ಕೊರೋನಾ ಚಿಕಿತ್ಸೆಗೆ ಶಿವಮೊಗ್ಗದಲ್ಲಿ 22 ಖಾಸಗಿ ಆಸ್ಪತ್ರೆ ಗುರುತು

By Kannadaprabha News  |  First Published Jun 23, 2020, 10:26 AM IST

ಆರಂಭದಲ್ಲಿ ಶಿವಮೊಗ್ಗದ ಮೆಗ್ಗಾನ್‌ ಕೋವಿಡ್‌ ಆಸ್ಪತ್ರೆ ಎಂದು ಗುರುತಿಸಲಾಗಿತ್ತು. ಇಲ್ಲಿ ಮಾತ್ರ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆ ಬಳಿಕ ಸರ್ಕಾರ ಖಾಸಗಿ ಆಸ್ಪತ್ರೆಗೂ ಅವಕಾಶ ನೀಡಲಾಗುವುದು ಎಂದು ತಿಳಿಸಿತು. ಈ ಮೂಲಕ ಸರ್ಕಾರಿ ಆಸ್ಪತ್ರೆಯ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ಶಿವಮೊಗ್ಗ(ಜೂ.23): ಕೊರೋನಾ ಸೋಂಕಿತರು ಇನ್ಮುಂದೆ ಖಾಸಗಿ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಪಡೆಯಬಹುದಾಗಿದ್ದು, ಸರ್ಕಾರ ಇದಕ್ಕಾಗಿ ಜಿಲ್ಲೆಯ 22 ಆಸ್ಪತ್ರೆಗಳನ್ನು ಗುರುತಿಸಿದೆ.

ಈ 22 ಆಸ್ಪತ್ರೆಗಳ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಇತ್ಯಾದಿ ವಿವರ ಒಳಗೊಂಡು ಆದೇಶ ಹೊರಡಿಸಿದೆ. ಇದರಲ್ಲಿ ಶಿವಮೊಗ್ಗದ 17, ಭದ್ರಾವತಿಯ 4 ಮತ್ತು ತೀರ್ಥಹಳ್ಳಿಯ ಒಂದು ಆಸ್ಪತ್ರೆಯನ್ನು ಗುರುತಿಸಲಾಗಿದೆ. ಈಗಾಗಲೇ ಸರ್ಕಾರ ಖಾಸಗಿ ಆಸ್ಪತ್ರೆಯಲ್ಲಿ ನೀಡಬಹುದಾಗಿದ್ದು, ಚಿಕಿತ್ಸೆಯ ವೆಚ್ಚವನ್ನು ಕೂಡಾ ನಿಗದಿಪಡಿಸಿದೆ. ಖಾಸಗಿ ಆಸ್ಪತ್ರೆಗಳು ಈ ದರಪಟ್ಟಿಯಂತೆ ಚಿಕಿತ್ಸೆ ನೀಡಬೇಕಾಗುತ್ತದೆ.

Tap to resize

Latest Videos

ಆರಂಭದಲ್ಲಿ ಶಿವಮೊಗ್ಗದ ಮೆಗ್ಗಾನ್‌ ಕೋವಿಡ್‌ ಆಸ್ಪತ್ರೆ ಎಂದು ಗುರುತಿಸಲಾಗಿತ್ತು. ಇಲ್ಲಿ ಮಾತ್ರ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆ ಬಳಿಕ ಸರ್ಕಾರ ಖಾಸಗಿ ಆಸ್ಪತ್ರೆಗೂ ಅವಕಾಶ ನೀಡಲಾಗುವುದು ಎಂದು ತಿಳಿಸಿತು. ಈ ಮೂಲಕ ಸರ್ಕಾರಿ ಆಸ್ಪತ್ರೆಯ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ.

