ಕಷ್ಟದ ಕಲಿ​ಕೆ​ಗಿಂತ ಇಷ್ಟದ ಕಲಿ​ಕೆಯೇ ಮುಖ್ಯ: ಡಾ.ನಾ.ಸೋಮೇಶ್ವರ

By Kannadaprabha News  |  First Published Jul 3, 2023, 12:30 AM IST

ಜಗತ್ತಿನಲ್ಲಿ ಯಾರು ದಡ್ಡರಲ್ಲ. ಪ್ರತಿಯೊಬ್ಬರ ಬದುಕಿಗೂ ಪರಿಸರ ಪ್ರಭಾವ ಬೀರುತ್ತದೆ. ಮಕ್ಕಳಿಗೆ ಉತ್ತಮ ಪರಿಸರ ಇರುವ ಶಾಲೆಗಳಲ್ಲಿ ಕಲಿಕಾ ಜೀವನ ಕಳೆಯಲು ಪೋಷಕರು ಸಹಕರಿಸಬೇಕು ಎಂದು ಚಂದನ ಹಾಗೂ ದೂರದರ್ಶನದ ಥಟ್‌ ಅಂತ ಹೇಳಿ ಕಾರ್ಯಕ್ರಮದ ಡಾ.ನಾ.ಸೋಮೇಶ್ವರ ಹೇಳಿದರು. 


ಹೊಳೆಹೊನ್ನೂರು (ಜು.03): ಜಗತ್ತಿನಲ್ಲಿ ಯಾರು ದಡ್ಡರಲ್ಲ. ಪ್ರತಿಯೊಬ್ಬರ ಬದುಕಿಗೂ ಪರಿಸರ ಪ್ರಭಾವ ಬೀರುತ್ತದೆ. ಮಕ್ಕಳಿಗೆ ಉತ್ತಮ ಪರಿಸರ ಇರುವ ಶಾಲೆಗಳಲ್ಲಿ ಕಲಿಕಾ ಜೀವನ ಕಳೆಯಲು ಪೋಷಕರು ಸಹಕರಿಸಬೇಕು ಎಂದು ಚಂದನ ಹಾಗೂ ದೂರದರ್ಶನದ ಥಟ್‌ ಅಂತ ಹೇಳಿ ಕಾರ್ಯಕ್ರಮದ ಡಾ. ನಾ.ಸೋಮೇಶ್ವರ ಹೇಳಿದರು. ಇಲ್ಲಿನ ಸಮೀಪದ ಜಾವಳ್ಳಿಯ ಜ್ಞಾನದೀಪ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಮಕ್ಕಳಲ್ಲಿ ಶಾಲೆ ಮಹತ್ವದ ಪ್ರಾಭಾವ ಬೀರುತ್ತದೆ. ವಿದ್ಯಾರ್ಥಿ ಜೀವನದಲ್ಲಿ ವೀಕ್ಷಣೆ ಹವ್ಯಾಸವಾಗಬೇಕು. ಆದರಿಂದ ಪ್ರಾಯೋಗಿಕ ಅನುಭವ ಪಡೆದು ಅದನ್ನು ಜೀವನದಲ್ಲಿ ಅನ್ವಯಿಸಿಕೊಳ್ಳಬೇಕು. ಕಷ್ಟದ ಕಲಿಕೆಗಿಂತ ಇಷ್ಟದ ಕಲಿಕೆ ಬಹಳ ಮುಖ್ಯ ಎಂದರು. ವಿದ್ಯಾರ್ಥಿ ತನ್ನ ಮನಸ್ಸನ್ನು ನಿಗ್ರಹಿಸಿ ಓದುವ ಪ್ರಯತ್ನ ಮಾಡಬೇಕು. ವಿದ್ಯಾಭ್ಯಾಸ ಅಂಕ ಗಳಿಕೆಗೆ ಮಾತ್ರ ಆಗದೇ ಅರಿವು ಮೂಡಿಸಬೇಕು. ಕಲಿಕೆಗೆ ವಯಸ್ಸಿನ ಮಿತಿಯೂ ಇಲ್ಲ. ಅಡ್ಡದಾರಿಯೂ ಇಲ್ಲ. ಜೀವನದ ಅನುಭವಗಳಲ್ಲಿ ಕಲಿಕೆಯಿದೆ. ಮನೆ, ಶಾಲೆ, ಗೆಳೆಯರ ಪರಿಸರದಿಂದ ದೊರೆಯುತ್ತದೆ ಎಂದರು. 

