ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸಹಾಯಕವಾಗುವ ಆರೋಗ್ಯ ಸೇತು ಕೋವಿಡ್ - 19 ಟ್ರಾಕರ್ ಮೊಬೈಲ್ ಅ್ಯಪ್ ಅನ್ನು ಕಡ್ಡಾಯವಾಗಿ ಎಲ್ಲರೂ ಡೌನ್ ಲೋಡ್ ಮಾಡಿಕೊಳ್ಳಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಸೂಚನೆ ನೀಡಿದ್ದಾರೆ.
ಚಾಮರಾಜನಗರ(ಮೇ 09): ಕೊರೋನಾ ಪಾಸಿಟಿವ್ ದೃಢಪಟ್ಟಿರುವ ವ್ಯಕ್ತಿ ಹತ್ತಿರ ಬಂದರೆ ಅಥವಾ ಸಮೀಪದಲ್ಲಿ ಇದ್ದರೆ ಎಚ್ಚರಿಕೆ ನೀಡುವ ಮೂಲಕ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸಹಾಯಕವಾಗುವ ಆರೋಗ್ಯ ಸೇತು ಕೋವಿಡ್ - 19 ಟ್ರಾಕರ್ ಮೊಬೈಲ್ ಅ್ಯಪ್ ಅನ್ನು ಕಡ್ಡಾಯವಾಗಿ ಎಲ್ಲರೂ ಡೌನ್ ಲೋಡ್ ಮಾಡಿಕೊಳ್ಳಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕೋವಿಡ್-19 ಮುಂಜಾಗರೂಕತಾ ಕ್ರಮಗಳು ಹಾಗೂ ಲಾಕ್ ಡೌನ್ ಅವಧಿಯಲ್ಲಿ ಜನರಿಗಾಗಿ ರೂಪಿಸಿರುವ ಆರೋಗ್ಯ ಸೇವೆಗಳ ಯೋಜನೆ ಅನುಷ್ಠಾನ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲಾಕ್‌ಡೌನ್ ನಡುವೆಯೇ ಗೋಮಾಂಸ ತಂದು ನೆರೆ ಮನೆಯವ್ರಿಗೂ ಹಂಚಿದ್ರು..!
ದೃಢೀಕೃತ ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳ ಮಾಹಿತಿ ಪಡೆಯಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮೂಲಕ ಬಿಡುಗಡೆ ಮಾಡಿರುವ ಆರೋಗ್ಯ ಸೇತು ಕೋವಿಡ್ - 19 ಅ್ಯಪ್ ಕಾರ್ಯನಿರ್ವಹಿಸುತ್ತಿದೆ. ವೈರಸ್ ಸೋಂಕಿಗೆ ತುತ್ತಾಗಿರುವ ವ್ಯಕ್ತಿಯ ಮೇಲೆ ನಿಗಾ ಇರಿಸುವ ಮತ್ತು ವೈಯಕ್ತಿಕ ಅಲರ್ಟ್ ಸಂದೇಶದ ಮೂಲಕ ಎಚ್ಚರಿಕೆ ನೀಡುವ ವಿಶೇಷತೆಯುಳ್ಳ ಆರೋಗ್ಯ ಸೇತು ಅ್ಯಪ್ ಉಪಯೋಗವಾಗಲಿದೆ. ಅ್ಯಪ್ ಅನ್ನು ಅಳವಡಿಸಿಕೊಂಡಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟವ್ಯಕ್ತಿ ಹತ್ತಿರ ಅಥವಾ ಸಮೀಪದಲ್ಲಿ ಇದ್ದಲ್ಲಿ ಕೂಡಲೇ ಅ್ಯಪ್ ಅಲರ್ಟ್ ಎಚ್ಚರಿಸುತ್ತದೆ. ಹೀಗಾಗಿ ಸಾಮಾಜಿಕ ಅಂತರ ಕಾಪಾಡಿಕೊಂಡು ರಕ್ಷಿಸಿಕೊಳ್ಳಬಹುದು ಎಂದರು.
ಈ ಅ್ಯಪ್ ಅನ್ನು ಸ್ಮಾರ್ಟ್ ಪೋನ್‌ನಲ್ಲಿ ಬಳಸಬಹುದಾಗಿದ್ದು ಸಾರ್ವಜನಿಕರು, ಸರ್ಕಾರಿ ನೌಕರರು, ಬ್ಯಾಂಕ್, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೌಕರರು, ಖಾಸಗಿ ವಲಯದ ನೌಕರರು ಡೌನ್ ಲೋಡ್ ಮಾಡಿಕೊಳ್ಳುವ ಮೂಲಕ ಆರೋಗ್ಯ ಕಾಳಜಿ ಎಚ್ಚರಿಕೆಗೆ ಮುಂದಾಗಲು ಅಕಾರಿಗಳು ಜಾಗೃತಿ ಮೂಡಿಸಬೇಕೆಂದು ಅವರು ತಿಳಿಸಿದರು.
ಕಾಫಿನಾಡಿನಲ್ಲಿ ಸುರಿಯಿತು ಧಾರಾಕಾರ ಮಳೆ
ಸರ್ಕಾರಿ ಇಲಾಖೆಗಳ ನೌಕರರು, ಸಿಬ್ಬಂದಿ ಕಡ್ಡಾಯವಾಗಿ ಅ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಇತರರಿಗೂ ಅ್ಯಪ್ ಬಳಕೆ ಡೌನ್‌ಲೋಡ್ ಬಗ್ಗೆ ಅರಿವು ಮೂಡಿಸಬೇಕು. ಈ ವಿಷಯದಲ್ಲಿ ಪ್ರತಿ ಇಲಾಖೆಯಲ್ಲಿ ಡೌನ್ ಲೋಡ್ ಮಾಡಿಕೊಂಡ ಮಾಹಿತಿಯನ್ನು ನೀಡಬೇಕೆಂದು ನಿರ್ದೇಶನ ನೀಡಿದರು.
ಔಷಧ ಮಾರಾಟ ಅಂಗಡಿಗಳು ಆರೋಗ್ಯ ಸೇತು ಅ್ಯಪ್ ಬಳಕೆಗೆ ಜನರನ್ನು ಉತ್ತೇಜಿಸಬೇಕು. ಅಂಗಡಿಗೆ ಬರುವವರಿಗೆ ಅ್ಯಪ್ ಡೌನ್ ಲೋಡ್ ಮಾಡಿಕೊಳ್ಳಲು ತಿಳಿವಳಿಕೆ ನೀಡಬೇಕು. ಜತೆಗೆ ಡೌನ್ ಲೋಡ್ ಮಾಡಿಕೊಡÜುವ ವ್ಯವಸ್ಥೆಯನ್ನು ಸಹ ಕೈಗೊಳ್ಳುವಂತೆ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ, ವೈದ್ಯಕೀಯ ಕಾಲೇಜಿನ ಡೀನ್ ಡಾ. ಸಂಜೀವ್ ಹಾಗೂ ಇತರರು ಸಭೆಯಲ್ಲಿ ಇದ್ದರು.