
ಅಂಶಿ ಪ್ರಸನ್ನಕುಮಾರ್
ಮೈಸೂರು : ‘ಕನ್ನಡಪ್ರಭ’ ಪತ್ರಿಕೆಯಲ್ಲಿ ‘ಬಿತ್ತಿ ಬೆಳೆದು ಬೆಳಕಾದವರು’ ಅಂಕಣದಲ್ಲಿ ಸತತ ನೂರೊಂದು ದಿನ ಪ್ರಕಟವಾದ ಲೇಖನಗಳಲ್ಲಿ ಕಾಣಿಸಿಕೊಂಡ ಸಾಧಕ ರೈತರಿಗೆ ನೂರಾರು ಕರೆಗಳು ಬಂದಿವೆ. ಕೃಷಿಯ ಬಗ್ಗೆ ಮಾಹಿತಿಯ ವಿನಿಮಯ ನಡೆದಿದೆ. ಜೊತೆಗೆ ಅವರ ಸಾಧನೆಗೆ ಬೆನ್ನುತಟ್ಟುವ ಕೆಲಸವಾಗಿದೆ. ಇದರಿಂದ ಸಾಧಕ ರೈತರು ಹರ್ಷಚಿತ್ತರಾಗಿದ್ದಾರೆ.
ಪ್ರತಿದಿನ ರೈತರ ಸಾಧನೆಯ ಜೊತೆಗೆ ಅವರ ಪೂರ್ಣ ವಿಳಾಸ ಹಾಗೂ ಮೊಬೈಲ್ ನಂಬರ್ ಪ್ರಕಟವಾಗುತ್ತಿದ್ದರಿಂದ ಪತ್ರಿಕೆ ಓದಿದ ಕೂಡಲೇ ರೈತರಿಗೆ ಬೆಳಗ್ಗೆಯಿಂದ ರಾತ್ರಿವರೆಗೆ ದೂರವಾಣಿ ಕರೆಗಳ ಸುರಿಮಳೆ. ಸಾಧಕ ರೈತರು ವಾಟ್ಸಾಪ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚುತ್ತಿದ್ದರು. ಇದಲ್ಲದೇ ಕೃಷಿ, ತೋಟಗಾರಿಕೆ, ಪಶುಪಾಲನಾ ಇಲಾಖೆಯ ಅಧಿಕಾರಿಗಳು ಪ್ರತಿನಿತ್ಯ ಈ ಮಾಹಿತಿಯನ್ನು ತಮ್ಮ ತಮ್ಮ ಅಧಿಕೃತ ಗುಂಪುಗಳಲ್ಲಿ ಹಂಚುತ್ತಿದ್ದರು. ಪರಿಣಾಮ ಬೆಳಗ್ಗೆಯಿಂದ ಸಂಜೆವರೆಗೆ ಮೈಸೂರು ಭಾಗದಿಂದ ಮಾತ್ರವಲ್ಲದೇ ನಾಡಿನ ಬೇರೆ ಬೇರೆ ಜಿಲ್ಲೆಗಳಿಂದಲೂ ಫೋನ್‌ಗಳು!. ರೈತರು ಖುಷಿಯಿಂದಲೇ ಮಾಹಿತಿ ಹಂಚಿಕೊಳ್ಳುತ್ತಿದ್ದರು.
‘ನಾವು ಯಾವುದೇ ಮೂಲೆಯ ಹಳ್ಳಿಯಲ್ಲಿ ನಮ್ಮ ಪಾಡಿಗೆ ನಾವು ವ್ಯವಸಾಯ ಮಾಡಿಕೊಂಡಿದ್ದೇವೆ. ಹೀಗಿರುವಾಗ ಪತ್ರಿಕೆಯಲ್ಲಿ ಪರಿಚಯಿಸಿ, ನಮ್ಮನ್ನು ಜನ ಗುರುತಿಸುವಂತೆ ಮಾಡಿದ್ದಾರೆ’ ಎಂದು ಹೆಗ್ಗಂದೂರಿನ ಕಲಾವತಿ ಸುರೇಶ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಈ ಸಾಧಕ ರೈತರ ಪೈಕಿ ಒಬ್ಬರು ಪತ್ರಿಕಾ ಕಚೇರಿಗೆ ಬಂದು, ಕಣ್ಣೀರು ಹಾಕಿದರು. ‘ಕೋವಿಡ್ ಸಂದರ್ಭದಲ್ಲಿ ಮಗಳನ್ನು ಕಳೆದುಕೊಂಡು ದುಃಖದಲ್ಲಿದ್ದೆ. ಆ ಘಟನೆಯನ್ನು ಮರೆಯಲು ಸಾಧ್ಯವೇ ಆಗುತ್ತಿರಲಿಲ್ಲ. ಆದರೆ ಪತ್ರಿಕೆಯಲ್ಲಿ ಲೇಖನ ಬಂದ ನಂತರ ಹಲವಾರು ಮಂದಿ ಕರೆ ಮಾಡಿ, ಅಭಿನಂದಿಸಿದರು. ಇದರಿಂದ ನೋವನ್ನು ಮರೆತು, ಕೃಷಿಯಲ್ಲಿ ಮತ್ತಷ್ಟುಸಾಧನೆ ಮಾಡುವ ತೀರ್ಮಾನಕ್ಕೆ ಬಂದಿದ್ದೇನೆ’ ಎಂದರು.
