ನಾವು ಈ ಹುಲಿಮರಿಯನ್ನು ನಮ್ಮ ಮನೆಯ ಮಗು ಹೇಗಿರುತ್ತದೆ ಅದರಂತೆ ಪಾಲನೆ ಮಾಡುತ್ತಿದ್ದೇವೆ. ಬದುಕುತ್ತಾಳೋ ಇಲ್ಲವೋ ಎನ್ನುವ ಆತಂಕ- ಕಿಡ್ನಿಯಲ್ಲಿ ರಂಧ್ರಗಳು ಇದ್ದಾಗ ರಕ್ತದ ಶೇಖರಣೆ ಕಡಿಮೆಯಾಗಿ ಮೂರರಿಂದ ನಾಲ್ಕು ವರ್ಷದ ಬಳಿಕ ಬೆಳವಣಿಗೆ ಆಗದೆ ಬದುಕುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದ್ದು ಈ ನಿಟ್ಟಿನಲ್ಲಿ ಹುಲಿಮರಿ ಉಳಿವಿಗಾಗಿ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯರುಗಳಾದ ಡಾ. ಉಮಾಶಂಕರ್, ಡಾ. ಮಂಜುನಾಥ್ ,ಡಾ. ವಿಶಾಖ.ಡಾ ವಿಜಯ್ ನಿರಂತರವಾಗಿ ಶ್ರಮಿಸುತ್ತಿದ್ದಾರೆ.