ರಾಯಚೂರು ವೈಟಿಪಿಎಸ್ 2 ಘಟಕ ಸ್ಥಗಿತ, ವಿದ್ಯುತ್ ಕೊರತೆ ಆತಂಕ

By Kannadaprabha News  |  First Published Mar 8, 2024, 12:11 PM IST

ವೈಟಿಪಿಎಸ್‌ನ ತಲಾ 800 ಮೆಗಾವ್ಯಾಟ್ ಸಾಮರ್ಥ್ಯದ 1 ಮತ್ತು 2 ನೇ ಘಟಕಗಳಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದಾಗಿ ವಿದ್ಯುತ್ ಉತ್ಪಾದನೆ ನಿಲ್ಲಿಸಲಾಗಿದೆ. ಘಟಕಗಳ ಬಾಯರ್ ಪೈಪ್ ಒಡೆದು ಹೋಗಿದ್ದು, ದುರಸ್ತಿ ಕಾರ್ಯಕ್ಕೆ ಅಧಿಕಾರಿ, ಸಿಬ್ಬಂದಿ ಮುಂದಾಗಿದ್ದಾರೆ. ಸಂಪೂರ್ಣ ದುರಸ್ತಿಗೆ ತಿಂಗಳ ಕಾಲ ಬೇಕಾಗಬಹುದು ಎನ್ನಲಾಗಿದೆ. 


ರಾಯಚೂರು(ಮಾ.08):  ಮಳೆ ಕೊರತೆ, ತೀವ್ರ ಬರ ಹಾಗೂ ಬೇಸಿಗೆಯಲ್ಲಿ ವಿದ್ಯುತ್‌ ಬೇಡಿಕೆ ಹೆಚ್ಚಾಗಿರುವ ಸಮಯದಲ್ಲೇ ಯರಮರಸ್ ಅತ್ಯಾಧುನಿಕ ಶಾಖೋತ್ಪನ್ನ ವಿದ್ಯುತ್‌ ಸ್ಥಾವರದ (ವೈಟಿಪಿಎಸ್) ಎರಡು ಘಟಕಗಳು ಸ್ಥಗಿತಗೊಂಡಿರುವುದರಿಂದ ರಾಜ್ಯಕ್ಕೆ ಕರೆಂಟ್ ಶಾಕ್ ಕೊಟ್ಟಂತಾಗಿದೆ. 

ಸಮೀಪದ ವೈಟಿಪಿಎಸ್‌ನ ತಲಾ 800 ಮೆಗಾವ್ಯಾಟ್ ಸಾಮರ್ಥ್ಯದ 1 ಮತ್ತು 2 ನೇ ಘಟಕಗಳಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದಾಗಿ ವಿದ್ಯುತ್ ಉತ್ಪಾದನೆ ನಿಲ್ಲಿಸಲಾಗಿದೆ. ಘಟಕಗಳ ಬಾಯರ್ ಪೈಪ್ ಒಡೆದು ಹೋಗಿದ್ದು, ದುರಸ್ತಿ ಕಾರ್ಯಕ್ಕೆ ಅಧಿಕಾರಿ, ಸಿಬ್ಬಂದಿ ಮುಂದಾಗಿದ್ದಾರೆ. 

Latest Videos

undefined

ರಾಜ್ಯದಲ್ಲಿ ನೀರಿನ ಹಾಹಾಕಾರದ ಬೆನ್ನಲ್ಲೇ ಇದೀಗ ವಿದ್ಯುತ್‌ ಕ್ಷಾಮ!

ಸಂಪೂರ್ಣ ದುರಸ್ತಿಗೆ ತಿಂಗಳ ಕಾಲ ಬೇಕಾಗಬಹುದು ಎನ್ನಲಾಗಿದೆ. ಈಗಾಗಲೇ ರಾಯಚೂರು ಬೃಹತ್ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (ಆರ್‌ಟಿಪಿಎಸ್) ದ 8 ಘಟಕಗಳ ಪೈಕಿ 1 ಮತ್ತು 2 ನೇ ಘಟಕಗಳನ್ನು ಬಂದ್‌ ಮಾಡಲಾಗಿದೆ. ಉಳಿದ ಆರು ಘಟಕಗಳಿಂದ 1000 ಮೆಗಾ ವ್ಯಾಟ್ ಕರೆಂಟ್ ಉತ್ಪಾದಿಸಿ ರಾಜ್ಯ ಜಾಲಕ್ಕೆ ರವಾನಿಸಲಾಗುತ್ತಿದೆ.

click me!