ಚೀನಾದ ವಸ್ತುಗಳನ್ನೆಲ್ಲ ಬಹಿಷ್ಕರಿಸಿ: ಶಾಸಕ ಆರಗ ಜ್ಞಾನೇಂದ್ರ

ಆದರೆ ಈ ಖಾಸಗಿ ಆಸ್ಪತ್ರೆಗಳು ಕೋವಿಡ್‌ 19 ವೈರಾಣು ಸಂಬಂಧ ಚಿಕಿತ್ಸೆ ನೀಡುವ ಮಟ್ಟಿಗಿನ ವ್ಯವಸ್ಥೆಯನ್ನು ಹೊಂದಿದೆಯೇ ಎಂಬುದನ್ನು ಸದ್ಯಕ್ಕಂತೂ ಹೇಳಲು ಸಾಧ್ಯವಿಲ್ಲ. ಬಹುತೇಕ ಆಸ್ಪತ್ರೆಗಳಲ್ಲಿ ಇಂತಹ ವ್ಯವಸ್ಥೆಗಳೇ ಇಲ್ಲ. ಅತ್ಯಂತ ಕಿರಿದಾದ ಸ್ಥಳದಲ್ಲಿ ಹಲವು ಆಸ್ಪತ್ರೆಗಳು ನಡೆಸಲಾಗುತ್ತಿದೆ. ಆದರೆ ಕೋವಿಡ್‌ ಚಿಕಿತ್ಸೆ ನೀಡಲು ಪ್ರತ್ಯೇಕ ಕಟ್ಟಡದ ವ್ಯವಸ್ಥೆ ಇರಬೇಕಾಗುತ್ತದೆ. ಇದರ ಜೊತೆಗೆ ಸರ್ಕಾರ ಇನ್ನೂ ಹಲವಾರು ನಿಯಮ ರೂಪಿಸಿದ್ದು, ಅದರಂತೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳ ಬೇಕಾಗುತ್ತದೆ.

ಶೀಘ್ರ ಸಭೆ:

ಈ ಎಲ್ಲ ಆಸ್ಪತ್ರೆಗಳ ಮಾಲೀಕರು ಮತ್ತು ಮುಖ್ಯ ವೈದ್ಯರ ಸಭೆ ಶೀಘ್ರದಲ್ಲಿಯೇ ಕರೆಯಲಿದ್ದು, ಈ ಸಭೆಯಲ್ಲಿ ಸರ್ಕಾರದ ನೀತಿ ನಿಯಮ ತಿಳಿಸಲಾಗುತ್ತದೆ. ಯಾವ್ಯಾವ ಆಸ್ಪತ್ರೆಗಳಲ್ಲಿ ಏನೇನು ಸೌಲಭ್ಯ ಇದೆ ಎಂಬ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್‌ ಕನ್ನಡಪ್ರಭಕ್ಕೆ ತಿಳಿಸಿದರು. ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಬೇಕಾದಲ್ಲಿ ಒದಗಿಸಬೇಕಾದ ಸೌಲಭ್ಯಗಳ ಪಟ್ಟಿಯನ್ನು ನೀಡಿ, ಈ ಸೌಲಭ್ಯ ಒದಗಿಸಿಕೊಂಡಲ್ಲಿ ಮಾತ್ರ ಚಿಕಿತ್ಸೆ ನೀಡುವ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಸರ್ಕಾರ ಪಟ್ಟಿಮಾಡಿದ ಆಸ್ಪತ್ರೆಗಳು:

ಶಿವಮೊಗ್ಗ:

ನಂಜಪ್ಪ ಲೈಫ್‌​ಕೇರ್‌ (8182251166)

ಮಲ್ನಾಡ್‌ ಕ್ಯಾನ್ಸರ್‌ ಆಸ್ಪತ್ರೆ (8182246800)

ಸಹ್ಯಾದ್ರಿ ನಾರಾ​ಯಣ ಹೃದ​ಯಾ​ಲಯ (8182221588)

 ಸುಬ್ಬಯ್ಯ ಆಸ್ಪತ್ರೆ (98440077203)

 ಶ್ರೀ ಬಸ​ವೇ​ಶ್ವರ ಆಸ್ಪ​ತ್ರೆ (8182220535)

