ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರದಿಂದ ಲಾಕ್‌ಡೌನ್ ಸಡಿಲಿಕೆ?

By Suvarna News  |  First Published Jun 19, 2021, 10:28 AM IST

* ಸಭೆ, ಸಮಾರಂಭ ನಿಷೇಧ, ಥಿಯೇಟರ್ ಮತ್ತು ಮಾಲ್ ಬಂದ್ 
* ಬಸ್ ಸಂಚಾರಕ್ಕೆ ಅನುಮತಿ ಕೊಡುವುದು ರಾಜ್ಯ ಸರ್ಕಾರದ ನಿರ್ಧಾರ
* ಸರ್ಕಾರ ಅನುಮತಿ ಕೊಟ್ಟರೆ ಸೋಮವಾರದಿಂದ ಅನ್‌ಲಾಕ್ 


ದಕ್ಷಿಣ ಕನ್ನಡ(ಜೂ.19): ಜಿಲ್ಲೆಯಲ್ಲಿ ಸೋಮವಾರ(ಜೂ.21)ದಿಂದ ಹಂತಹಂತವಾಗಿ ಲಾಕ್‌ಡೌನ್ ಸಡಿಲಿಕೆಗೆ ಜಿಲ್ಲಾಡಳಿತ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ. ರಾಜ್ಯ ಸರ್ಕಾರ ಅನುಮತಿ ಕೊಟ್ಟರೆ ಜಿಲ್ಲೆಯಲ್ಲಿ ಸೋಮವಾರದಿಂದ ಅನ್‌ಲಾಕ್ ಆಗುವುದು ಪಕ್ಕಾ ಎಂದು ಹೇಳಲಾಗುತ್ತಿದೆ.

ಹಂತ ಹಂತವಾಗಿ ಲಾಕ್‌ಡೌನ್ ಸಡಿಲಿಕೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಗಮನಕ್ಕೆ ತರಲು ಚಿಲ್ಲಾಡಳಿತ ಚಿಂತನೆ ನಡೆಸಿದೆ. ಸಡಿಲಿಕೆಗೆ ಅವಕಾಶ ಕೊಟ್ಟರೆ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪಟ್ಟಿಯನ್ನೂ ಕೂಡ ಜಿಲ್ಲಾಡಳಿತ ಮಾಡಿಕೊಂಡಿದೆ. ಅಗತ್ಯ ವಸ್ತುಗಳ ಜೊತೆಗೆ ಇತರೆ ಅಂಗಡಿ, ಶಾಪ್ ತೆರೆಯಲು ಅನುಮತಿ ಸಿಗುವ ಸಾಧ್ಯತೆ ಇದೆ.

Latest Videos

undefined

ಕೋವಿಡ್ ಸೋಂಕಿತ ಮೃತ ಮಹಿಳೆಯ ಅಂತ್ಯಸಂಸ್ಕಾರ ನಡೆಸಿದ ಶಾಸಕ ಸಂಜೀವ ಮಠಂದೂರು

ವಾರದಲ್ಲಿ ಮೂರು ದಿನ ಅಗತ್ಯ ವಸ್ತು, ಉಳಿದ ನಾಲ್ಕು ದಿನ ಇತರೆ ಅಂಗಡಿ ತೆರೆಯಲು ಅನುಮತಿ ನೀಡುವ ಸಾಧ್ಯತೆ ಇದೆ. ಒಂದು ದಿನ ಅಗತ್ಯ ವಸ್ತುವಿಗಷ್ಟೇ ಅನುಮತಿ, ಇನ್ನೊಂದು ದಿನ ಇತರೆ ಶಾಪ್‌ಗಳಿಗೆ ಅನುಮತಿ ಸಿಗಬಹುದು. ಇಷ್ಟು ದಿನ ಮುಚ್ಚಿದ್ದ ವ್ಯವಹಾರದ ನಷ್ಟ ತಪ್ಪಿಸಲು ಅನುಮತಿ ನೀಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಮಧ್ಯಾಹ್ನದವರೆಗಷ್ಟೇ ವ್ಯವಹಾರ ನಡೆಸಲು ಅನುಮತಿ ನೀಡುವ ಸಾಧ್ಯತೆ ಇದೆ.

ಸಭೆ, ಸಮಾರಂಭ ನಿಷೇಧ, ಥಿಯೇಟರ್ ಮತ್ತು ಮಾಲ್‌ಗಳು ಬಂದ್ ಇರಲಿವೆ. ಬಸ್ ಸಂಚಾರಕ್ಕೆ ಅನುಮತಿ ಕೊಡುವುದು ರಾಜ್ಯ ಸರ್ಕಾರದ ನಿರ್ಧಾರಕ್ಕೆ ಬಿಟ್ಟಿದ್ದು, ಬಸ್ ಸಂಚಾರದ ಬಗ್ಗೆ ಜಿಲ್ಲಾಡಳಿತಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. 

ಶುಕ್ರವಾರ ಶೇ. 10 ರಷ್ಟು ಕೊರೋನಾ ಪಾಸಿಟಿವಿಟಿ ರೇಟ್ ಹೊಂದಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ 11 ಸಾವಿರಕ್ಕೂ ಅಧಿಕ ಕೋವಿಡ್‌ ಟೆಸ್ಟಿಂಗ್ ಮಾಡಿದೆ ಆರೋಗ್ಯ ಇಲಾಖೆ. ಹೊರ ಜಿಲ್ಲೆಯ ರೋಗಿಗಳು ಕೂಡ ಮಂಗಳೂರಿನ ಆಸ್ಪತ್ರೆಗಳಲ್ಲೇ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
 

click me!