‘ನಾನು ಕೃಷಿಯಿಂದಲೇ ಬದುಕುಕಟ್ಟಿಕೊಂಡಿದ್ದೇನೆ. ಒಬ್ಬ ಮಗನನ್ನು ಐಎಎಸ್, ಮತ್ತೊರ್ವ ಮಗನನ್ನು ಸಿಎ ತರಬೇತಿಗೆ ಕಳುಹಿಸುತ್ತಿದ್ದೇನೆ. ಇದನ್ನು ಓದಿ, ನೂರಕ್ಕೂ ಹೆಚ್ಚು ಮಂದಿ ಕರೆ ಮಾಡಿ, ಅಭಿನಂದಿಸಿದ್ದು ಖುಷಿ ತಂದಿತು’ ಎಂದು ಮುದ್ದಹಳ್ಳಿಯ ಚಿಕ್ಕಸ್ವಾಮಿ ಹೇಳಿದರು.
‘ನಮ್ಮನ್ನು ಗುರುತಿಸಿ, ಪತ್ರಿಕೆಯಲ್ಲಿ ಬರೆದಿದ್ದರಿಂದ ಹತ್ತಾರು ಮಂದಿ ಕರೆ ಮಾಡಿ, ವಿಚಾರಿಸಿಕೊಂಡರು’ ಎಂದು ಸಾಲೇಕೊಪ್ಪಲಿನ
ಕೆ.ಪಿ. ರಂಗಸ್ವಾಮಿ ಹೇಳಿದರು.
‘ಕೃಷಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಲವಾರು ಮಂದಿ ಫೋನ್ ಮಾಡಿ, ಬೆನ್ನುತಟ್ಟಿದರು’ ಎಂದವರು ಬೊಮ್ಮಲಾಪುರದ ರವಿಸಿದ್ದಯ್ಯ.
--
ಕೆಲ ಪ್ರತಿಕ್ರಿಯೆಗಳು..
ಗುಲಾಬಿ ಬೆಳೆದು ಆದಾಯ ಗಳಿಸುವ ನನ್ನ ಕನಸು ನನಸಾಗಿದೆ, ಧನ್ಯವಾದಗಳು
-ಎಸ್.ಪಿ. ಪ್ರತಾಪ್, ಸುಗ್ಗನಹಳ್ಳಿ
--
ಪತ್ರಿಕೆಯಲ್ಲಿ ಬಂದ ಲೇಖನ ಓದಿ ಮನೆಯವರೆಲ್ಲಾ ಖುಷಿಯಾದರು. ಸಂಬಂಧಿಕರು, ಬೇರೆ ಬೇರೆ ರೈತರು ಕರೆ ಮಾಡಿದರು. ಹೀಗಾಗಿ ಮತ್ತಷ್ಟುಉತ್ಸಾಹದಿಂದ ಕೆಲಸ ಮಾಡಲು ಸ್ಫೂರ್ತಿ ಸಿಕ್ಕಿತು.
- ಎಸ್.ಎಂ. ಉಲ್ಲಾಸ್, ಸಿದ್ದಯ್ಯನಹುಂಡಿ
----
ಇಲವಾಲ ಬಳಿಯ ಯಲೇಚನಹಳ್ಳಿಯಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯದ ಪ್ರಾಧ್ಯಾಪಕರೇ ಮೆಚ್ಚುಗೆ ಸೂಚಿಸಿದರು. ಅವರು ನಿಮಗೆ ಹಾಗೂ ಪತ್ರಿಕೆಗೆ ಅನಂತರ ಧನ್ಯವಾದಗಳನ್ನು ತಿಳಿಸಿದರು.