ರವಿ ಪಾಲಿ​ಕ್ಲಿನಿಕ್‌ ಮೆಟ​ರ್ನಿಟಿ ಅ್ಯಂಡ್‌ ನರ್ಸಿಂಗ್‌ ಹೋಂ (8182223773)

ಮಲ್ನಾಡ್‌ ಇಎ​ನ್‌ಟಿ ಇನ್‌​ಸ್ಟಿ​ಟ್ಯೂಟ್‌ ಅ್ಯಂಡ್‌ ರಿಸರ್ಚ್ ಸೆಂಟರ್‌ (8182226947)

ಎಸ್‌​ಕೆ​ಕೆ​ಎಂಟಿ ಶಂಕರ ಕಣ್ಣಿನ ಆಸ್ಪತ್ರೆ (8182222099)

ಸಾಗರ್‌ ನರ್ಸಿಂಗ್‌ ಹೋಂ ಮತ್ತು ಲೇಸರ್‌ ಸೆಂಟರ್‌ (8182224970)

ಸಿಂಧು ಯೂರಾ​ಲಜಿ ಆಸ್ಪತ್ರೆ (9243334524)

ಮ್ಯಾಕ್ಸ್‌ ಸೂಪರ್‌ ಸ್ಪೆಷಾ​ಲಿಟಿ ಆಸ್ಪತ್ರೆ (8182269400)

ಸರ್ಜಿ ಆಸ್ಪತ್ರೆ (8182405505)

ಸುಬ್ಬಯ್ಯ ಮೆಡಿ​ಕಲ್‌ ಕಾಲೇಜ್‌ ಹಾಸ್ಪಿ​ಟಲ್‌ ಅ್ಯಂಡ್‌ ರಿಸರ್ಚ್ ಸೆಂಟರ್‌ (8182295604)

ಮೆಟ್ರೋ ಯುನೈ​ಟೆಡ್‌ ಹೆಲ್ತ್‌​ಕೇರ್‌ (8182270001)

ಕೊಟ್ಟೂ​ರೇ​ಶ್ವರ ಆಸ್ಪತ್ರೆ (9449400000)

ಯುನಿಟಿ ಸೆಂಟರ್‌ ಫಾರ್‌ ಅಡ್ವಾ​ನ್ಸ್‌ಡ್‌ ಪಿಡಿ​ಯಾಟ್ರಿಕ್‌ ಕೇರ್‌ (9739963933)

ಮಲ್ಲಿ​ಕಾ​ರ್ಜುನ ನರ್ಸಿಂಗ್‌ ಹೋಂ (9448123580).

ಭದ್ರಾವತಿ:

ಭದ್ರಾ​ವ​ತಿ ಭದ್ರಾ ನರ್ಸಿಂಗ್‌ ಹೋಂ (8282266483)

ನಯನ ಆಸ್ಪತ್ರೆ(9448884774)

ದುರ್ಗ ನರ್ಸಿಂಗ್‌ ಹೋಂ (9449836352)

ನಿರ್ಮಲ ಆಸ್ಪ​ತ್ರೆ (9449551275).

ತೀರ್ಥ​ಹ​ಳ್ಳಿ:

ಅನು​ರಾಧ ನರ್ಸಿಂಗ್‌ ಹೋಂ (8181228238).

ಈಗಲೂ ಕೊರೋನಾ ಸೋಂಕಿತರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಸ್ವತಂತ್ರರಿದ್ದಾರೆ. ಆದರೆ ಸಧ್ಯ ಚಿಕಿತ್ಸೆ ನೀಡುತ್ತಿರುವ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಇನ್ನೂ ಸಾಕಷ್ಟುಅವಕಾಶಗಳಿದ್ದು ಸಧ್ಯ 25 ಜನ ಮಾತ್ರ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಎಲ್ಲರೂ ಇಲ್ಲಿಗೇ ಬರುತ್ತಿದ್ದಾರೆ. -ಕೆ.ಬಿ.ಶಿವಕುಮಾರ್‌, ಜಿಲ್ಲಾಧಿಕಾರಿ
 

click me!