ಸ್ತ್ರೀ ಸ್ವಾವಲಂಬಿ ಜೀವನ ನಡೆಸುವಂತಾಗಲಿ: ಉದಯ್‌

By Kannadaprabha News  |  First Published Mar 7, 2023, 5:23 AM IST

ಮಹಿಳೆಯರ ಸ್ವಾವಲಂಬಿ ಜೀವನ ನಿರ್ವಹಣೆಗೆ ಮಹಿಳಾ ಸಬಲೀಕರಣಗಳದಂತಹ ಕಾರ್ಯಕ್ರಮಗಳು ಅವಶ್ಯವಾಗಿದ್ದು ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಜ್ಞಾನ ವಿಕಾಸ ಕೇಂದ್ರದ ಕಾರ್ಯಕ್ರಮಗಳು ಮಹಿಳೆಯರ ಸ್ವಾವಲಂಬಿ ಮತ್ತು ಸ್ವಾಭಿಮಾನಿ ಬದುಕಿಗೆ ಸಹಕಾರಿಯಾಗಿದೆ ಎಂದು ಯೋಜನೆಯ ತಾಲೂಕು ಯೋಜನಾಧಕಾರಿ ಉದಯ್‌ ತಿಳಿಸಿದರು.


 ತಿಪಟೂರು :  ಮಹಿಳೆಯರ ಸ್ವಾವಲಂಬಿ ಜೀವನ ನಿರ್ವಹಣೆಗೆ ಮಹಿಳಾ ಸಬಲೀಕರಣಗಳದಂತಹ ಕಾರ್ಯಕ್ರಮಗಳು ಅವಶ್ಯವಾಗಿದ್ದು ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಜ್ಞಾನ ವಿಕಾಸ ಕೇಂದ್ರದ ಕಾರ್ಯಕ್ರಮಗಳು ಮಹಿಳೆಯರ ಸ್ವಾವಲಂಬಿ ಮತ್ತು ಸ್ವಾಭಿಮಾನಿ ಬದುಕಿಗೆ ಸಹಕಾರಿಯಾಗಿದೆ ಎಂದು ಯೋಜನೆಯ ತಾಲೂಕು ಯೋಜನಾಧಕಾರಿ ಉದಯ್‌ ತಿಳಿಸಿದರು.

ತಾಲೂಕಿನ ಸಾರ್ಥವಳ್ಳಿ ವಲಯದ ಹಾಲೇನಹಳ್ಳಿ ಶ್ರೀ ಕರಿಯಮ್ಮದೇವಿ ಜ್ಞಾನ ವಿಕಾಸ ಕೇಂದ್ರದಡಿಯಲ್ಲಿ ಹೊಲಿಗೆ ತರಬೇತಿಯ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರಿಗಾಗಿಯೇ ತಾಲೂಕಿನಲ್ಲಿ ಜ್ಞಾನ ವಿಕಾಸ ಕೇಂದ್ರಗಳನ್ನು ತೆರೆದು ಹೊಲಿಗೆ ತರಬೇತಿ ಸೇರಿದಂತೆ ವಿವಿಧ ಕೌಶಲ್ಯಗಳ ಬಗ್ಗೆ ತಿಳಿಸಿಕೊಡಲಾಗುತ್ತಿದೆ. ಕುಟುಂಬ ನಿರ್ವಹಣೆಗೆ ಮಹಿಳೆಯರು ಸಬಲರಾಗಬೇಕು. ಸ್ವಾವಲಂಬಿಗಳಾಗಿ ಸಮಾಜದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಇಂತಹ ತರಬೇತಿಗಳು ಅತಿ ಮುಖ್ಯ ಪಾತ್ರವಹಿಸುತ್ತವೆ. ಆದ್ದರಿಂದ ಇಂತಹ ಅವಕಾಶಗಳನ್ನು ಮಹಿಳೆಯರು ಹೆಚ್ಚಿನ ರೀತಿಯಲ್ಲಿ ಉಪಯೋಗಿಸಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು. ಈಗಾಗಲೇ ಜ್ಞಾನ ವಿಕಾಸ ಕೇಂದ್ರದಲ್ಲಿ ತರಬೇತಿ ಪಡೆದಿರುವ ಮಹಿಳೆಯರು ಪುನಃ 5 ದಿನಗಳ ಕಾಲ ತರಬೇತಿ ಕೇಂದ್ರ ಮೈಸೂರಿನ ಕೌಶಿಲ್ಯಾಭಿವೃದ್ಧಿಯಡಿಯಲ್ಲಿ ಪಡೆಯಬಹುದಾಗಿದ್ದು ಇದರಿಂದ ಸ್ವ ಉದ್ಯೋಗ ಹೊಂದಬಹುದಾಗಿದೆ ಎಂದರು.

