ಯೋಧನ ಬಳಿ ಎಕೆ 47ನ ಜೀವಂತ ಗುಂಡು ಪತ್ತೆ

Kannadaprabha News   | Asianet News
Published : Sep 14, 2020, 07:21 AM IST
ಯೋಧನ ಬಳಿ ಎಕೆ 47ನ ಜೀವಂತ ಗುಂಡು ಪತ್ತೆ

ಸಾರಾಂಶ

ಯೋಧರೋರ್ವರ ಬಳಿ ಜೀವಂತ ಎಕೆ47 ಗುಂಡು ಪತ್ತೆಯಾಗಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. 

ಬೆಳಗಾವಿ (ಸೆ.14):  ಜೀವಂತ ಗುಂಡು ಸಮೇತ ಪ್ರಯಾಣಿಸುತ್ತಿದ್ದ ಯೋಧನೊಬ್ಬನನ್ನು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ಭದ್ರತಾ ಪಡೆಯ ಅಧಿಕಾರಿಗಳು ಶನಿವಾರ ಸಂಜೆ ವಶಕ್ಕೆ ಪಡೆದಿದ್ದಾರೆ.

ಜಿಲ್ಲೆಯ ಸಂಕೇಶ್ವರದ ಹನುಮಾನ ನಗರದ ಸುಬೇದಾರ್‌ ಅರುಣ ಮಾರುತಿ ಭೋಸಲೆ ಕಳೆದೊಂದು ತಿಂಗಳ ಹಿಂದೆ ರಜೆ ಮೇಲೆ ಬಂದು ಮರಳಿ ಕರ್ತವ್ಯಕ್ಕೆಂದು ಕಾಶ್ಮೀರಕ್ಕೆ ಹೋಗಲು ಬೆಳಗಾವಿ ನಿಲ್ದಾಣದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಪ್ರಯಾಣ ಬೆಳೆಸುತ್ತಿದ್ದಾಗ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ ವೇಳೆ ಎಕೆ 47ನ ಒಂದು ಜೀವಂತ ಗುಂಡು ಪತ್ತೆಯಾಗಿದೆ.

Fact Check: ಗಡಿ ನಿಯಂತ್ರಣ ರೇಖೆ ಬಳಿ ಭಾರತ-ಚೀನಾ ಯುದ್ಧ?

ಜೊತೆಗೆ ಒಂದು ಇನ್ಸಾಸ್‌ ಫೈರೆಡ್‌ ಕೇಸ್‌(ಖಾಲಿ ಗುಂಡು) ಪತ್ತೆಯಾಗಿದ್ದು, ಸೈನಿಕನನ್ನು ಪೊಲೀಸರು ಮರಾಠ ಲಘು ಪದಾತಿ ದಳ ವಶಕ್ಕೆ ನೀಡಿದ್ದಾರೆ. ಸುಬೇದಾರ ಸುದೀರ್ಘ 18 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಕೇವಲ 6 ತಿಂಗಳು ಮಾತ್ರ ಸೇವಾವಧಿ ಇದೆ.

PREV
click me!

Recommended Stories

ತಾಳಿ ಕಟ್ಟುವ ಶುಭ ವೇಳೆ..., 'ಇವನು ನನ್ನ ಗಂಡ' ಎಂದವಳೊಂದಿಗೆ ಸಂಸಾರ ನಡೆಸುತ್ತೇನೆ ಎಂದ ಮದುಮಗ!
ಬೆಂಗಳೂರು ಜನತೆಗೆ ಶೀಘ್ರವೇ ದೊಡ್ಡ ಮುಕ್ತಿ, ನಗರದ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಮುಂದಿನ ತಿಂಗಳೊಳಗೆ ಸಂಚಾರ ಮುಕ್ತ!