ಶಿಕ್ಷಕರು ದೇಶ ಕಟ್ಟುವ ಸತ್ಪ್ರಜೆಗಳನ್ನು ಸಮಾಜಕ್ಕೆ ನೀಡಿ: ಸಚಿವ ಕೆ.ಎನ್‌.ರಾಜಣ್ಣ

By Kannadaprabha News  |  First Published Jul 2, 2023, 11:21 PM IST

ಶಿಕ್ಷಕರು ಪಾಠ ಪ್ರವಚನ ಮಾಡುವ ವೇಳೆ ಯಾವುದೇ ಲೋಪವಾಗದಂತೆ, ದೇಶ ಕಟ್ಟುವ ಸತ್ಪ್ರಜೆಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಹೇಳಿದರು.


ಮಧುಗಿರಿ (ಜು.02): ಶಿಕ್ಷಕರು ಪಾಠ ಪ್ರವಚನ ಮಾಡುವ ವೇಳೆ ಯಾವುದೇ ಲೋಪವಾಗದಂತೆ, ದೇಶ ಕಟ್ಟುವ ಸತ್ಪ್ರಜೆಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಹೇಳಿದರು. ಇಲ್ಲಿನ ಎಂಜಿಎಂ ಬಾಲಿಕಾ ಪ್ರೌಢಶಾಲೆಯಲ್ಲಿ ಮಧುಗಿರಿ ಉತ್ತರ ಶೈಕ್ಷಣಿಕ ಜಿಲ್ಲೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100ರಷ್ಟುಫಲಿತಾಂಶ ದಾಖಲಿಸಿದ ಸರ್ಕಾರಿ ಅನುದಾನಿತ, ಅನುದಾನ ರಹಿತ ಒಟ್ಟು 82 ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಸನ್ಮಾನ ಮತ್ತು 25 ಸಾವಿರ ನಗದು ಚೆಕ್‌ ವಿತರಣೆ ಸಮಾರಂಭ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳನ್ನು ತಿದ್ದಿ ಹಿಂದಿನ ತರಗತಿ ವಿಷಯಗಳ ಬಗ್ಗೆ ಚರ್ಚಿಸುವ ಮೂಲಕ ಜ್ಞಾನಾರ್ಜನೆಗೆ ಒತ್ತು ಕೊಡುವ ನಿಟ್ಟಿನಲ್ಲಿ ಏಕಾಗ್ರತೆ ರೂಢಿಸಿ ಹೆಚ್ಚು ಚರ್ಚಾ ಸ್ಪರ್ಧೆಯಲ್ಲಿ ತೊಡಗಿಸಿದಾಗ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಮಕ್ಕಳು ಶಾಲೆಗೆ ಗೈರಾಗದಂತೆ ಶಿಕ್ಷಕರು ಮುತುವರ್ಜಿ ವಹಿಸಬೇಕು. ವಿದ್ಯೆ ಸಾಧನಕನ ಸ್ವತ್ತು, ಸೋಮಾರಿಗಳ ಸ್ವತ್ತಲ್ಲ. ಶಿಕ್ಷಕರು ತಮ್ಮ ಕರ್ತವ್ಯವನ್ನು ಚಾಚೂ ತಪ್ಪದೆ ನಿರ್ವಹಿಸಬೇಕು. ಶಾಲೆ ಬಿಟ್ಟಮಕ್ಕಳ ಬಗ್ಗೆ ವಿಶೇಷ ಗಮನ ಹರಿಸಿ. ಪುನಃ ಅಂತಹ ಮಕ್ಕಳನ್ನು ಹುಡುಕಿ ವಿದ್ಯಾಭ್ಯಾಸಕ್ಕೆ ಕರೆ ತರಬೇಕು. 

Tap to resize

Latest Videos

ಕೇಂದ್ರ ಅಕ್ಕಿ ಕೊಡದಿದ್ದಕ್ಕೆ ವಿಧಿ ಇಲ್ಲದೇ ಹಣ ಕೊಡ್ತಿದೀವಿ: ಬಿಜೆಪಿಗರಿಗೆ ಸಚಿವ ವೆಂಕಟೇಶ್‌ ಟಾಂಗ್‌

ಇಂದು ವ್ಯವಸಾಯ ಲಾಭದಾಯಕವಲ್ಲ, ಆದರೆ ವಿದ್ಯೆ ಸಕಲ ಸಂಪತ್ತನ್ನು ತಂದು ಕೊಡುತ್ತದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಪೋಷಕರು ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಮುಂದೆ ಬರಬೇಕು. ಭಾನುವಾರದಿಂದ ತಾಲೂಕಿನ ಸರ್ಕಾರಿ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ನೋಟ್‌ ಪುಸ್ತಕಗಳನ್ನು ಸಂಕೇತಿಕವಾಗಿ ವಿತರಿಸಲಾಗುವುದು ಎಂದರು. ಉಪನ್ಯಾಸಕ ಸಂಘದ ಜಿಲ್ಲಾಧ್ಯಕ್ಷ ಎನ್‌.ಮಹಾಲಿಂಗೇಶ್‌ ಮಾತನಾಡಿ, ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳಿಗೆ ವೈಜ್ಞಾನಿಕ, ವೈಚಾರಿಕ ಮನೋಭಾವ ಬೆಳಸಬೇಕು. ಮೌಢ್ಯತೆ ಬಗ್ಗೆ ಅರಿವು ಮೂಡಿಸಬೇಕು. 

ಜೆಡಿಎಸ್‌ನಿಂದ ಹಣ ಪಡೆದು ಪಕ್ಷ ವಿರೋಧಿ ಚಟುವಟಿಕೆ: ಸಚಿವ ಚಲುವರಾಯಸ್ವಾಮಿ

ಎಲ್ಲ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲು ಸರ್ಕಾರ ಗಮನ ಹರಿಸಬೇಕು. ಪದವಿ ಕಾಲೇಜುಗಳಲ್ಲಿನ ಗ್ರಂಥಾಲಯಗಳಲ್ಲಿ ಕುವೆಂಪು ಮತ್ತು ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕಗಳು ದೊರಕುವಂತಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಡಿಡಿಪಿಐ ಎಂ.ಆರ್‌.ಮಂಜುನಾಥ್‌, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟರಂಗಾರೆಡ್ಡಿ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಸಂಜಯ್‌, ಇಓ ಶಾಂತಲ, ವಿಷಯ ಪರಿವೀಕ್ಷಕರಾದ ಮೋಹನ್‌, ಮಾರುತಿ, ಡಿವೈಪಿಸಿ ನರಸಿಂಹಮೂರ್ತಿ, ಡಯಟ್‌ ಪ್ರಾಂಶುಪಾಲ ಗಂಗಾಧರ್‌, ಬಿಇಓಗಳಾದ ತಿಮ್ಮರಾಜು, ಕೃಷ್ಣಪ್ಪ, ನಟರಾಜು, ಚಿತ್ತಯ್ಯ, ಶಿಕ್ಷಕರಾದ ಗಂಗಾಧರಯ್ಯ, ದಾಸಣ್ಣ , ತೋಟದಪ್ಪ, ಸಿದ್ದೇಶ್ವರ್‌, ಕೆಪಿಸಿಸಿ ವಕ್ತಾರ ನಿಖಿತ್‌ ಮೌರ್ಯ ಸೇರಿದಂತೆ ಅನೇಕರಿದ್ದರು.

click me!