- ಶಿವಣ್ಣೇಗೌಡ, ಹೆಬ್ಬಾಳು
---------
ಹೃದಯಪೂರ್ವಕ ಧನ್ಯವಾದಗಳು. ಯುವರೈತರನ್ನು ಗುರುತಿಸಿ, ಪತ್ರಿಕೆಯಲ್ಲಿ ಪ್ರಕಟಿಸುವ ಮೂಲಕ ರೈತರಿಗೆ ದಾರಿದೀಪವಾಗಿದ್ದೀರಿ. ರೈತರ ಪರವಾಗಿ ‘ಕನ್ನಡಪ್ರಭ’ ಪತ್ರಿಕೆಗೆ ಅಭಿನಂದನೆಗಳು.
- ಡಿ.ಎಸ್. ರಾಜು, ಹರತಲೆ
--
ಧನ್ಯವಾದಗಳು, ನನ್ನ ಜವಾಬ್ದಾರಿ ಹೆಚ್ಚಿಸಿಬಿಟ್ಟಿರಿ.
- ರಾಜು, ಚಿಕ್ಕಹುಣಸೂರು
--
ರೈತರಿಗೆ ತುಂಬಾ ಉಪಯುಕ್ತವಾದ ಲೇಖನಗಳು
- ಎಚ್.ಎಸ್. ಮೋಹನ್, ಕಿರಿಜಾಜಿ
---------
ರೈತರಿಂದ ಧನ್ಯವಾದಗಳು
ಶಬರಿ, ಅಜಿತ್- ಹನುಮನಾಳು, ಶ್ರುತಿ ಅಂಕರಾಜು- ಲಂಕೆ, ನವೀನ್‌ಕುಮಾರ್- ಹೆಗ್ಗುಡಿಲು, ಆರ್. ಪ್ರತಾಪ್- ರಂಗಯ್ಯನ ಕೊಪ್ಪಲು, ಕಲಾವತಿ ಸುರೇಶ್- ಹೆಗ್ಗಂದೂರು, ಆಶಾ ಶಶಿಕುಮಾರ್- ಬಸಲಾಪುರ, ಬಿ, ವೀರಭದ್ರಪ್ಪ- ಮನುಗನಹಳ್ಳಿ,
ಸಿ. ದಿಲೀಪ್- ಗೋಪಾಲಪುರ, ವೆಂಕಟೇಶ್- ಚಿದರವಳ್ಳಿ. ಕೆ.ಎಂ. ಮೂರ್ತಿ- ಕಿರುನೆಲ್ಲಿ. ಎಚ್.ಆರ್. ನವೀನ್‌ಕುಮಾರ್- ಅಡಗನಹಳ್ಳಿ
ಸತೀಶ್‌ಕುಮಾರ್- ದೇವನೂರು, ಗಣೇಶ್‌ಪ್ರಸಾದ್- ಹುಲ್ಲಹಳ್ಳಿ, ಸಿದ್ದಪ್ಪ- ಹೊಸಕೋಟೆ, ಎ.ಎಸ್. ಹರಿಪ್ರಸಾದ್- ಅರ್ಜುನಹಳ್ಳಿ
ಗೋಪಾಲಗೌಡ- ಮಾಳನಾಯಕನಹಳ್ಳಿ, ಸ್ವಾಮಿಗೌಡ- ತುಂಗದ ಮೇಗಲ ಕೊಪ್ಪಲು, ಕೃಷ್ಣೇಗೌಡ- ಚೋಳನಹಳ್ಳಿ, ಎನ್.ಕೆ. ಜಯಮ್ಮ- ಕೆ. ಕುಪ್ಪರಾಜು, ಹುಲ್ಲಹಳ್ಳಿ, ಮಹದೇವಶೆಟ್ಟಿ- ತಂಡಸಿಪುರ, ಮಣಿಕಂಠ- ಮೂಡಲಕೊಪ್ಪಲು, ಸುಹಾಸ್ ಶ್ರೀಧರ್- ದೇವನೂರು,
ಸುಪ್ರೀತ್- ಅಡಗೂರು, ಸ್ವರೂಪ ರಾಣಿ- ಹಂಪಾಪುರ. ತಮ್ಮಯ್ಯ- ಚೌಡಿಕಟ್ಟೆ, ವಿಶ್ವನಾಥ್- ಆಯರಹಳ್ಳಿ, ರಮೇಶ್,-ಪಡುಕೋಟೆ
ಹೇಮಂತ್‌ಕುಮಾರ್-ಹೊಮ್ಮರಗಳ್ಳಿ, ರಾಯಪ್ಪ-ನಾಗನಹಳ್ಳಿ, ಅನುಸೂಯ ಮಹದೇವ್-ಬಸವರಾಜಪುರ,
