ಬೆಂಗ್ಳೂರಲ್ಲಿ ತಗ್ಗದ ವರುಣನ ಆರ್ಭಟ: ಇನ್ನೂ ಮೂರ್ನಾಲ್ಕು ದಿನ ಮಳೆ ಸಾಧ್ಯತೆ

By Girish Goudar  |  First Published Mar 23, 2022, 4:46 AM IST

*  ಹಲವೆಡೆ ನಿನ್ನೆ ಸಂಜೆಯೂ ಭರ್ಜರಿ ಮಳೆ
*  ಕೋಲಾರ ಜಿಲ್ಲೆಯಲ್ಲಿ ತಂಪೆರೆದ ಮಳೆ
* ಮಂಗಳವಾರ ಮಧ್ಯಾಹ್ನದ ಬಳಿಕ ತುಸು ಧಗೆಯ ವಾತಾವರಣ 
 


ಬೆಂಗಳೂರು(ಮಾ.23):  ರಾಜ್ಯದಲ್ಲಿ(Karnataka) ಅಕಾಲಿಕ ಮಳೆಯ(Rain) ಆರ್ಭಟ ಮುಂದುವರೆದಿದ್ದು, ಮಂಗಳವಾರ ಸಂಜೆ ಸಹ ನಗರದ ಕೆಲ ಭಾಗದಲ್ಲಿ ಭರ್ಜರಿ ಮಳೆಯಾಗಿದೆ. ಶನಿವಾರದಿಂದ ನಗರದಲ್ಲಿ ಪ್ರತಿದಿನ ಮಳೆಯಾಗುತ್ತಿದೆ. ಇನ್ನೂ ಮೂರ್ನಾಲ್ಕು ದಿನ ಮಳೆಯ ವಾತಾವರಣ ಇರಲಿದೆ.

ಮಂಗಳವಾರ ಮಧ್ಯಾಹ್ನದ ಬಳಿಕ ತುಸು ಧಗೆಯ ವಾತಾವರಣ ಇತ್ತು. ಆಗಾಗ ಮೋಡ ಕವಿಯುತ್ತಲೂ ಇತ್ತು. ಆದರೆ, ಸಂಜೆ 6ರ ಸುಮಾರಿಗೆ ಧಾರಕಾರ ಮಳೆ ಸುರಿಯಿತು. ಬೆಂಗಳೂರು(Bengaluru) ದಕ್ಷಿಣದಲ್ಲಿ ಮಳೆಯ ಅಬ್ಬರ ಹೆಚ್ಚಿತ್ತು. ಉಳಿದಂತೆ ಬೆಂಗಳೂರು ಪಶ್ಚಿಮ, ದಾಸರಹಳ್ಳಿ, ಆರ್‌.ಆರ್‌.ನಗರದಲ್ಲಿ ಸಾಧಾರಣ ಮಳೆಯಾಗಿದೆ. ಬೊಮ್ಮನಹಳ್ಳಿ, ಮಹದೇವಪುರ, ಯಲಹಂಕ ಮತ್ತು ಬೆಂಗಳೂರು ಪೂರ್ವದಲ್ಲಿ ತುಂತುರು ಮಳೆ ಸುರಿದಿದೆ.

Tap to resize

Latest Videos

Summer Rains: ಬೆಂಗ್ಳೂರಲ್ಲಿ ಸತತ 2ನೇ ದಿನವೂ ವರುಣನ ಅಬ್ಬರ: ಇನ್ನೂ 2 ದಿನ ಮಳೆ

ಮಳೆಗೆ ರಸ್ತೆಯಲ್ಲಿ ನೀರು ನಿಂತ, ಮರಗಳು ಬಿದ್ದ ಪ್ರಕರಣಗಳು ವರದಿಯಾಗಿವೆ. ಹಂಪಿನಗರದ ಮೇಲ್ಸೇತುವೆ, ಬಿಸಿಸಿ ಬಡಾವಣೆ ಮತ್ತು ಗಿರಿನಗರದಲ್ಲಿ ಮರ ಬಿದ್ದಿದ್ದೆ. ನಗರದ ಇನ್ನೂ ಅನೇಕ ಕಡೆ ಟೊಂಗೆಗಳು ಮುರಿದ ಘಟನೆಗಳು ನಡೆದಿದೆ. ಓಕಳಿಪುರಂ, ಶಿವಾನಂದ ಸರ್ಕಲ್‌, ನಾಯಂಡಹಳ್ಳಿ, ಮೈಸೂರು ರಸ್ತೆ, ಆನಂದ್‌ರಾವ್‌ ಸರ್ಕಲ್‌ ಮುಂತಾದೆಡೆ ರಸ್ತೆಯಲ್ಲಿ ನೀರು ನಿಂತ ಘಟನೆಗಳು ಜರುಗಿವೆ. ಆದರೆ ಯಾವುದೇ ದೊಡ್ಡ ಹಾನಿಯ ದೂರುಗಳು ಬಂದಿಲ್ಲ ಎಂದು ಬಿಬಿಎಂಪಿ ಸಹಾಯವಾಣಿಯ(BBMP Helpline) ಸಿಬ್ಬಂದಿ ತಿಳಿಸಿದ್ದಾರೆ.