Tap to resize

Latest Videos

ಸಾಕ್ಷರತಾ ಕೇಂದ್ರದ ಆಪ್ತ ಸಮಾಲೋಚಕರಾದ ಪಿ. ರೇಖಾ, ವೀಣಾ, ಮೇರಿ ಥಾಮಸ್‌ರವರು ಹೊಲಿಗೆ ತರಬೇತಿಯಲ್ಲಿ ಕಲಿತಿರುವವರು ಸ್ವ-ಉದ್ಯೋಗಗಳನ್ನು ಮಾಡಿಕೊಂಡು ಬೇರೆಯವರಿಗಿಂತ ಮಾದರಿಯಾಗಬೇಕಾಗಿದ್ದು ಈ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಹಿಳೆಯರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಟೈಲರಿಂಗ್‌ ಶಿಕ್ಷಕಿ ಶೈಲ, ಮೇಲ್ವಿಚಾರಕ ಪ್ರದೀಪ್‌ ರೈ, ಕೇಂದ್ರದ ಅಧ್ಯಕ್ಷ ಮಹಾಲಕ್ಷ್ಮಿ, ಸಮನ್ವಯಾಧಿಕಾರಿ ಎಂ.ಡಿ. ಪದ್ಮಾವತಿ, ಸೇವಾಪ್ರತಿನಿಧಿ ನೇತ್ರಾವತಿ, ಕಾರ್ತೀಕ್‌ ಸೇರಿದಂತೆ ಕೇಂದ್ರದ ಸದಸ್ಯರು, ತರಬೇತಿ ಪಡೆದ ಮಹಿಳೆಯರಿದ್ದರು.

ಕಾಶ್ಮೀರದಲ್ಲಿ ಕೆಫೆ ಆರಂಭಿಸಿ ಯಶಸ್ವಿ

ಇಂದಿನ ಸಮಯದಲ್ಲಿ ಮಹಿಳೆಯರು ಯಾವ ಕ್ಷೇತ್ರದಲ್ಲೂ ಹಿಂದೆ ಬಿದ್ದಿಲ್ಲ. ಮಹಿಳೆಯರು ತಮ್ಮ ಕೆಲಸವನ್ನು ಸಂಪೂರ್ಣ ಸಮರ್ಪಣಾ ಮನೋಭಾವದಿಂದ ಮಾಡ್ತಿದ್ದಾರೆ. ಕಠಿಣ ಪರಿಶ್ರಮದ ಜೊತೆಗೆ ಕೆಲಸದ ಮೇಲೆ ಅವರಿಗಿರುವ ಆಸಕ್ತಿ ಅವರನ್ನು ಎಲ್ಲಾ ಕ್ಷೇತ್ರಗಳಲ್ಲಿ  ಮುನ್ನಡೆಯುವಂತೆ ಮಾಡಿದೆ. ಮನೆ ಕೆಲಸದ ಜೊತೆಗೆ ಮಿಲಿಟರಿಯವರೆಗೆ ಎಲ್ಲ ಕಡೆ ಹೆಣ್ಣು ಸಾಧಿಸಿ ತೋರಿಸಿದ್ದಾಳೆ. ಬರೀ ಅಕ್ಷರಸ್ಥ ಮಹಿಳೆ ಮಾತ್ರವಲ್ಲ ಅನೇಕ ಅನಕ್ಷರಸ್ಥ ಮಹಿಳೆಯರು ಕೂಡ ಸ್ವಂತ ಉದ್ಯೋಗ ಶುರು ಮಾಡಿ ಯಶಸ್ವಿಯಾಗಿದ್ದಾರೆ. ಮುಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ. 