ಎಚ್.ಎನ್. ವಿಜಯ್-ಹರದನಹಳ್ಳಿ, ಕುಮಾರಸ್ವಾಮಿ-ಮುದ್ದಹಳ್ಳಿ, ಮಹೇಶ್-ಅಳಗಂಚಿ, ಮಹೇಶ್ ಅರಸ್-ದೊಡ್ಡಬೇಲಾಳು
ಮಹೇಂದ್ರ-ಕಪ್ಪಸೋಗೆ, ಪುರುಷೋತ್ತಮ್-ಹುಸೇನ್‌ಪುರ, ಕುಳ್ಳೇಗೌಡ-ಕಣಗಾಲು, ಪ್ರಶಾಂತ್‌ರಾಜೇ ಅರಸ್-ಬಾವಲಾಳು
-ಬಿ,ಎಸ್. ರವಿಕುಮರ್- ಭೋಗನಹಳ್ಳಿ, ಸಂತೋಷ್, ಮಂಡಿಗನಳ್ಳಿ, ಕೆ.ಎಸ್. ಕೃಷ್ಣೇಗೌಡ- ಮೇಗಲಕೊಪ್ಪಲು, ಮಂಜುನಾಥ್- ಬೆಟ್ಟದಪುರ, ಎಂ. ಆಂಜನೇಯ- ಬೆಟ್ಟದಪುರ, ಶ್ರೀನಿವಾಸ್ ಆಚಾರ್ಯಋು ಯಡಹಳ್ಳಿ, ತೇಜಸ್‌ಕುಮಾರ್- ಅಡಗನಹಳ್ಳಿ
ನಾಗಪ್ಪ- ಮೇಗಳಾಪುರ, ಟಿ.ಎಸ್. ಬಸವರಾಜ್- ತುಂಬಲ, ಎಚ್.ಸಿ. ಗಂಗಾಧರ- ಹೆಮ್ಮಿಗೆ, ಇಂದ್ರೇಶ್- ಎಸ್‌ಕೆಪಿ ಅಗ್ರಹಾರ
ವಸಂತಕುಮಾರ್- ಲಕ್ಷ್ಮೇಪುರ, ಎಂ, ಜಯಪ್ಪ- ಭೈರಾಪುರ, ಕೆ.ಎಸ್. ಕೃಷ್ಣಮೂರ್ತಿ- ಕಣಗಾಲು
ನವೀನ್- ಹಲ್ಲರೆ, ಸಿ.ಪಿ. ರಘು- ಚಿಕ್ಕನೇರಳೆ, ವಸಂತ- ಹನುಮಂತಪುರ. ಜಿ. ನಾಗರಾಜಪ್ಪ- ವೀರಪ್ಪ ಒಡೆಯರಹುಂಡಿ
, ಮಂಜುನಾಥ್- ಹಾರೋಪುರ, ಸಿದ್ದರಾಜು- ಎಲಚಗೆರೆ, ಕೃಷ್ಣೇಗೌಡ- ನಿಲವಾಗಿಲು, ಡಿ.ಎಸ್. ರಾಜು- ಹರತಲೆ, ಯಜಮಾನ್ ಸತ್ಯಪ್ಪ- ಚಿಕ್ಕಕೊಪ್ಪಲು, ಜಯಕುಮಾರ್- ಮೊಬ್ಬಹಳ್ಳಿ, ವಿಜಯಲಕ್ಷ್ಮೇರಾವ್‌ಋು ಮುದ್ದಹಳ್ಳಿ, ಎಲ್.ಪಿ. ರವಿಕುಮಾರ್- ಲಾಲನಹಳ್ಳಿ
ಎಂ. ಗಿರಿಜಾ ಮುರಳಿ- ಕಾಮೇನಹಳ್ಳಿ, ಶಶಿಕುಮಾರ್- ದೊಡ್ಡತುಪ್ಪೂರು, ಎಚ್.ಎನ್. ಪ್ರಭುದೇವ- ಹೆಬ್ಬಾಳು ಕೊಪ್ಪಲು, ಮಹೇಶ್- ಕರಿಮುದ್ದನಹಳ್ಳಿ, ಟಿ.ಎಂ. ಪ್ರಸಾದ್- ತೆಂಕಹಳ್ಳಿ, ಸಿದ್ದೇಗೌಡ- ಯಲಚನಹಳ್ಳಿ, ಪುಟ್ಟೇಗೌಡ- ಚಿಕ್ಕವಡ್ಡರಗುಡಿ,
ನಿಜಗುಣ- ಕಾಟ್ವಾಳು, ಚಿಕ್ಕಬೋರೇಗೌಡ- ಗೊಲ್ಲನಬೀಡು, ಎಸ್.ವಿ. ವೆಂಕಟೇಶ್- ಸರಗೂರು, ಟಿ. ತಂಗಚ್ಚನ್ ಚಂಪೂಟಿ- ಹಾಡ್ಯಹುಂಡಿ.