ಪತಿಯ ಜೀವ ಬೆದರಿಕೆ: ಸುಡುಬಿಸಿಲನಲ್ಲೇ 4 ತಿಂಗಳ ಕಂದಮ್ಮನೊಂದಿಗೆ ಗೃಹಿಣಿ ಪಾದಯಾತ್ರೆ

Kannadaprabha News   | Asianet News
Published : May 09, 2020, 11:03 AM ISTUpdated : May 09, 2020, 11:16 AM IST
ಪತಿಯ ಜೀವ ಬೆದರಿಕೆ: ಸುಡುಬಿಸಿಲನಲ್ಲೇ 4 ತಿಂಗಳ ಕಂದಮ್ಮನೊಂದಿಗೆ ಗೃಹಿಣಿ ಪಾದಯಾತ್ರೆ

ಸಾರಾಂಶ

4 ತಿಂಗಳ ಹಸುಗೂಸಿನೊಂದಿಗೆ ಗೃಹಿಣಿ ಪಾದಯಾತ್ರೆ| ಜಿಲ್ಲೆಯ ಬಾದಾಮಿ ತಾಲೂಕಿನ ತಮನಾಳ ಗ್ರಾಮದಲ್ಲಿ ನಡೆದ ಘಟನೆ| ಪತಿಯ ಜೀವ ಬೆದರಿಕೆ ಹಿನ್ನೆಲೆ, ಬಾದಾಮಿ ಠಾಣೆಗೆ ನಡೆದುಕೊಂಡು ಬಂದ ಮಹಿಳೆ|

ಬಾಗಲಕೋಟೆ(ಮೇ.09): ಪತಿಯ ಜೀವ ಭಯದಿಂದ ನಾಲ್ಕು ತಿಂಗಳ ಹಸುಗೂಸಿನೊಂದಿಗೆ ಸ್ವಗ್ರಾಮ ತಮನಾಳದಿಂದ ಬಾದಾಮಿ ಪೊಲೀಸ್‌ ಠಾಣೆಯವರೆಗೆ ಗೃಹಿಣಿಯೊಬ್ಬಳು ಪಾದಯಾತ್ರೆ ಆರಂಭಿಸಿದ ಘಟನೆ ನಡೆದಿದೆ.

ಜಿಲ್ಲೆಯ ಬಾದಾಮಿ ತಾಲೂಕಿನ ತಮನಾಳ ಗ್ರಾಮದಿಂದ ಉರಿಬಿಸಿನಲ್ಲೇ 15 ಕಿಮೀ ಪಾದಯಾತ್ರೆಯನ್ನು ಗುರುವಾರ ಆರಂಭಿಸಿರುವ ಗೃಹಿಣಿ ಬಾದಾಮಿ ಪೊಲೀಸ್‌ ಠಾಣೆಗೆ ತೆರಳಿ ನ್ಯಾಯ ಕೇಳಲು ಮುಂದಾಗಿದ್ದಾಳೆ.

ಅಪಾಯಕಾರಿ ಬೆಳವಣಿಗೆ: ರೋಗಿಗಳಲ್ಲಿ ಕೊರೋನಾ ಸೋಂಕಿನ ಲಕ್ಷಣಗಳೇ ಇಲ್ಲ..!

ಏಳು ವರ್ಷಗಳ ಹಿಂದೆ ಅಶ್ವಿನಿ ಎಂಬಾಕೆ ದೇವರಾಜ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು. ಆದರೆ ಪತಿ ದೇವರಾಜ ಹೇಳದೆ, ಕೇಳದೆ ಎರಡನೇ ಮದುವೆಯಾಗಿದ್ದಾನೆ. ಇದರಿಂದ ಪತಿಯ ಈ ನಡೆಯನ್ನು ಪ್ರಶ್ನಿಸಿ ಪತಿಯ ವಿರುದ್ಧ ಬಾದಾಮಿ ಪೊಲೀಸ್‌ ಠಾಣೆಯಲ್ಲಿ ಅಶ್ವಿನಿ ದೂರು ಸಲ್ಲಿಸಿದ್ದಳು. ಆದರೆ ಆಗ ಬಂಧಿತನಾಗಿದ್ದ ಪತಿ ದೇವರಾಜ ಇದೀಗ ಜಾಮೀನಿನ ಮೇಲೆ ಹೊರಗೆ ಬಂದಿದ್ದಾನೆ. ಹೀಗಾಗಿ ನನಗೆ ಜೀವ ಬೆದರಿಕೆ ಹಾಕುತ್ತಿದ್ದು, ನ್ಯಾಯ ದೊರಕಿಸಿಕೊಡಲು ಆಗ್ರಹಿಸಿ ಪಾದಯಾತ್ರೆ ಕೈಗೊಂಡಿದ್ದಾಗಿ ತಿಳಿದುಬಂದಿದೆ.
 

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC