ತ್ಯಾವರೆಕೊಪ್ಪ ಹುಲಿ ಸಿಂಹಧಾಮದಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದು ಸಫಾರಿಯ 'ಆರ್ಯ' ಇನ್ನಿಲ್ಲ!

By Govindaraj S  |  First Published Aug 5, 2024, 9:16 PM IST

ನಗರದ ಹೊರವಲಯದಲ್ಲಿರುವ ತ್ಯಾವರೆಕೊಪ್ಪ ಹುಲಿ ಸಿಂಹಧಾಮದಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಗಂಡು ಸಿಂಹವೊಂದು ಅಸುನೀಗಿದೆ. 


ಶಿವಮೊಗ್ಗ (ಆ.05): ನಗರದ ಹೊರವಲಯದಲ್ಲಿರುವ ತ್ಯಾವರೆಕೊಪ್ಪ ಹುಲಿ ಸಿಂಹಧಾಮದಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಗಂಡು ಸಿಂಹವೊಂದು ಅಸುನೀಗಿದೆ. ಹದಿನೆಂಟು ವರ್ಷದ ಗಂಡು ಸಿಂಹ ಆರ್ಯ ಇಂದು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದೆ. ಕಳೆದ ಆರು ತಿಂಗಳುಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಆರ್ಯ ಕಳೆದ ಮೂರು ದಿನಗಳಿಂದ ಆಹಾರವನ್ನು ತ್ಯಜಿಸಿತ್ತು. ಇಂದು ಕೊನೆಯುಸಿರು ಎಳೆಯುವ ಮೂಲಕ ಸಫಾರಿಯ ಆಕರ್ಷಣೀಯ ಕೇಂದ್ರಬಿಂದು ಅಜರಾಮರವಾಗಿದೆ

ಸಾಮಾನ್ಯವಾಗಿ ಕಾಡಿನಲ್ಲಿ ಸಿಂಹಗಳು 12 ರಿಂದ 15 ವರ್ಷಗಳ ವರೆಗೆ ಬದುಕಿರುತ್ತವೆ ವಯಸ್ಸಾದ ನಂತರ ಭೇಟೆಯಾಡಲು ಅಶಕ್ತವಾಗಿ ಹಸಿವಿನಿಂದಲೇ ಪ್ರಾಣ ಬಿಡುವ ಹಾಗೂ ಪರಸ್ಪರ ಕಾದಾಟದಿಂದ ಗಾಯಗಳಾಗಿ ಚಿಕಿತ್ಸೆ ಇಲ್ಲದೆ ಸಾವನ್ನಪ್ಪುವ ಸಂಧರ್ಭಗಳೇ ಹೆಚ್ಚು. ಹುಲಿಗಳಂತೆ ಒಂಟಿಯಾಗಿ ಬದುಕದೆ ಗುಂಪಿನಲ್ಲಿ ಸಿಂಹಗಳು ಬದುಕುತ್ತವೆ ಆದರೆ ಗಂಡು ಸಿಂಹಗಳು ಪರಸ್ಪರ ಒಟ್ಟಿಗೆ ಬದುಕುವುದು ಕೂಡ ವಿರಳ.  

Latest Videos

undefined

ಆದರೆ ಲಯನ್ ಸಫಾರಿಯಲ್ಲಿ ಸಾಕಲಾಗಿದ್ದ ಆರ್ಯ ಸಿಂಹ ಹದಿನೆಂಟು ವರ್ಷಕ್ಕೆ ವಯೋಸಹಜ ಕಾಯಿಲೆಯಿಂದ ಬಳಲಿ ಇಂದು ಇಹಲೋಕ ತ್ಯಜಿಸಿದೆ. 2008ರಲ್ಲಿ ಮೈಸೂರು ಮೃಗಾಲಯದಿಂದ ಶಿವಮೊಗ್ಗಕ್ಕೆ ಬಂದಿದ್ದ ಆರ್ಯ ಸಿಂಹದ ಅಗಲಿಕೆಯಿಂದ ಈಗ ಹುಲಿ‌ ಸಿಂಹಧಾಮದಲ್ಲಿ ಸಿಂಹಗಳ ಸಂಖ್ಯೆ ಐದರಿಂದ ನಾಲ್ಕಕ್ಕೆ ಇಳಿದಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಸರ್ವೇಶ್ ಎಂಬ ಸಿಂಹ ಜಾಂಡೀಸ್ ಕಾಯಿಲೆಯಿಂದ ನರಳಿ ಮೃತಪಟ್ಟಿತ್ತು. 

ಕರಾವಳಿ ಮತ್ತು ಮಲೆನಾಡಿಗೆ 300 ಕೋಟಿ ಅನುದಾನ ನೀಡಲು ಸಿಎಂ ಒಪ್ಪಿಗೆ: ಸಚಿವ ಕೃಷ್ಣ ಭೈರೇಗೌಡ

ಈಗ ಸುಷ್ಮಿತ, ಸಲೋಚನ ಎಂಬ ಎರಡು ಹೆಣ್ಣು ಸಿಂಹ ಹಾಗು ಧರ್ಮ ಮತ್ತು ಅರ್ಜುನ ಎಂಬ ಎರಡು ಗಂಡು ಸಿಂಹಗಳು ಉಳಿದಿದೆ. ವಯೋ ಸಹಜವಾಗಿ ಸಾವನಪ್ಪಿದ ಆರ್ಯ ಸಿಂಹದ ಅಂತ್ಯ ಸಂಸ್ಕಾರವನ್ನು ಹುಲಿ ಸಿಂಹಧಾಮದ  ನೂತನ ಕಾರ್ಯನಿರ್ವಾಹಕ ನಿರ್ದೇಶಕರಾದ ಅಮರ್ ಅಕ್ಷರ್ , ಡಿ ಆರ್ ಎಫ್ ಓ ಯಶೋಧರ ಸೇರಿದಂತೆ ವನ್ಯಜೀವಿ ಇಲಾಖೆಯ ಸಿಬ್ಬಂದಿಗಳು , ವನ್ಯಜೀವಿ ವೈದ್ಯರು ಹಾಗು ಪೋಲೀಸ್ ಸಿಬ್ಬಂದಿಗಳ ಸಮ್ಮುಖದಲ್ಲಿ ನಡೆಯಿತು.

click me!