ಮುಂಬರುವ ದಿನಗಳಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ಜನಸಾಮಾನ್ಯರ ಬೇಡಿಕೆಗಳು ಈಡೇರಲಿವೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ, ಕೊಪ್ಪಳ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ವೀರೇಶ ಮಹಾಂತಯ್ಯನಮಠ ತಿಳಿಸಿದರು.
ಕೊಪ್ಪಳ : ಮುಂಬರುವ ದಿನಗಳಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ಜನಸಾಮಾನ್ಯರ ಬೇಡಿಕೆಗಳು ಈಡೇರಲಿವೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ, ಕೊಪ್ಪಳ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ವೀರೇಶ ಮಹಾಂತಯ್ಯನಮಠ ತಿಳಿಸಿದರು.
ನಗರದ ಪೀರ್‌ಪಾಷಾ ಖಾದ್ರಿಸಾಬ್ ದರ್ಗಾ ದರ್ಶನ ಪಡೆದು, ಸಂವಿಧಾನಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಡಾ.ಬಾಬಾ ಜಗಜೀವನ ರಾಮ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪಲ್ಟನ್ ಗಲ್ಲಿ, 4ನೇ ವಾರ್ಡಿನಲ್ಲಿ ಶನಿವಾರ ಪ್ರಾರಂಭವಾದ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಂಚರತ್ನ ಯೋಜನೆಯಿಂದ ಕೃಷಿ, ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯಗಳು ಹಾಗೂ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗುತ್ತದೆ ಎಂದರು.
undefined
ಈ ಹಿಂದೆ ಮಾಜಿ ಮುಖ್ಯಮಂತ್ರಿ ಮಾಡಿರುವ ಕೆಲಸಗಳನ್ನು ಜನರು ಸ್ಮರಿಸುತ್ತಿದ್ದಾರೆ. ಮತ್ತೊಮ್ಮೆ ಕುಮಾರಣ್ಣ ಮುಖ್ಯಮಂತ್ರಿ ಆಗಲಿ ಎಂಬ ಕೂಗು ಕೇಳಿ ಬರುತ್ತಿದ್ದು, ಈ ಬಾರಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಪಕ್ಷವು ದಲಿತ, ಹಿಂದುಳಿದ,ಅಭಿವೃದ್ಧಿಗೆ ಶ್ರಮಿಸಲಿದೆ. ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರ ಜನಪರ ಕಾಳಜಿಯನ್ನು ಮತದಾರರು ಅರಿತಿದ್ದಾರೆ. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸುವುದು ನಿಶ್ಚಿತವೆಂದರು.
ಪೀರ್ ಪಾಷಾ ಖಾದ್ರಿಸಾಬ್ ಮಸ್ಜಿದ್ ಅಧ್ಯಕ್ಷ ಫಿರೋಜ್ ಮಾನ್ವಿಕರ್ ಹಾಗೂ ಸದಸ್ಯರು ಮತ್ತು ಮನೆ ಮನೆಗೆ ತೆರಳಿ ಪಂಚರತ್ನ ಯೋಜನೆ ಬಗ್ಗೆ ಜನರಿಗೆ ತಿಳಿಸಿ, ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಚೆನ್ನಪ್ಪ ಮುತ್ತಾಳ, ತಾಲೂಕು ಕಾರ್ಯಾಧ್ಯಕ್ಷ ಆಯೂಬ್ ಅಡ್ಡೆವಾಲೆ, ಪಕ್ಷದ ಸುರೇಶ್ ಗೌಡ ಪಾಟೀಲ್, ಎಂ.ಡಿ. ಶಫೀ, ಚಂದ್ರಪ್ಪ ದೊಡ್ಮನಿ, ಗೌಸ್ ಮೈನುದ್ದೀನ್, ರಂಗಪ್ಪ ಪೂಜಾರಿ, ಮೋಹಿದೀನ್ ಬೆಪಾರಿ, ರಾಜು ನಾಯಕ, ಅಬ್ದುಲ್ ಸಮದ್ ಪಾನ್‌ವಾಲ, ವಿಜಯಕುಮಾರ್ ಮುಂಡರಗಿಮಠ, ಅಬ್ದುಲ್ ಅಜೀದ್ ಮಾನ್ವಿಕರ್, ಬಸವರಾಜ್ ಕಲ್ಕೇರಿ, ರಿಯಾಜ್, ಶೌಖತ್ ಬೆಪಾರಿ, ಮುನ್ನ ಖಾದ್ರಿ, ಸಿಕಂದರ್, ಮುಸ್ತಫಾ, ಅಬ್ದುಲ್ ರೆಹಮಾನ್, ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಇದ್ದರು.