Tap to resize

Latest Videos

ಸೈಬರ್‌ ಕ್ರೈಂ ಹಾಗೂ ಫೇಕ್‌ ನ್ಯೂಸ್‌ ತಡೆಗಟ್ಟಲು ರೂಪುರೇಷೆಗೆ ಸಿದ್ಧತೆ: ಸಚಿವ ಪರಮೇಶ್ವರ್‌

ಉತ್ತಮ ವಿದ್ಯಾರ್ಥಿ ಯಾರೆಂದರೆ, ಸನ್ನಿವೇಷಕ್ಕೆ ತಕ್ಕಂತೆ ವಿಷಯಗಳನ್ನು ನೆನಪಿಗೆ ತಂದುಕೊಳ್ಳುವ ಸಾಮರ್ಥ್ಯ ಹೊಂದಿದವನು. ನೆನಪು ಒಂದು ಸಾಮರ್ಥ್ಯ ಅದನ್ನು ಕಲಿಕೆಯಿಂದಲೇ ಪಡೆದು ಯಶಸ್ಸು ಪಡೆಯಬೇಕಾಗುತ್ತದೆ. ಅಧ್ಯಯನದ ಪೂರ್ವಸಿದ್ಧತೆಯೊಂದಿಗೆ ಸಾಗಬೇಕು. ಮನಸ್ಸನ್ನು ಓದಲು ಸಿದ್ಧಗೊಳಿಸಿಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಜ್ಞಾನದೀಪ ವಿದ್ಯಾಸಂಸ್ಥೆಯ ಖಜಾಂಚಿ ಡಾ.ಶ್ರೀಧರ್‌, ಕಲಿಕೆಗೆ ಮತ್ತು ಜೀವನದ ಯಶಸ್ಸಿಗೆ ನಾನು ಸಾಧನೆ ಮಾಡಬೇಕೆಂಬ ಮನಸ್ಸು, ಸ್ವಯಂ ಸ್ಪೂರ್ತಿ, ಪಡೆದ ಸ್ವಯಂ ಅಭಿಪ್ರೇರಣೆ, ಧನಾತ್ಮಕ ಮನೋಭಾವನೆ ಇರಬೇಕಾಗುತ್ತದೆ. 

ಕೇಂದ್ರ ಅಕ್ಕಿ ಕೊಡದಿದ್ದಕ್ಕೆ ವಿಧಿ ಇಲ್ಲದೇ ಹಣ ಕೊಡ್ತಿದೀವಿ: ಬಿಜೆಪಿಗರಿಗೆ ಸಚಿವ ವೆಂಕಟೇಶ್‌ ಟಾಂಗ್‌

ಯೋಗಶಾಸ್ತ್ರದಂತೆ ನಾವು ಮಾಡುವ ಕೆಲಸ ಮಾತ್ರ ನಮ್ಮಲ್ಲಿ ಶ್ರೇಷ್ಠ ಕೌಶಲ್ಯ ತರುತ್ತದೆ. ಸಮಾಜದಲ್ಲಿ ಒಬ್ಬ ಮೌಲ್ಯಯುತ ವ್ಯಕ್ತಿಯಾಗಲು ಸರಿ- ತಪ್ಪುಗಳ ಅರಿವು, ಸಾಮಾಜಿಕ ಪ್ರಜ್ಞೆ ಸಾಮಾಜಿಕ ಚಿಂತನೆ ಪ್ರಬಲವಾಗಿ ಇರಬೇಕಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಜ್ಞಾನದೀಪ ವಿದ್ಯಾಸಂಸ್ಥೆ ಕಾರ್ಯದರ್ಶಿ ಬಿ.ಎಲ್‌.ನೀಲಕಂಠಮೂರ್ತಿ, ಜ್ಞಾನದೀಪ ಶಾಲೆಯ ಪ್ರಾಚಾರ್ಯ ಶ್ರೀಕಾಂತ ಎಂ.ಹೆಗಡೆ, ಅರಬಿಂದೋ ಕಾಲೇಜಿನ ಪ್ರಾಚಾರ್ಯ ಡಾ. ಕೆ.ನಾಗರಾಜ ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕ ಮಲ್ಲಿಕಾರ್ಜುನ್‌ ನಿರೂಪಿಸಿದರು.

click me!