ಜನರ ಹಣ ಜನರ ಹಿತಕ್ಕಾಗಿ ಉಪಯೋಗಿಸುವುದೇ ನಮ್ಮ ಎಲ…ಐಸಿ ಸಂಸ್ಥೆ ಎಂದು ಭಾರತೀಯ ಜೀವ ವಿಮಾ ನಿಗಮದ ಶಾಖಾ ವ್ಯವಸ್ಥಾಪಕ ರಾಮಸ್ವಾಮಿ ಹೇಳಿದರು.
ನಂಜನಗೂಡು : ಜನರ ಹಣ ಜನರ ಹಿತಕ್ಕಾಗಿ ಉಪಯೋಗಿಸುವುದೇ ನಮ್ಮ ಸಂಸ್ಥೆ ಎಂದು ಭಾರತೀಯ ಜೀವ ವಿಮಾ ನಿಗಮದ ಶಾಖಾ ವ್ಯವಸ್ಥಾಪಕ ರಾಮಸ್ವಾಮಿ ಹೇಳಿದರು.ಭಾರತೀಯ ಜೀವ ವಿಮಾನ ನಿಗಮದ 67ನೇ ಇನ್ಶುರೆನ್ಸ್ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಐಸಿ ಸಂಸ್ಥೆಯು 1956 ರಲ್ಲಿ ಪ್ರಾರಂಭವಾಗಿ ಮೂರು ಪ್ರಮುಖ ಸಂದರ್ಭಗಳನ್ನು ಮತ್ತು ಖಾಸಗಿ ಸಂಸ್ಥೆಗಳ ಪೈಪೋಟಿಯ ಸಮಸ್ಯೆಗಳನ್ನು ಎದುರಿಸಿ ಪ್ರಪಂಚದಲ್ಲಿಯೇ ದೊಡ್ಡ ಸಂಸ್ಥೆಯಾಗಿ ಬೆಳೆದು ನಿಂತಿದೆ. ಮೂರು ಶೇರು ಮಾರುಕಟ್ಟೆಯಲ್ಲೂ ಸಹ ಶೇ. 50ಕಿಂತಲೂ ಹೆಚ್ಚು ವ್ಯವಹಾರವನ್ನು ಇಟ್ಟುಕೊಂಡಿದೆ. ಎಲ…ಐಸಿ ಸಂಸ್ಥೆಗೆ ಪ್ರತಿನಿಧಿಗಳು, ಆಡಳಿತ ಮಂಡಳಿ, ಪಾಲಿಸಿದಾರರೇ ಮುಖ್ಯವಾದ ಅಂಗಗಳಾಗಿವೆ. ಎಂದ ಅವರು ಎಲ್ಐಸಿ ಸಂಸ್ಥೆಯ ಹಣ ಸಾರ್ವಜನಿಕ ಕ್ಷೇತ್ರಗಳಲ್ಲೂ ಉಪಯೋಗವಾಗುತ್ತಿದ್ದು, ಅಣೆಕಟ್ಟೆ, ಕೇಂದ್ರ ರಸ್ತೆಗಳ ಅಭಿವೃದ್ಧಿ, ರೈಲ್ವೆ ಯೋಜನೆ, ನೀರಾವರಿ, ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಕಾರ್ಖಾನೆಗಳ ನಿರ್ಮಾಣದಂತಹ ಜನಹಿತ ಕಾರ್ಯಕ್ಕಾಗಿ ಎಲ್ಐಸಿ ಸಂಸ್ಥೆಯ ಹಣ ಉಪಯೋಗವಾಗುತ್ತಿದೆ ಎಂದರು.