ಹಳ್ಳಿಯಾಗ್ಲಿ, ದೆಹಲಿಯಾಗಿ ದುಡಿಯೋಕೆ ಜಾಗ ಸಿಕ್ಕಿದ್ರೆ ಸಾಕು ಎನ್ನುವ ಮನೋಭಾವ ಮಹಿಳೆ (Country)ಯರದ್ದು. ಕಾಶ್ಮೀರ (Kashmir) ದಂತಹ ಪ್ರದೇಶದಲ್ಲಿ ಒಬ್ಬ ಹೆಣ್ಣು ಮಗಳು ಮನೆಯಿಂದ ಹೊರಗೆ ಬರೋದೇ ಕಷ್ಟ. ಅಂಥ ಸ್ಥಿತಿಯಲ್ಲೂ ಎಲ್ಲವನ್ನು, ಎಲ್ಲರನ್ನು ಮೆಟ್ಟಿನಿಂತು ಕಾಶ್ಮೀರದಲ್ಲೊಂದು ಕೆಫೆ (Cafe) ಶುರು ಮಾಡಿದ್ದಾಳೆ ಈ ಯುವತಿ. ನಾವಿಂದು ಕಾಶ್ಮೀರದಲ್ಲಿ ಕೆಫೆ ಆರಂಭಿಸಿದ ಮೆಹ್ವಿಶ್ ಮೆಹನಾಜ್ ಜರ್ಗರ್ (Mehwish Mehnaz Zargar) ಕಥೆಯನ್ನು ನಿಮಗೆ ತಿಳಿಸ್ತೇವೆ.

ಕಣ್ಣೆದುರಿಗೇ ಮಕ್ಕಳು ಕಿಡ್ನಾಪ್ ಆದ್ರೆ? ಅಮ್ಮನ ನೋವು, ಹೋರಾಟ ಹೇಳೋ ಮೂವಿ MRS CHATTERJEE VS NORWAY

ಮೆಹ್ವಿಶ್ ಮೆಹನಾಜ್ ಜರ್ಗರ್ ಯಾರು? : ಕಾಶ್ಮೀರದಲ್ಲಿ ಕೆಫೆ ಶುರು ಮಾಡಿ, ಸಾಧಿಸಿ ತೋರಿಸಿದ ಮಹಿಳೆ ಮೆಹ್ವಿಶ್. ಮೆಹ್ವಿಶ್ ಮೆಹ್ನಾಜ್ ಜರ್ಗರ್ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ. ಶ್ರೀನಗರದಲ್ಲಿ ಅವರ ಸ್ವಂತ ಕೆಫೆ ಆರಂಭವಾಗಿದೆ. ಈ ಕೆಫೆಗೆ ಮೆಹ್ವಿಶ್ ಮೆಹ್ನಾಜ್, ಮಿ ಆಂಡ್ ಯು ಎಂದು ಹೆಸರಿಟ್ಟಿದ್ದಾರೆ.  ಮೆಹ್ವಿಶ್ ಮೆಹ್ನಾಜ್ ತಮ್ಮ 25ನೇ ವಯಸ್ಸಿನಲ್ಲಿಯೇ ಈ ಕೆಫೆಯನ್ನು ಶುರು ಮಾಡಿದ್ದಾರೆ. ಈಗ ಈ ಕೆಫೆ ಗ್ರಾಹಕರನ್ನು ಸೆಳೆಯುತ್ತಿದೆ. 

ಶ್ರೀನಗರದಲ್ಲಿ ಮೊದಲ ಮಹಿಳಾ ಕೆಫೆ ಇದು : ಮೊದಲೇ ಹೇಳಿದಂತೆ ಭಯೋತ್ಪಾದನೆ, ಪ್ರತ್ಯೇಕತಾವಾದದಂತಹ ಸಮಸ್ಯೆಗಳ ಪ್ರಾಬಲ್ಯವಿರುವ ಪ್ರದೇಶ ಕಾಶ್ಮೀರ. ಇಲ್ಲಿ ಮಹಿಳೆಯರು ಒಂಟಿಯಾಗಿ ಹೊರಗೆ ಬೀಳಲು ಹೆದರುತ್ತಾರೆ. ಆದ್ರೆ ಈಗಿನ ದಿನಗಳಲ್ಲಿ ಕಾಶ್ಮೀರದ ಸ್ಥಿತಿ ಸುಧಾರಿಸಿದೆಯಾದ್ರೂ ಮಹಿಳೆಗೆ ಇಲ್ಲೊಂದು ಕೆಫೆ ಶುರು ಮಾಡೋದು ಸುಲಭವಲ್ಲ. ಆದ್ರೆ ಮೆಹ್ವಿಶ್ ಮೆಹನಾಜ್ ತನ್ನದೇ ಆದ ಕೆಫೆಯನ್ನು ಇಲ್ಲಿ ತೆರೆದಿದ್ದಾರೆ. ಇದು ಶ್ರೀನಗರದಲ್ಲಿ ಮೊದಲ ಮಹಿಳಾ ಕೆಫೆಯಾಗಿದೆ. ಮೆಹ್ವಿಶ್ ಯಾವುದೇ ಭಯವಿಲ್ಲದೆ ಈ ಕೆಫೆ ನಡೆಸುತ್ತಿರುವುದು ಹೆಮ್ಮೆಯ ಸಂಗತಿ. 

click me!