ಗಾಳಿ ಆಂಜನೇಯ ದೇವಾಲಯದ ಬಳಿ 2.2 ಸೆಂ.ಮೀ., ದಕ್ಷಿಣ ಹಂಪಿ ನಗರದಲ್ಲಿ 1.7 ಸೆಂ.ಮೀ. ಮಳೆಯಾಗಿದೆ. ಉಳಿದಂತೆ ಶೇಷಾದ್ರಿಪುರ, ಮಲ್ಲೇಶ್ವರ, ಮೆಜೆಸ್ಟಿಕ್‌, ರಾಜಾಜಿನಗರ, ಜಯನಗರ, ಜೆ.ಪಿ.ನಗರ, ಶಾಂತಿನಗರ, ನಿಮ್ಹಾನ್ಸ್‌ ಸುತ್ತಮುತ್ತ, ಹೆಬ್ಬಗೋಡಿ, ಪೀಣ್ಯ ಕೈಗಾರಿಕಾ ವಲಯ, ದೊಡ್ಡಬಿದಿರಕಲ್ಲು, ಲಕ್ಕಸಂದ್ರ, ವಿಜಯನಗರ, ಕೆ.ಆರ್‌.ಸರ್ಕಲ್‌, ಚಾಮರಾಜಪೇಟೆ ಭಾಗದಲ್ಲಿ ಮಳೆಯಾಗಿದೆ.

ಬಂಗಾಳ ಕೊಲ್ಲಿಯಲ್ಲಿನ(Bay of Bengal) ವಾಯುಭಾರ ಕುಸಿತ, ಮಧ್ಯ ಮಹಾರಾಷ್ಟ್ರದಲ್ಲಿನ(Maharashtra) ಮೇಲ್ಮೈ ಸುಳಿಗಾಳಿ, ಛತ್ತೀಸ್‌ಗಢದಿಂದ ತೆಲಂಗಾಣದವರೆಗೆ ಹಬ್ಬಿರುವ ಟ್ರಫ್‌ನ ಕಾರಣದಿಂದ ನಗರದಲ್ಲಿ ಮಳೆಯಾಗುತ್ತಿದೆ.

ಮಳೆಯಿಂದಾಗಿ ನಗರದಲ್ಲಿ ತುಸು ತಂಪಾದ ವಾತಾವರಣ ಮೂಡಿದ್ದು ಗರಿಷ್ಠ ಉಷ್ಣತೆಯಲ್ಲಿಯೂ ಇಳಿಕೆ ವರದಿಯಾಗಿದೆ. ನಗರದ ಗರಿಷ್ಠ ಮತ್ತು ಕನಿಷ್ಠ ಉಷ್ಣತೆ ಕ್ರಮವಾಗಿ 32 ಮತ್ತು 21.8 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಕೋಲಾರ ಜಿಲ್ಲೆಯಲ್ಲಿ ತಂಪೆರೆದ ಮಳೆ

ಕೋಲಾರ(Kolar): ಎರಡನೇ ದಿನವೂ ಕೋಲಾರ ಜಿಲ್ಲೆಯಲ್ಲಿ ಅಕಾಲಿಕ ಮಳೆ ತಂಪು ತಂದಿದ್ದು ಸೋಮವಾರ ಸಂಜೆ ಶ್ರೀನಿವಾಸಪುರ, ಕೋಲಾರ ತಾಲ್ಲೂಕುಗಳಲ್ಲಿ ಹೆಚ್ಚು ಮಳೆಯಾಗಿದೆ. ಭಾನುವಾರ ಸಂಜೆ ಕೋಲಾರ, ಶ್ರೀನಿವಾಸಪುರ, ಕೆಜಿಎಫ್‌, ಬಂಗಾರಪೇಟೆ ಮತ್ತು ಮಾಲೂರು ತಾಲೂಕುಗಳಲ್ಲಿ ಮಳೆಯಾಯಿತು. 