ಶಾಖೆಗೆ ಭೇಟಿ ನೀಡಿದ ಪಾಲಿಸಿದಾರರನ್ನು ಸನ್ಮಾನಿಸಲಾಯಿತು. ಸಹಾಯಕ ಅಧಿಕಾರಿ ವೈ.ಎನ್…. ಮೂರ್ತಿ, ಉಪ ಶಾಖಾಧಿಕಾರಿ ನರಸಿಂಹನ್, ರೇವಣ್ಣ, ಮೀನಾಕ್ಷಿ, ಶಿವಕುಮಾರ್, ಪ್ರತಿನಿಧಿಗಳ ಸಂಘದ ಅಧ್ಯಕ್ಷ ಕೆಂಪೇಗೌಡ, ಪ್ರತಿನಿಧಿಗಳಾದ ಗುರು ಸಿದ್ದಾಚಾರಿ, ಶಶಿಕಲಾ, ಈರೇಗೌಡ, ನಿಜಲಿಂಗಪ್ಪ, ರಂಗಸ್ವಾಮಿ ಇದ್ದರು.
ಎಲ್‌ಐಸಿಗೆ ನೂತನ ಎಂಡಿ
ನವದೆಹಲಿ (ಆ.15): ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ನೂತನ ವ್ಯವಸ್ಥಾಪಕ ನಿರ್ದೇಶಕರನ್ನಾಗಿ (ಎಂಡಿ) ಆರ್. ದೊರೈಸ್ವಾಮಿ ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ. ಪ್ರಸ್ತುತ ದೊರೈಸ್ವಾಮಿ ಮುಂಬೈ ಕೇಂದ್ರೀಯ ಕಚೇರಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಪ್ರಸ್ತುತ ಎಂಡಿ ಆಗಿರುವ ಐಪೆ ಮಿನಿ ಅವರ ಸ್ಥಾನಕ್ಕೆ ದೊರೈಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ. ಅವರು ಸೆಪ್ಟೆಂಬರ್ 1, 2023 ಅಥವಾ ಅದರ ನಂತರದ ದಿನದಲ್ಲಿ ಅಧಿಕಾರ ಸ್ವೀಕರಿಸಲಿದ್ದು, 2026ರ ಆಗಸ್ಟ್ 31 ಅಥವಾ ಮುಂದಿನ ಆದೇಶ ಬರುವ ತನಕ ಈ ಹುದ್ದೆಯನ್ನು ನಿರ್ವಹಿಸಲಿದ್ದಾರೆ ಎಂದು ರೆಗ್ಯುಲೇಟರಿ ಫೈಲ್ಲಿಂಗ್ ನಲ್ಲಿ ಎಲ್ಐಸಿ ಮಾಹಿತಿ ನೀಡಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ಹಾಗೂ ಹಣಕಾಸು ಸಂಸ್ಥೆಗಳ ನಿರ್ದೇಶಕರ ಮುಖ್ಯಸ್ಥರಾಗಿರುವ ಹಣಕಾಸು ಸೇವಾ ಸಂಸ್ಥೆಗಳ ವಿಭಾಗ (ಎಫ್ ಎಸ್ ಐಬಿ) ಜೂನ್ ನಲ್ಲಿ ಎಲ್ಐಸಿ ಎಂಡಿ ಹುದ್ದೆಗೆ ದೊರೈಸ್ವಾಮಿ ಅವರ ಹೆಸರನ್ನು ಶಿಫಾರಸು ಮಾಡಿತ್ತು.