ನನ್ನ ನಿರ್ಧಾರವೇ ಅಂತಿಮ
ಕೊಪ್ಪ : ಹಾಸನದ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರವಾಗಿ ಚರ್ಚಿಸಲು ಭಾನುವಾರ ಬೆಂಗಳೂರಿನಲ್ಲಿ ಪಕ್ಷದ ಕಚೇರಿಯಲ್ಲಿ ಹಾಸನ ಕ್ಷೇತ್ರದ ಕಾರ್ಯಕರ್ತರ ಸಭೆ ಕರೆದಿದ್ದೇನೆ. ಕಾರ್ಯಕರ್ತರ ಅಭಿಪ್ರಾಯ ಪಡೆದು ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ. ಇಂದಿನ ಸಭೆ ರದ್ದಾಗಿದೆ ಎಂಬ ವಿಚಾರ ನನಗೆ ಗೊತ್ತಿಲ್ಲ. ಟಿಕೆಟ್ ವಿಚಾರದಲ್ಲಿ ನನ್ನ ತೀರ್ಮಾನವೇ ಅಂತಿಮ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಹಾಸನದ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರವಾಗಿ ಚರ್ಚಿಸಲು ಭಾನುವಾರ ಕರೆದಿರುವ ಸಭೆ ರದ್ದಾಗಿದೆ ಎಂಬ ಸುದ್ದಿ ಹಬ್ಬಿತ್ತು. ಈ ಸಂಬಂಧ ದೇವರಾಜ್ ಎಂಬುವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ ಎನ್ನಲಾಗಿತ್ತು.
ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ಎಚ್‌ಡಿಕೆ, ದೇವರಾಜ್ ಯಾರು ಎಂಬುದು ನನಗೆ ಗೊತ್ತಿಲ್ಲ. ಸಭೆ ರದ್ದಾಗಿರುವ ಬಗ್ಗೆಯೂ ಮಾಹಿತಿಯಿಲ್ಲ. ಸಭೆ ರದ್ದಾಗಿದ್ದರೂ ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ. ಹಾಸನದಲ್ಲಿ ಬಿಜೆಪಿ ವಿರುದ್ಧ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುವ ಸಾಮರ್ಥ್ಯ ಪಕ್ಷಕ್ಕಿದೆ ಅನ್ನೋದನ್ನು ತೋರಿಸಬೇಕು. ಟಿಕೆಟ್ ವಿಚಾರದಲ್ಲಿ ನನ್ನ ತೀರ್ಮಾನವೇ ಅಂತಿಮ. ನಾನು ಇಷ್ಟು ದಿನ ಹಾಸನ ಕ್ಷೇತ್ರದ ವಿಷಯದಲ್ಲಿ ಎಂಟ್ರಿ ಆಗಿರಲಿಲ್ಲ. ಈಗ ಎಂಟ್ರಿ ಆಗಿದ್ದೇನೆ. ಸಭೆ ಮುಂದು ಹಾಕಲು ಪಕ್ಷದವರೇ ಯಾರೋ ಯತ್ನಿಸಿರಬಹುದು, ಗೊತ್ತಿಲ್ಲ ಎಂದು ಕಿಡಿ ಕಾರಿದರು. 15-20 ವರ್ಷಗಳಿಂದ ನನಗೆ ಇಷ್ಟವಿಲ್ಲದಿದ್ದರೂ ಪಕ್ಷದಲ್ಲಿ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ. ಅಂತಹ ತಪ್ಪು ಮತ್ತೆ ಮಾಡುವುದಿಲ್ಲ ಎಂದೂ ಕುಮಾರಸ್ವಾಮಿ ಹೇಳಿದರು.