ಉಪಚುನಾವಣೆ: 18.810 ಲೀಟರ್ ಮದ್ಯ ವಶ

Published : Nov 30, 2019, 08:44 AM ISTUpdated : Nov 30, 2019, 08:59 AM IST
ಉಪಚುನಾವಣೆ: 18.810 ಲೀಟರ್ ಮದ್ಯ ವಶ

ಸಾರಾಂಶ

ಕೆ.ಆರ್‌ .ಪೇಟೆ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಹಿನ್ನಲೆಯಲ್ಲಿ ಅಬಕಾರಿ ಆಯುಕ್ತರು ಜಿಲ್ಲಾಯಾದ್ಯಂತ ನಡೆಸಿದ ಕಾರ್ಯಚರಣೆಯಲ್ಲಿ 18.810 ಲೀ.ಮದ್ಯವನ್ನು ಜಪ್ತಿ ಮಾಡಿದ್ದಾರೆ.

ಮಂಡ್ಯ(ನ.30): ಕೆ.ಆರ್‌ .ಪೇಟೆ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಹಿನ್ನಲೆಯಲ್ಲಿ ಅಬಕಾರಿ ಆಯುಕ್ತರು ಜಿಲ್ಲಾಯಾದ್ಯಂತ ನಡೆಸಿದ ಕಾರ್ಯಚರಣೆಯಲ್ಲಿ 18.810 ಲೀ.ಮದ್ಯವನ್ನು ಜಪ್ತಿ ಮಾಡಿದ್ದಾರೆ.

ಮೈಸೂರು ಅಬಕಾರಿ ಜಂಟಿ ಆಯುಕ್ತರ ಮಾರ್ಗದರ್ಶನ ಅನ್ವಯ ಅಬಕಾರಿ ಉಪ ಆಯುಕ್ತರ ನೇತೃತ್ವದಲ್ಲಿ ನ.28 ರಂದು ಮಂಡ್ಯ ಜಿಲ್ಲೆಯಾದ್ಯಂತ ಕಾರ್ಯಚಾರಣೆ ನಡೆಸಿ 42 ಕಡೆ ದಾಳಿ ಮಾಡಲಾಯಿತು. ದಾಳಿಯಲ್ಲಿ 1 ಘೋರ, 2 ಸಾಮಾನ್ಯ ಹಾಗೂ ಕಲಂ 15ಂ ಅನ್ವಯ 18 ಪ್ರಕರಣಗಳನ್ನು ದಾಖಲಿಸಿ, 18.810 ಲೀ ಮದ್ಯವನ್ನು ಮತ್ತು 1 ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಅಬಕಾರಿ ಅಕ್ರಮಗಳ ತಡೆಗಟ್ಟಲು ಸೂಚನೆ

ಜಿಲ್ಲೆಯಾದ್ಯಂತ ಅಬಕಾರಿ ಅಕ್ರಮಗಳು ಜರುಗದಂತೆ ಕಟ್ಟುನಿಟ್ಟಾಗಿ ತಡೆಗಟ್ಟಲು ಅಬಕಾರಿ ಜಾರಿ ಮತ್ತು ತನಿಖಾ ಚಟುವಟಿಕೆಗಳನ್ನು ನಿರ್ವಹಿಸಿ ಎಂದು ಅಬಕಾರಿ ಆಯುಕ್ತ ವೈ.ಯಶ್ವಂತ್‌ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಉಪಚುನಾವಣೆ: 3.23 ಕೋಟಿ ಮೌಲ್ಯದ ಅಕ್ರಮ ಮದ್ಯ ವಶ

ಕೆ.ಆರ್‌ .ಪೇಟೆ ವಿಧಾನಸಭೆ ಉಪ ಚುನಾವಣೆಯ ನೀತಿಸಂಹಿತೆಯು ಜಿಲ್ಲೆಯಾದ್ಯಂತ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ನವೆಂಬರ್‌ 28 ರಂದು ಇಲಾಖೆಯ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳ ಜತೆ ನಡೆದ ಸಭೆಯಲ್ಲಿ ಮಾತನಾಡಿ, ಇದುವರೆಗೂ ದಾಖಲಾಗಿರುವಂತಹ ಪ್ರಕರಣಗಳ ಬಗ್ಗೆ ಪರಿಶೀಲಿಸಿ, ಸೂಕ್ತ ಮಾರ್ಗದರ್ಶನಗಳನ್ನು ನೀಡಿದ್ದಾರೆ.

ಉಪಚುನಾವಣೆ: ಮಂಡ್ಯದಲ್ಲಿ 52 ಲಕ್ಷ ರೂಪಾಯಿ ವಶ

PREV
click me!

Recommended Stories

Railway Drug Mafia: ರೈಲುಗಳಲ್ಲಿ ಡ್ರಗ್ಸ್ ಮಾಫಿಯಾ ಜಾಲ.. ಹೆಚ್ಚಾಗುತ್ತಲೇ ಇದೆ ಗಾಂಜಾ ಸಾಗಣೆ
ಮೆಟ್ರೋ ಗುಲಾಬಿ ಮಾರ್ಗದ ರೈಲು ಅನಾವರಣ: ಯಾವ್ಯಾವ ಮಾರ್ಗಕ್ಕೆ?