ಸಿಬ್ಬಂದಿ ಹಾಗೂ ತರಬೇತಿ ಇಲಾಖೆ (ಡಿಒಪಿಟಿ) ಮಾಜಿ ಕಾರ್ಯದರ್ಶಿ ಭಾನು ಪ್ರತಾಪ್ ಶರ್ಮಾ ಎಫ್ ಎಸ್ ಐಬಿ ನೇತೃತ್ವ ವಹಿಸಿದ್ದಾರೆ. ಇನ್ನು ಈ ಹಿಂದೆ ಎಲ್ಐಸಿ ಎಂಡಿ ಉಷಾ ಸಂಗ್ವಾನ್, ಐಆರ್ ಡಿಎಐ ಮುಖ್ಯಸ್ಥ ದೇಬಶೀಶ್ ಪಾಂಡೆ, ಒರಿಯೆಂಟಲ್ ವಿಮಾ ಸಂಸ್ಥೆ ಎಂಡಿ ಎ.ವಿ.ಗಿರಿಜಾ ಕುಮಾರ್, ಹಣಕಾಸು ಸೇವೆಗಳ ಇಲಾಖೆ ಕಾರ್ಯದರ್ಶಿ, ಸಾರ್ವಜನಿಕ ಉದ್ಯಮಗಳ ಇಲಾಖೆ ಕಾರ್ಯದರ್ಶಿ ಎಫ್ ಎಸ್ ಐಬಿ ಇತರ ಸದಸ್ಯರಾಗಿದ್ದಾರೆ.
ಸಿಬ್ಬಂದಿ ಹಾಗೂ ತರಬೇತಿ ಇಲಾಖೆ (ಡಿಒಪಿಟಿ) ಮಾಜಿ ಕಾರ್ಯದರ್ಶಿ ಭಾನು ಪ್ರತಾಪ್ ಶರ್ಮಾ ಎಫ್ ಎಸ್ ಐಬಿ ನೇತೃತ್ವ ವಹಿಸಿದ್ದಾರೆ. ಇನ್ನು ಈ ಹಿಂದೆ ಎಲ್ಐಸಿ ಎಂಡಿ ಉಷಾ ಸಂಗ್ವಾನ್, ಐಆರ್ ಡಿಎಐ ಮುಖ್ಯಸ್ಥ ದೇಬಶೀಶ್ ಪಾಂಡೆ, ಒರಿಯೆಂಟಲ್ ವಿಮಾ ಸಂಸ್ಥೆ ಎಂಡಿ ಎ.ವಿ.ಗಿರಿಜಾ ಕುಮಾರ್, ಹಣಕಾಸು ಸೇವೆಗಳ ಇಲಾಖೆ ಕಾರ್ಯದರ್ಶಿ, ಸಾರ್ವಜನಿಕ ಉದ್ಯಮಗಳ ಇಲಾಖೆ ಕಾರ್ಯದರ್ಶಿ ಎಫ್ ಎಸ್ ಐಬಿ ಇತರ ಸದಸ್ಯರಾಗಿದ್ದಾರೆ.
ಎಲ್‌ಐಸಿ ನೂತನ ಜೀವನ್ ಕಿರಣ್ ಪಾಲಿಸಿ ಬಿಡುಗಡೆ; ಅರ್ಜಿ ಸಲ್ಲಿಸೋದು ಹೇಗೆ? ಇಲ್ಲಿದೆ
ಪ್ರಸ್ತುತ ಎಲ್ಐಸಿ ನಾಲ್ವರು ಎಂಡಿಗಳನ್ನು ಹೊಂದಿದೆ. ಮಿನಿ ಐಪೆ, ಎಂ. ಜಗನ್ನಾಥ್, ತಬ್ಲೇಷ್ ಪಾಂಡೆ ಹಾಗೂ ಸತ್ಪಲ್ ಭಾನೂ ಎಲ್ಐಸಿ ಎಂಡಿಗಳಾಗಿದ್ದಾರೆ. ಈಗ ಮಿನಿ ಐಪೆ ಅವರ ಸ್ಥಾನಕ್ಕೆ ಆರ್.ದೊರೈಸ್ವಾಮಿ ಅವರನ್ನು ನೇಮಿಸಲಾಗಿದೆ. ಕಳೆದ ತಿಂಗಳಷ್ಟೇ ಕೇಂದ್ರ ಸರ್ಕಾರ ಸತ್ಪಲ್ ಭಾನೂ ಅವರನ್ನು ಎಲ್ ಐಸಿ ಎಂಡಿಯನ್ನಾಗಿ ನೇಮಕ ಮಾಡಿತ್ತು