Bengaluru Record Rainfall: ಸಿಲಿಕಾನ್‌ ಸಿಟಿಯಲ್ಲಿ ದಶಕದ ದಾಖಲೆಯ ಬೇಸಿಗೆ ಮಳೆ!

ಸೋಮವಾರ ರಾತ್ರಿ 7 ಗಂಟೆಯ ನಂತರ ಶ್ರೀನಿವಾಸಪುರ, ಕೋಲಾರ ತಾಲ್ಲೂಕುಗಳಲ್ಲಿ ಮಳೆ ಮುಂದುವರೆದಿದೆ ಈ ಮಳೆಯಿಂದಾಗಿ ಮಾವು ಬೆಳೆಗಾರರಲ್ಲಿ ತೃಪ್ತಿ ತಂದಿದೆ. ಮಾವು ಗೋಲಿ ಗಾತ್ರದ ಪಿಂದಿಗಳಾಗಿದ್ದು ಈ ಹಂತದಲ್ಲಿ ಮಾವು ಫಸಲಿಗೆ ಮಳೆ ಬೇಕಾಗಿತ್ತು. ಸಕಾಲಕ್ಕೆ ಮಳೆ ಕಾಣಿಸಿಕೊಂಡಿದೆ. ಇನ್ನೂ ಸ್ವಲ್ಪ ಮಳೆ ಆದರೆ ಮಾವು ಫಸಲು ಉಳಿದುಕೊಳ್ಳುತ್ತದೆ ಎಮದು ರೈತರು ಹೇಳಿದ್ದಾರೆ.

ರಾಜ್ಯದ ಹಲವೆಡೆ ಅಕಾಲಿಕ ಮಳೆಗೆ ಮೂವರ ಬಲಿ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು, ಮೈಸೂರು, ಮಂಡ್ಯ, ಚಿಕ್ಕಮಗಳೂರು, ರಾಯಚೂರು, ಕೊಪ್ಪಳ ಚಾಮರಾಜನಗರ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕಾಲಿಕ ಮಳೆ ಶುರುವಾಗಿದ್ದು, ಶನಿವಾರ ಮಳೆಯಬ್ಬರಕ್ಕೆ ಮೂವರು ಬಲಿಯಾಗಿದ್ದರು. 

ಮುಂಗಾರು ಪೂರ್ವ ಮಳೆಯ ಅಬ್ಬರದಲ್ಲಿ ಸಿಡಿಲಿಗೆ ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲೂಕಿನ ಹನಸೋಗೆ ಗ್ರಾಮದ ಸಿದ್ದಲಿಂಗನಾಯಕ (72), ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಗಾಣದಾಲ ಗ್ರಾಮದ ಹೊರವಲಯದಲ್ಲಿ 13 ಕುರಿ ಸೇರಿ ಕುರಿಗಾಯಿ ಸುನೀಲ್‌ ಬಸರಿಹಾಳ(21) ಮೃತಪಟ್ಟಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ದೊಡ್ಡಪಾಳ್ಯ ಗ್ರಾಮದಲ್ಲಿ ಬಾರಿ ಬಿರುಗಾಳಿಯಿಂದಾಗಿ ತೆಂಗಿನ ಮರ ನೆಲಕ್ಕುರಳಿ ಪ್ರಿಯಾಂಕ(12) ಎಂಬ ಬಾಲಕಿ ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡು, ಕಾರು, ಬೈಕ್‌ ಜಖಂಗೊಂಡಿರುವ ಘಟನೆ ನಡೆದಿದೆ. ಶ್ರೀರಂಗಪಟಣದಿಂದ ಬನ್ನೂರು ಕಡೆಗೆ ಕಾರು ಚಲಿಸುತ್ತಿದ್ದ ವೇಳೆ ತೆಂಗಿನಮರ ಕಾರಿನ ಮೇಲೆ ಉರುಳಿ ಬಾಲಕಿ ಪ್ರಿಯಾಂಕ ಸ್ಥಳದಲ್ಲೇ ಮೃತಪಟ್ಟಿದ್ದು, ತಂದೆ ನಾಗರಾಜು ಗಂಭೀರವಾಗಿ ಗಾಯಗೊಂಡಿದ್ದರು. 
 

click me!